ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ ಐವರು ರಾಜ್ಯಕ್ಕೆ ಟಾಪರ್

5:53 PM, Thursday, May 19th, 2022
Share
1 Star2 Stars3 Stars4 Stars5 Stars
(No Ratings Yet)
Loading...

ಉಡುಪಿ : ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಒಟ್ಟಾರೆ ಈ ಬಾರಿ 85.63% ಫಲಿತಾಂಶ ದಾಖಲಾಗಿದ್ದು, 145 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ.

ದಕ್ಷಿಣ ಕನ್ನಡದ 17 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕ ಗಳಿಸಿದ್ದರೆ, ಉಡುಪಿಯ ಐವರು ಅದೇ ಸಾಧನೆ ಮಾಡಿದ್ದಾರೆ.

ಉಡುಪಿ ಜಿಲ್ಲೆಯ ಐವರು ವಿದ್ಯಾರ್ಥಿಗಳು ಟಾಪರ್ ಆಗಿದ್ದಾರೆ. ಉಡುಪಿ ಬಾಲಕಿಯರ ಸರಕಾರಿ ಪ್ರೌಡಶಾಲೆಯ ವಿದ್ಯಾರ್ಥಿನಿ ಗಾಯತ್ರಿ, ಉಡುಪಿ ಮಲ್ಪೆ ಸರಕಾರಿ ಪ್ರೌಡಶಾಲೆಯ ಪುನೀತ್ ನಾಯ್ಕ್, ಕುಂದಾಪುರ ಕಾಳಾವರ ಸರಕಾರಿ ಪ್ರೌಡಶಾಲೆಯ ನಿಶಾ, ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ವೈಷ್ಣವಿ ಶೆಟ್ಟಿ ಹಾಗೂ ಬೈಂದೂರಿನ ಸಾಂದೀಪನಿ ಶಾಲೆಯ ಅಕ್ಷತಾ ಇವರು ಪರೀಕ್ಷೆಯಲ್ಲಿ ಸಂಪೂರ್ಣ ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಚ್ಚಿನ ಬೆಳ್ತಂಗಡಿಯ ರೋಶನ್, ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಸುಳ್ಯದ ಸಾಥ್ವಿಕ್ ಎಚ್.ಎಸ್. ಅಳಿಕೆ ಬಂಟ್ವಾಳದ ಸತ್ಯಸಾಯಿ ಲೋಕಸೇವಾ ಶಾಲೆಯ ಸುಜಯ್ ಬಿ, ಆಳ್ವಾಸ್ ಶಾಲೆ ಮೂಡುಬಿದಿರೆಯ ಇಂದಿರಾ ಅರುಣ್ ನ್ಯಾಮಗೌಡರ್, ಮೂಡುಬಿದಿರೆಯ ಈರಯ್ಯ ಶ್ರೀಶೈಲ್ ಶೇ. ಮೂಡುಬಿದಿರೆಯ ಆಳ್ವಾಸ್ ಶಾಲೆಯಿಂದ ಕಮಲೇಶ್ ಪುಂಡಲೀಕ ನಾಯ್ಕ್, ಆಳ್ವಾಸ್ ಶಾಲೆ ಮೂಡುಬಿದಿರೆಯಿಂದ ಶ್ರೇಯಾ ಆರ್ ಶೆಟ್ಟಿ, ರೋಟರಿ ಶಾಲೆ ಮೂಡುಬಿದಿರೆಯಿಂದ ಶ್ರೀಜಾ ಹೆಬ್ಬಾರ್, ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠದಿಂದ ವೀಕ್ಷಾ ವಿ ಶೆಟ್ಟಿ, ಕಿಲ್ಪಾಡಿ ಮೂಲ್ಕಿಯಿಂದ ವಿ.ಅಕ್ಷತಾ ಕಾಮತ್, ವಿಟ್ಲ, ಪುತ್ತೂರಿನ ವಿವೇಕಾನಂದ ಶಾಲೆಯಿಂದ ಆತ್ಮೀಯ ಎಂ ಕಶ್ಯಪ್, ಆಳ್ವಾಸ್ ಶಾಲೆ ಮೂಡುಬಿದಿರೆಯಿಂದ ಸುದೇಶ್ ದತ್ತಾತ್ರೇ ಕಿಲ್ಲೇದಾರ್, ವಿವೇಕಾನಂದ ಶಾಲೆ ಪುತ್ತೂರಿನ ಅಭಿಜ್ಞಾ ಆರ್, ಪುತ್ತೂರಿನ ವಿವೇಕಾನಂದ ಶಾಲೆಯಿಂದ ಅಬಯ್ ಶರ್ಮಾ ಕೆ, ರೋಟರಿ ಶಾಲೆ ಮೂಡುಬಿದಿರೆಯಿಂದ ಸ್ವಸ್ತಿ, ಬೆಳ್ತಂಗಡಿ ಸೇಂಟ್ ಮೇರಿಸ್ ಶಾಲೆಯ ಮಧುಶ್ರೀ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English