ಕದ್ರಿ ಕಂಬಳದಲ್ಲಿ ಇಬ್ಬರು ಸಹೋದರಿಯರು ನೇಣು ಬಿಗಿದುಕೊಂಡು ಆತ್ಮಹತ್ಯೆ

8:12 PM, Tuesday, October 3rd, 2023
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ನಗರದ ಕದ್ರಿ ಕಂಬಳದ ಚಂದ್ರಿಕಾ ಬಡಾವಣೆಯಲ್ಲಿ ವಾಸವಾಗಿದ್ದ ಲತಾ ಭಂಡಾರಿ (70) ಮತ್ತು ಸುಂದರಿ ಶೆಟ್ಟಿ (80) ಎಂಬ ಸಹೋದರಿಯರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

78ರ ಹರೆಯದ ಜಗನ್ನಾಥ್ ಭಂಡಾರಿ ಮತ್ತವರ ಪತ್ನಿ ಲತಾ ಭಂಡಾರಿ ಹಾಗೂ ಲತಾ ಭಂಡಾರಿಯ ಅಕ್ಕ ಸುಂದರಿ ಶೆಟ್ಟಿ ಎಂಬವರು ಈ ಮನೆಯಲ್ಲಿ ವಾಸಿಸುತ್ತಿದ್ದರು. ಎಂದಿನಂತೆ ಜಗನ್ನಾಥ್ ಭಂಡಾರಿ ಮಂಗಳೂರಿನ ಯಶ್ ರಾಜ್ ಬಾರಿಗೆ ಕೆಲಸಕ್ಕೆ ಹೋದವರು ಸಂಜೆ 4:30ರ ವೇಳೆಗೆ ಮನೆಗೆ ತೆರಳಿದಾಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಜಗನ್ನಾಥ ಭಂಡಾರಿ ಮನೆಗೆ ತೆರಳಿದಾಗ ಮನೆಯ ಬಾಗಿಲು ಮುಚ್ಚಲ್ಪಟ್ಟಿತ್ತು. ಕಿಟಕಿಯಿಂದ ನೋಡಿದಾಗ ಸಹೋದರಿಯರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ ಎನ್ನಲಾಗಿದೆ. ಕೌಟುಂಬಿಕ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಶಂಕಿಸಿದ್ದು, ತನಿಖೆ ಮುಂದುವರಿದಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English