ಮೆಗಾ ಮೀಡಿಯಾ “ಸಾಂಸ್ಕೃತಿಕ ಹಬ್ಬ 2013” ನಗರದ ಪುರಭವನದಲ್ಲಿ ಜನವರಿ 18 ಶುಕ್ರವಾರ ಸಂಜೆ 4:30ಕ್ಕೆ

5:38 PM, Thursday, January 10th, 2013
Share
1 Star2 Stars3 Stars4 Stars5 Stars
(No Ratings Yet)
Loading...

Mega mediaಮಂಗಳೂರು : ಮೆಗಾ ಮೀಡಿಯಾ ತನ್ನ 10 ನೇ ವರ್ಷಾಚರಣೆಯ ಪ್ರಯುಕ್ತ ನಗರದ ಪುರಭವನದಲ್ಲಿ ಜನವರಿ 18 ಶುಕ್ರವಾರ ಸಂಜೆ 4:30ಕ್ಕೆ ಮೆಗಾ ಮೀಡಿಯಾ “ಸಾಂಸ್ಕೃತಿಕ ಹಬ್ಬ 2013” ಮನರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಮನೋರಂಜನಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಮೆಗಾ ಮೀಡಿಯಾ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಹಾಗೂ ಸಭಾಕಾರ್ಯಕ್ರಮ ನಡೆಯಲಿದೆ ಎಂದು ಮೆಗಾ ಮೀಡಿಯಾ ನ್ಯೂಸ್ ನ ಪ್ರದಾನ ಸಂಪಾದಕ ಶಿವಪ್ರಸಾದ್ ಅವರು ಇಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಮೆಗಾಮೀಡಿಯಾ 2002 ರಲ್ಲಿ ಆರಂಭಗೊಂಡು ಡಿಸೆಂಬರ್ 2012 ಕ್ಕೆ 10 ವರ್ಷಗಳನ್ನು ಪೂರೈಸಿದೆ. ಸುದ್ದಿ, ಪ್ರಚಾರ ಹಾಗೂ ಜಾಹೀರಾತು ವಿಭಾಗದಲ್ಲಿ ತೊಡಗಿಸಿಕೊಂಡಿರುವ ಮೆಗಾಮೀಡಿಯಾ ಅಂತರ್ಜಾಲ ಮಾದ್ಯಮ 10 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು. ಮಂಗಳೂರಿನಿಂದ ಕೇಂದ್ರೀಕೃತವಾಗಿ ದೇಶ ವಿದೇಶದಲ್ಲಿ ಪ್ರಸರಣ ಹೊಂದಿದೆ. ಪ್ರತಿ ದಿನ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಮನೊರಂಜನಾ ಹಾಗೂ ಸಾಧಕರಿಗೆ ಪ್ರೋತ್ಸಾಹ ನೀಡುವ ಎಲ್ಲ ಸುದ್ದಿಗಳನ್ನು ನೀಡುತ್ತಿದೆ. ವಿಶ್ವವ್ಯಾಪಿ ದಿನವಹಿ 25 ಸಾವಿರಕ್ಕೂ ಮಿಕ್ಕ ಒದುಗರು ನಮ್ಮೊಂದಿಗಿದ್ದಾರೆ. ಅದಕ್ಕಾಗಿಯೇ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು, ಅಲ್ಲದೆ ರಾಷ್ಡ್ರದ ಪ್ರಮುಖ ನಗರಗಳಿಂದ ಓದುಗರ ಅಭೂತ ಪೂರ್ಣ ಪ್ರತಿಕ್ರಿಯೆಗಳು ಬರುತ್ತಾ ಇವೆ. ಭಾರತೀಯ ಮೂಲದ ವಿದೇಶಿಯರು. ದುಬೈ, ಮಸ್ಕತ್, ಬೆಹರೈನ್, ಸೌದಿ ಅರೇಬಿಯ, ಒಮನ್, ಯು,ಎಸ್,ಎ, ದಕ್ಷಿಣ ಆಫ್ರಿಕಾ, ಮೊದಲಾದ ರಾಷ್ಟ್ರಗಳಿಂದ ಪ್ರತಿಕ್ರಿಯನ್ನು ನೀಡುತ್ತಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ನಗೆ ಹಬ್ಬ ಹಾಗೂ ಪದತಾಳದ ಮನರಂಜನೆ

ಮಂಗಳೂರು ಕೇಂದ್ರೀಕೃತವಾಗಿ ಕಾರ್ಯಚರಿಸುವ ನಮ್ಮ ಸಂಸ್ಥೆ ಮೆಗಾ ಮೀಡಿಯಾ “ಸಾಂಸ್ಕೃತಿಕ ಹಬ್ಬ 2013” ನ್ನು ಮೊದಲ ಬಾರಿಗೆ ಆಯೋಜಿಸಿದ್ದು ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯನಟ ಟೆನ್ನಿಸ್ ಕೃಷ್ಣ ಹಾಸ್ಯ ತುಣುಕುಗಳ ಜೊತೆ ಹಾಡಲಿದ್ದಾರೆ. ಜಿಲ್ಲೆಯ ಜನಪದ ಹಾಡುಗಾರಿಕೆಯಲ್ಲಿ ಹೆಸರು ಪಡೆದ `ವಾ ಪೊರ್ಲುಯ, ಖ್ಯಾತಿಯ ಮೈಮ್ ರಾಮದಾಸ್ ಬಳಗದ `ಪದತಾಳ’ ಸಂಗೀತ ಕಾರ್ಯಕ್ರಮ ನಡೆಯಲಿದೆ. ಇದು ಜನಪದ ವಾದ್ಯಗಳನ್ನು ಬಳಸಿ ಹಾಡುವ ನೇರ ಕಾರ್ಯಕ್ರಮವಾಗಿರುತ್ತದೆ. ಆದಿತ್ಯನಾರಾಯಣ್ ಇನ್ನವಳ್ಳಿ ಹಾಡಲಿದ್ದಾರೆ. ಇದು ಸಂಜೆ 4:30 ರಿಂದ 5:45 ರ ವರೆಗೆ ನಡೆಯಲಿದೆ.

ಸಭಾ ಕಾರ್ಯಕ್ರಮ, ಮೆಗಾಮೀಡಿಯಾ ಪತ್ರಿಕೋದ್ಯಮ ಪ್ರಶಸ್ತಿ, ಸಾಧಕರಿಗೆ ಸನ್ಮಾನ

ಅಧ್ಯಕ್ಷತೆ : ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾಜಿ ಅಧ್ಯಕ್ಷರು ಕರ್ನಾಟಕ ಸಾಹಿತ್ಯ ಪರಿಷತ್, ಉದ್ಘಾಟನೆ : ಗಣೇಶ್ ರಾವ್ ಅಧ್ಯಕ್ಷರು : ಕರಾವಳಿ ಕಾಲೇಜು ಮಂಗಳೂರು, ಸಂಚಿಕೆ ಬಿಡುಗಡೆ : ಮಹಾಭಲೇಶ್ವರ ಭಟ್ ಜನರಲ್ ಮ್ಯಾನೇಜರ್ ಕರ್ನಾಟಕ ಬ್ಯಾಂಕ್, ಪ್ರದಾನ ಕಛೇರಿ ಮಂಗಳೂರು,

ಮುಖ್ಯ ಅತಿಥಿಗಳು : ಕೃಷ್ಣ ಜೆ ಪಾಲೆಮಾರ್ ಮಾಜಿ ಉಸ್ತುವಾರಿ ಸಚಿವರು, ದ.ಕ. ಜಿಲ್ಲೆ, ನಳಿನ್ ಕುಮಾರ್ ಕಟೀಲು ಸಂಸದರು, ಮಂಗಳೂರು ಲೋಕಸಭಾ ಕ್ಷೇತ್ರ, ಮೋನಪ್ಪ ಭಂಡಾರಿ ವಿಧಾನಪರಿಷತ್ ಸದಸ್ಯರು, ಎ. ಸದಾನಂದ ಶೆಟ್ಟಿ ಅಧ್ಯಕ್ಷರು, ಶ್ರೀ ದೇವಿ ಶಿಕ್ಷಣ ಸಂಸ್ಥೆ, ಮಂಗಳೂರು. ಸುರೇಶ್ಚಂದ್ರ ಶೆಟ್ಟಿ ಎಚ್.ಎಂ.ಎಸ್. ರಾಜ್ಯ ಅಧ್ಯಕ್ಷರು, ಜೆ.ಆರ್ ಲೋಬೊ ಮಾಜಿ ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ, ಬಿ. ನಾಗರಾಜ ಶೆಟ್ಟಿ ಜೆಡಿಯಸ್ ರಾಜ್ಯಾಧ್ಯಕ್ಷರು. ಪ್ರದೀಪ್ ಕುಮಾರ್ ಕಲ್ಕೂರ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ ದ.ಕ ಜಿಲ್ಲೆ, ಉಮಾನಾಥ ಕೋಟ್ಯಾನ್ ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮೆ, ಲಕ್ಮೀ ಕುಮಾರನ್ ಡೆಪ್ಯೂಟಿ ಜನರಲ್ ಮೆನೇಜರ್, ಎಂ.ಆರ್.ಪಿ.ಎಲ್ (ಓಎಸ್ಡಿ), ಡಾ. ಹಂಸರಾಜ್ ಆಳ್ವ ಪಿಸಿಶಿಯನ್ ವಿನಯ ಹಾಸ್ಪಿಟಲ್, ಮಂಗಳೂರು, ಡಾ. ಹರೀಶ್ ಕೆ. ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ, ಹರೀಶ್ ರೈ ಪಿ.ಬಿ. ಅಧ್ಯಕ್ಷರು, ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು, ಅಭಿಷೇಕ್ ಗೋಯಲ್ ಪೊಲೀಸ್ ಅಧೀಕ್ಷಕರು, ದ.ಕ. ಜಿಲ್ಲೆ, ಟೆನ್ನಿಸ್ ಕೃಷ್ಣ ಖ್ಯಾತ ಹಾಸ್ಯ ನಟರು, ಕನ್ನಡ ಚಿತ್ರರಂಗ, ಅರ್ಜುನ್ ಕಾಪಿಕಾಡ್ ನಾಯಕ ನಟ, ತೆಲಿಕೆದ ಬೊಳ್ಳಿ ತುಳು ಚಲನಚಿತ್ರ.

Mega mediaಸನ್ಮಾನಿತರು

ಗೋವಿಂದ ಗುರುಸ್ವಾಮಿ ಸ್ಥಾಪಕರು, ಶ್ರೀ ದುರ್ಗಾ ದೇವಿ ದೇವಸ್ಥಾನ ತೌಡುಗೋಳಿ : ಇವರು 1980 ರಲ್ಲಿ ಕರ್ನಾಟಕ ಕೇರಳ ಗಡಿಪ್ರದೇಶವಾದ ತೌಡುಗೋಳಿಯಲ್ಲಿ ಶ್ರೀ ದುರ್ಗಾ ದೇವಿ ದೇವಸ್ಥಾನ ಹಾಗೂ ಅಯ್ಯಪ್ಪ ಮಂದಿರವನ್ನು ಸ್ಥಾಪಿಸಿ 36 ಬಾರಿ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಸಾವಿರಕ್ಕೂ ಮಿಕ್ಕಿ ಅಯ್ಯಪ್ಪ ವೃತದಾರಿಗಳು ಇವರಲ್ಲಿ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ.

ಆದಿತ್ಯನಾರಾಯಣ್ ಇನ್ನವಳ್ಳಿ, ಸಾಹಿತಿ, ಸಂಗೀತ ನಿರ್ದೇಶಕರು, ಕನ್ನಡ, ಹಿಂದಿ ಚಿತ್ರರಂಗ : ಇವರು ಮೂಲತ ಕೊಣಾಜೆಯ ಇನೋಳಿಯವರಾಗಿದ್ದು ಸಾಹಿತಿ ಹಾಗೂ ಸಂಗೀತ ನಿರ್ದೇಶಕರು. ಕನ್ನಡದಲ್ಲಿ `ಪಂಗನಾಮ’ ಚಿತ್ರಕ್ಕೆ ಸಾಹಿತ್ಯ, ಸಂಗೀತ ನಿರ್ದೇಶನ ಹಾಗೂ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಹಿಂದಿಯಲ್ಲಿ ಗಂಗಾಜಲ್ ಹಾಗೂ ರಾಜನೀತಿ ಸಿನೆಮಾದಲ್ಲಿ ಕೆಲಸಮಾಡಿದ್ದಾರೆ. ಪ್ರಾಣಿಪ್ರಿಯ ರಾಗಿದ್ದು ಇಂಡಿಯನ್ ಚವರೋಟಿಯನ್ (mouse deer) ಸಂಶೋದನೆ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ ರವರ ಹೊಸ ಚಿತ್ರವೊಂದರ ಸಿದ್ದತೆಯಲ್ಲಿ.

ಸತೀಶ್ ಇರಾ ಛಾಯಚಿತ್ರಗ್ರಾಹಕರು, ಇವರು ಮೂಲತ ಬಂಟ್ವಾಳ ತಾಲೂಕಿನ ಇರಾ ಗ್ರಾಮದವರಾಗಿದ್ದು ಪ್ರಸ್ತುತ ಉದಯವಾಣಿ ಪತ್ರಿಕೆಯಲ್ಲಿ ಛಾಯಗ್ರಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಂಗೀತ ಪ್ರಿಯರಾಗಿದ್ದು ಹಾಡುಗಾರರಾಗಿದ್ದಾರೆ. ಚಿತ್ತಾರ ಬಳಗ, ಮುಡಿಪು ಕುರ್ನಾಡು ಸಮಾಜ ಸೇವಾಸಂಸ್ಥೆಯ ಮೂಲಕ ಶಾಲೆ ಬಿಟ್ಟು ವಿದ್ಯಾಭ್ಯಾಸ ತ್ಯಜಿಸಿದ ಮಕ್ಕಳನ್ನು ದತ್ತು ಸ್ವೀಕರಿಸಿ ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ. ಯುವ ಛಾಯಗ್ರಾಹಕರಿಗೆ ಉಚಿತ ತರಬೇತಿ ನೀಡುತ್ತಿದ್ದಾರೆ.

ರವಿನಾರಾಯಣ ಜಿ. ಆಡಳಿತ ನಿದೇರ್ಶಕರು ದೇಯಾ ಸಾಪ್ಟ್ವೇರ್ ಸೊಲ್ಯುಸನ್ಸ್ ಪ್ರೈ ಲಿಮಿಟೆಡ್, ಬೆಂಗಳೂರು : ಕಾಸರಗೋಡಿನ ಕುಂಬಳೆ ಸಮೀಪದ ಪೆರ್ನೆ ಯವರಾದ ಇವರು ಮಂಗಳೂರು ವಿಶ್ವವಿದ್ಯಾನಿಲಯದ ಎಂಎಸ್ಸಿ ಪದವೀದರರಾಗಿದ್ದು, ದೇಯಾ ಸಾಪ್ಟ್ವೇರ್ ಸೊಲ್ಯೂಶನ್ಸ್ ಪ್ರೈ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾಗಿದ್ದಾರೆ. ವಿದ್ಯಾರ್ಥಿ ಜೀವನದಲ್ಲೇ ಪರೋಪಕಾರಿಯಾಗಿದ್ದು ತನ್ನ ಸಹಪಾಠಿ ಅಂದ ವಿದ್ಯಾರ್ಥಿಯೊಬ್ಬನಿಗೆ ಲ್ಯಾಪ್ಟಾಪ್ ಉಚಿತವಾಗಿ ನೀಡಿದ್ದಾರೆ. ಬದಿಯಡ್ಕದ ಸ್ವಾತಂತ್ರ್ಯ ಹೋರಾಟಗಾರ ನಾಮ್ ದೇವ್ ಅವರಿಗೆ ಸರಕಾರದ ವತಿಯಿಂದ ಉಚಿತ ಕೆಎಸ್ಆರ್ಟಿಸಿ ಬಸ್ ಪಾಸ್ (ರಾಷ್ಟ್ರವ್ಯಾಪಿ ಸಂಚಾರಕ್ಕೆ) ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಸುಮಾರು 150 ಮಂದಿಗೆ  ರಕ್ತ ದಾನ ಮಾಡುವ ಮೂಲಕ ಬಡವರಿಗೆ ನೆರವಾಗಿದ್ದಾರೆ.

ಮೆಗಾಮೀಡಿಯಾ ಪತ್ರಿಕೋದ್ಯಮ ಪ್ರಶಸ್ತಿ : ಹತ್ತನೇ ವರ್ಷದ ಸವಿನೆನಪಿಗಾಗಿ ನೀಡುವ ಮೆಗಾಮೀಡಿಯಾ ಪತ್ರಿಕೋದ್ಯಮ ಪ್ರಶಸ್ತಿಗೆ ಅರ್ಹ ಲೇಖನವನ್ನು ಖ್ಯಾತ ಪತ್ರಿಕೆಗಳ ಪ್ರಮುಖ ಪತ್ರಕರ್ತರು ಆಯ್ಕೆ ಮಾಡಿ ಕಳುಹಿಸಿದ್ದಾರೆ.

ಪ್ರಶಸ್ತಿಗೆ ನಮಗೆ ತೀರ್ಪುಗಾರರಾಗಿ ಸಹಕರಿಸಿದವರು ವಿಜಯ ಕರ್ನಾಟಕ ಪತ್ರಿಕೆಯ ಯು.ಕೆ ಕುಮಾರನಾಥ್, ವಿಜಯವಾಣಿ ಪತ್ರಿಕೆಯ ಹರೀಶ್ ರೈ ಪಿ.ಬಿ, ಹಾಗೂ ಜಯಕಿರಣ ಪತ್ರಿಕೆಯ ಜಗನ್ನಾಥ ಶೆಟ್ಟಿ ಬಾಳ.

ಪ್ರಶಸ್ತಿಗಾಗಿ ಐದು ಲೇಖನಗಳನ್ನು ತೀರ್ಪುಗಾರರಿಗೆ ನೀಡಲಾಗಿತ್ತು, ತೀರ್ಪುಗಾರರ ಆಯ್ಕೆಯಂತೆ ವಿಜಯಕರ್ನಾಟಕ ಪತ್ರಿಕೆಯ ಮಂಗಳೂರಿನ ವರದಿಗಾರ ಸ್ಟೀವನ್ ರೇಗೋ ದಾರಂದಕುಕ್ಕು ಅವರ `ಕತ್ತಲಲ್ಲಿ ಮೂಡಿಬಂತು ಬೆಳಕು !’ ಲೇಖನ ಆಯ್ಕೆಯಾಗಿದೆ. ಇದು ವಿಜಯ ಕರ್ನಾಟಕ ಪತ್ರಿಕೆಯ ಡಿಸೆಂಬರ್  6, 2011 ರ ನಮ್ಮ ಕರಾವಳಿ ವಿಭಾಗದಲ್ಲಿ ಪ್ರಕಟವಾಗಿದೆ.

ಪ್ರಶಸ್ತಿಯು ಐದುಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಸನ್ಮಾನಿತ ಗೌರವಾದರಗಳನ್ನೊಳಗೊಂಡಿರುತ್ತದೆ ಎಂದು ಪ್ರದಾನ ಸಂಪಾದಕ ಶಿವಪ್ರಸಾದ್ ಅವರು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಮೆಗಾಮೀಡಿಯಾ ನಿರ್ದೇಶಕಿ ಸರಿತ ಎಸ್. ಕಾರ್ಯಕ್ರಮ ಸಂಯೋಜಕ ಯೋಗಿಶ್ ಜಪ್ಪಿನ ಮೊಗರು ಉಪಸ್ಥಿತರಿದ್ದರು.

Mega media

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English