ಪುರಾಣ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಶ್ರಾವಣ ಅಮವಾಸ್ಯೆ ತೀರ್ಥ ಸ್ನಾನ

9:19 PM, Friday, September 15th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಪುರಾಣ ಪ್ರಸಿದ್ಧ ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ಕಡಲಲ್ಲಿ ಸಹಸ್ರಾರು ಮಂದಿ ಭಕ್ತರು ಪವಿತ್ರ ಶ್ರಾವಣ ಅಮವಾಸ್ಯೆ ಪ್ರಯುಕ್ತ ತೀರ್ಥ ಸ್ನಾನ ಮಾಡಿದರು.

ಸಮುದ್ರ ಸ್ನಾನದ ಮೊದಲು ಭಕ್ತಾಧಿಗಳು ಕಡಲಿಗೆ ಅಡಿಕೆ, ವೀಳ್ಯವನ್ನ ಸಮರ್ಪಿಸಿ ತೀರ್ಥ ಸ್ನಾನದ ಬಳಿಕ ಸೋಮನಾಥನಿಗೆ ವಿಶೇಷ ಸೇವೆಗಳನ್ನು ನೀಡಿತ್ತಾರೆ

ಸೋಮೇಶ್ವರದ ಸೋಮನಾಥ ದೇವಸ್ಥಾನದ ಉತ್ಸವಗಳಲ್ಲಿ ಶ್ರಾವಣ ಅಮವಾಸ್ಯೆಯ ಪವಿತ್ರ ಸಮುದ್ರ ತೀರ್ಥ ಸ್ನಾನವು ಪ್ರಾಮುಖ್ಯತೆ ಪಡೆದಿದೆ.

ಶ್ರಾವಣ ಅಮವಾಸ್ಯೆಯಂದು ಸೋಮೇಶ್ವರದ ಕಡಲ ತೀರಕ್ಕೆ ಸಹಸ್ರಾರು ಭಕ್ತಾಧಿಗಳು ಬಂದು ತೀರ್ಥ ಸ್ನಾನ ಮಾಡುತ್ತಾರೆ.ಇಲ್ಲಿನ ವಾಡಿಕೆ ಪ್ರಕಾರ ಮೊದಲು ದೇವಸ್ಥಾನದ ಗದಾ ತೀರ್ಥ ಕೆರೆಯ ಹಿನ್ನೀರಿನಲ್ಲಿ ಸ್ನಾನಗೈದು ಬಳಿಕ ಸಮುದ್ರ ಸ್ನಾನ ಮಾಡಿದರೆ ಪಾಪ ನಾಶವಾಗಿ ಪುಣ್ಯ ಪ್ರಾಪ್ತಿಯಾಗುವುದೆಂಬ ನಂಬಿಕೆಯಿದೆ. ವೈಜ್ನಾನಿಕ ದೃಷ್ಟಿಯಲ್ಲೂ ಕೆರೆ ಸ್ನಾನದ ಬಳಿಕ ಸಮುದ್ರ ಸ್ನಾನಗೈದರೆ ಉಪ್ಪುನೀರಿಗೆ ಚರ್ಮ ವ್ಯಾಧಿಗಳು ದೂರ ಆಗುತ್ತವೆ ಎಂಬ ನಂಬಿಕೆಯಿಂದ ಅನೇಕ ಭಕ್ತಾಧಿಗಳು ಇಲ್ಲಿ ಬಂದು ತೀರ್ಥ ಸ್ನಾನಗೈಯುತ್ತಾರೆ.

ಸಮುದ್ರದಲ್ಲಿ ತೀರ್ಥ ಸ್ನಾನ ಮಾಡುವ ಸಂದರ್ಭ ಯಾವುದೇ ಅನಾಹುತಗಳು ನಡೆಯದಂತೆ ನುರಿತ ಜೀವರಕ್ಷಕ ಸಿಬ್ಬಂದಿಗಳು ಕಣ್ಗಾವಲು ಇಟ್ಟಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English