ಮಂಗಳೂರು : ಅರಣ್ಯ ರಕ್ಷಣೆ ಯ ಮೂಲಕ ನಮ್ಮ ರಕ್ಷಣೆ ದೇಶದ ರಕ್ಷಣೆ ಮಾಡುತ್ತಿರುವ ಅರಣ್ಯ ರಕ್ಷಕರಿಗೆ ಹೆಚ್ಚಿನ ಗೌರವ ದೊರೆಯ ಬೇಕಾಗಿದೆ ಅರಣ್ಯ ಸಂಪತ್ತಿನ ಸಂರಕ್ಷಣೆ ನಮ್ಮ ಜವಾಬ್ದಾರಿ ಯಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ ಅಗರ್ವಾಲ್ ತಿಳಿಸಿದ್ದಾರೆ.
ಅವರು ಇಂದು ನಗರದ ಪಡೀಲ್ ನಲ್ಲಿರುವ ಅರಣ್ಯ ಭವನದಲ್ಲಿ ಅರಣ್ಯ ಹುತಾತ್ಮಸ್ಮಾರಕ ಕ್ಕೆ ಗೌರವ ಸಲ್ಲಿಸಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಖಾಕಿ ಸಮವಸ್ತ್ರಧಾರಣೆಯಿಂದ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಮೂಲಕ ಹಲವು ಅಧಿಕಾರಿಗಳು ನಮಗೆ ಮಾದರಿಯಾಗಿದ್ದಾರೆ. ದಂತ ಚೋರ ವೀರಪ್ಪನ್ ಕಾರ್ಯಾಚರಣೆ ಯಲ್ಲಿ ಬಲಿಯಾದ ಅಧಿಕಾರಿಗಳು ಇದ ಕ್ಕೊಂದು ಉದಾಹರಣೆಯಾಗಿದೆ ಎಂದು ಕಮೀಷನರ್ ಅಗರ್ವಾಲ್ ತಿಳಿಸಿದ್ದಾರೆ.
ಪರಿಸರಕ್ಕಾಗಿ ಪ್ರಾಣ ತ್ಯಾಗ ಮಾಡಿದ ನನ್ನ ಊರಿನ ಜನರ ನೆನಪಿನೊಂದಿಗೆ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ :-ಸುಮಾರು 300 ವರ್ಷಗಳ ಹಿಂದೆ ಜೋದ್ ಪುರದ ರಾಜ ಅಭಯ ಸಿಂಗ್ ಕೆಲವು ಮರಗಳನ್ನು ಕಡಿ ಯಲು ಆಜ್ಞೆ ಮಾಡುತ್ತಾನೆ.ಅಲ್ಲಿನ ಪರಿಸರ ಪ್ರೇಮಿಗಳಾದ ಬಿಷ್ಣೋಯಿಗಳು ಅದನ್ನು ವಿರೋಧಿ ಸುತ್ತಾರೆ.ಬಳಿಕ ರಾಜನ ಸೈನಿಕರು ಮರಕಡಿಯಲು ಬಂದಾಗ ಮರವನ್ನು ಅಪ್ಪಿಕೊಂಡು ತಮ್ಮ ಪ್ರಾಣವನ್ನು ಬಲಿಕೊಡುವ ಪ್ರಸಂಗ ನಡೆದಿದೆ. ನಾನೂ ಅದೇ ಊರಿಗೆ ಸೇರಿದವನು. ದೇಶದ ಪರಿಸರ ಅರಣ್ಯ ಸಂಪತ್ತು ರಕ್ಷಣೆ ಮಾಡುವ ಹೊಣೆಗಾರಿಕೆ ಎಲ್ಲಾ ಪ್ರಜೆಗಳಿಗೂ ಸೇರಿದೆ ಎಂದು ಕಮೀಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಸಮಾರಂಭದಲ್ಲಿ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯ್ಂತ್,ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವಿ.ಕರಿಕ್ಕಲ್ಲನ್,ಗೇರು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕಮಲ ಕರಿಕ್ಕಲ್ಲನ್, ಆದಾಯ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕ ಮಣಿಕಂಠನ್, ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕ ಸರ್ವೇಶ್,ಉಪ ಅರಣ್ಯ ಸಂರಕ್ಷಣಾ ಧಿಕಾರಿ ಅಂತೋನಿ ಎಸ್ ಮರಿಯಪ್ಪ, ಕ್ಲಿಫರ್ಡ್ ಲೋಬೊ, ಉಪ ಅರಣ್ಯ ಸಂರಕ್ಷಣಾ ಧಿಕಾರಿ ಕರಾವಳಿ ನಿಯಂತ್ರಣ ವಲಯ ಡಾ.ದಿನೇಶ್, ಎಸಿಎಫ್ ಶ್ರೀ ಧರ್, ಮೊದಲಾದವರು ವೇದಿಕೆ ಯಲ್ಲಿ ಉಪ ಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅರಣ್ಯ ರಕ್ಷಣಾ ಪಡೆಯ ಸಿಬ್ಬಂದಿಗಳು ಅಧಿಕಾರಿಗಳಿಂದ ಹುತಾತ್ಮ ಸ್ಮಾರಕಕ್ಕೆ ಗೌರವ ಅರ್ಪಣೆ ನಡೆಯಿತು. ಸಿಬ್ಬಂದಿ ಗಳಿಂದ ಗಾಳಿಯಲ್ಲಿ ಗುಂಡು ಸಿಡಿಸಿ ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English