ಎಸ್ಎಸ್ ಎಲ್ ಸಿ ಫಲಿತಾಂಶ ಪ್ರಕಟ

3:52 PM, Thursday, May 19th, 2022
Share
1 Star2 Stars3 Stars4 Stars5 Stars
(No Ratings Yet)
Loading...

ಬೆಂಗಳೂರು : ಕಳೆದ ಹತ್ತು ವರ್ಷಗಳಲ್ಲಿಯೇ ದಾಖಲೆಯ ಫಲಿತಾಂಶ ಈ ಬಾರಿಯ ಹತ್ತನೇ ತರಗತಿ ಫಲಿತಾಂಶದಲ್ಲಿ ಬಂದಿದೆ. 2021-22ನೇ ಶೈಕ್ಷಣಿಕ ಸಾಲಿನ ಹತ್ತನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಶೇಕಡಾ 90.29 ಬಾಲಕಿಯರು, ಶೇಕಡಾ 81.03 ಬಾಲಕರು ತೇರ್ಗಡೆಗೊಂಡಿದ್ದಾರೆ.

ಈ ಬಾರಿ ಗ್ರೇಡ್ ಅಂಕಗಳನ್ನು ನೀಡಲಾಗಿದ್ದು , A+ ಗ್ರೇಡ್ ನಲ್ಲಿ 1,18,875 ವಿದ್ಯಾರ್ಥಿಗಳು, A ಗ್ರೇಡ್ ನಲ್ಲಿ 1,82,60, B+ನಲ್ಲಿ 1,73,528, B ಗ್ರೇಡ್ ನಲ್ಲಿ 1,43,900 ಮಕ್ಕಳು ತೇರ್ಗಡೆ ಹೊಂದಿದ್ದಾರೆ. C+ನಲ್ಲಿ 87,801, C ಗ್ರೇಡ್ ನಲ್ಲಿ 14,627 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 91ರಿಂದ 100 ಅಂಕ ಪಡೆದವರಿಗೆ A+, 81ರಿಂದ 90 ಅಂಕ ಗಳಿಸಿದವರಿಗೆ A ಗ್ರೇಡ್, 71ರಿಂದ 80 ಅಂಕ ಗಳಿಸಿದ್ದರೆ B+, 61ರಿಂದ 60 ಅಂಕ ಗಳಿಸಿದವರಿಗೆ B ಗ್ರೇಡ್, 51ರಿಂದ 60 ಅಂಕ ಗಳಿಸಿದವರಿಗೆ C+ ಹಾಗೂ 35ರಿಂದ 50 ಅಂಕ ಗಳಿಸಿದವರಿಗೆ C ಗ್ರೇಡ್ ನೀಡಲಾಗುತ್ತದೆ.

ರಾಜ್ಯದ 1462 ಸರ್ಕಾರಿ ಶಾಲೆಗಳಲ್ಲಿ ಎಲ್ಲ ಮಕ್ಕಳೂ ತೇರ್ಗಡೆಯಾಗಿದ್ದಾರೆ. 467 ಅನುದಾನ ಶಾಲೆಗಳು, 1991 ಅನುದಾನ ರಹಿತ ಶಾಲೆಗಳಲ್ಲಿ ನೂರಕ್ಕೆ ನೂರು ಫಲಿತಾಂಶ, ಎರಡು ಸರ್ಕಾರಿ ಶಾಲೆಗಳು, ಮೂರು ಅನುದಾನಿತ ಮತ್ತು 15 ಅನುದಾನರಹಿತ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.

145 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.309 ವಿದ್ಯಾರ್ಥಿಗಳಿಗೆ 624, 472 ವಿದ್ಯಾರ್ಥಿಗಳು 623 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ರಾಜ್ಯದ 3,920 ಶಾಲೆಗಳಿಗೆ ಶೇಕಡಾ 100ರಷ್ಟು ಫಲಿತಾಂಶ ಬಂದಿದೆ. ಸರ್ಕಾರಿ ಶಾಲೆಗೆ ಶೇಕಡಾ 88, ಅನುದಾನಿತ ಶಾಲೆಯಲ್ಲಿ ಶೇಕಡಾ 87.84, ಅನುದಾನ ರಹಿತ ಶಾಲೆಗಳಲ್ಲಿ ಶೇಕಡಾ 92.29ರಷ್ಟು ಫಲಿತಾಂಶ ಬಂದಿದೆ.

         

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English