ಶಿವಮೊಗ್ಗ ಘಟನೆಯ ಸಂಚಿನಲ್ಲಿ ಮುಸ್ಲಿಂ ಮಹಿಳೆಯರ ಪಾತ್ರವಿರುವ ವಿಚಾರ ಗಂಭೀರವಾದುದು : ಶರಣ್ ಪಂಪ್ ವೆಲ್

9:45 PM, Friday, October 6th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಶಿವಮೊಗ್ಗದಲ್ಲಿ ಪ್ರತಿ ಬಾರಿ ಶಾಂತಿ ಕದಡುವ ಯತ್ನ ನಡೆಯುತ್ತಿದೆ. ದೇಶದ ಯಾವುದೇ ಮೂಲೆಯಲ್ಲಿ ಭಯೋತ್ಪಾದಕ ಕೃತ್ಯ ನಡೆದರೂ ಅದರ ಬೇರು ಶಿವಮೊಗ್ಗವನ್ನು ತೋರಿಸುತ್ತದೆ. ರಾಜ್ಯದ ಮಲೆನಾಡು ಶಿವಮೊಗ್ಗವನ್ನು ಉಗ್ರರು ಕಾರಸ್ಥಾನ ಮಾಡಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ರಕ್ಷಣೆಗಾಗಿ ವಿಶ್ವ ಹಿಂದು ಪರಿಷತ್ತಿನಿಂದ ಉತ್ತರ ಪ್ರದೇಶ ಮಾದರಿಯಲ್ಲಿ ಮಹಾ ಪಂಚಾಯತ್ ಸಂಘಟಿಸಲು ಯೋಜನೆ ಹಾಕಿದ್ದೇವೆ ಎಂದು ವಿಹಿಂಪ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದ್ದಾರೆ.

ಮಂಗಳೂರಿನ ವಿಹಿಂಪ ಕಚೇರಿಯಲ್ಲಿ ಶುಕ್ರವಾರ ಶರಣ್ ಪಂಪ್ ವೆಲ್, ಮಾತನಾಡಿ ಶಿವಮೊಗ್ಗದಲ್ಲಿ ಹರ್ಷ ಎಂಬ ಕಾರ್ಯಕರ್ತನ ಕೊಲೆಯ ಬಳಿಕ ಪದೇ ಪದೇ ಉಗ್ರವಾದಿ ಕೃತ್ಯ ಕಾಣಿಸಿಕೊಳ್ಳುತ್ತಿದೆ. ಮೊನ್ನೆಯ ಗಲಭೆ ಘಟನೆಯ ಹಿಂದೆಯೂ ಪೂರ್ವಯೋಜಿತ ಸಂಚು ಇರುವುದು ಕಂಡುಬರುತ್ತದೆ. ವಿಶೇಷ ಅಂದ್ರೆ, ಇಂಥಹ ದುಷ್ಕೃತ್ಯದಲ್ಲಿ ಮುಸ್ಲಿಂ ಮಹಿಳೆಯರೂ ಪಾಲ್ಗೊಳ್ಳುತ್ತಿದ್ದಾರೆ. ಶಿವಮೊಗ್ಗ ಘಟನೆಯ ಸಂಚಿನಲ್ಲಿ ಮುಸ್ಲಿಂ ಮಹಿಳೆಯರ ಪಾತ್ರ ಇದೆಯೆಂಬ ವಿಚಾರ ಗಂಭೀರವಾದುದು. ಈದ್ ಮೆರವಣಿಗೆ ಸಾಗುತ್ತಿದ್ದಾಗಲೇ ಕಲ್ಲು ಕಲ್ಲು ಎಂದು ಸುಮ್ಮನೆ ಘೋಷಣೆ ಕೂಗಿದ್ದಾರೆ. ಇದರಿಂದ ಉದ್ರೇಕಗೊಂಡ ಯುವಕರು ಹಿಂದುಗಳ ಮನೆಗಳತ್ತ ಕಲ್ಲು ತೂರಿದ್ದಾರೆ. ಹಿಂದುಗಳ ಮನೆಗಳೇ ಅವರ ಟಾರ್ಗೆಟ್ ಆಗಿತ್ತು. ಈ ಘಟನೆಯನ್ನು ವಿಶೇಷ ತನಿಖಾ ತಂಡದಿಂದ ತನಿಖೆಗೆ ಒಳಪಡಿಸಬೇಕು.

ಗಲಭೆ ಕೃತ್ಯದಿಂದಾಗಿ ಶಿವಮೊಗ್ಗದಲ್ಲಿ ಹಿಂದುಗಳು ಭಯದಿಂದ ಓಡಾಡುವ ಸ್ಥಿತಿ ಬಂದಿದೆ. ಹಿಂದು ಮಹಿಳೆಯರು ಕಣ್ಣೀರು ಹಾಕುತ್ತಿರುವುದನ್ನು ನೋಡಿದ್ದೇವೆ. ಇದನ್ನೆಲ್ಲ ನೋಡಿ ವಿಶ್ವ ಹಿಂದು ಪರಿಷತ್ ಸುಮ್ಮನೆ ಕೂರಲ್ಲ. ಹಿಂದು ಸಮಾಜದ ಜೊತೆಗೆ ಸಂಘಟನೆ ಇದೆ ಎನ್ನುವ ಅಭಯದ ಮಾತು ಹೇಳಬೇಕಾಗಿದೆ. ಜೊತೆಗೆ, ಹಿಂದು ಸಮಾಜದ ಜೊತೆ ನಿಲ್ಲುವುದಕ್ಕಾಗಿ ಉತ್ತರ ಪ್ರದೇಶದಲ್ಲಿ ಇರುವಂತೆ ಮಹಾ ಪಂಚಾಯತ್ ಸಂಘಟನೆ ಮಾಡುತ್ತೇವೆ. ಇದರಲ್ಲಿ ಸಮಾಜದ ಗಣ್ಯ ವ್ಯಕ್ತಿಗಳು, ಎಲ್ಲ ಸಮಾಜದ ಪ್ರಮುಖರನ್ನು ಒಂದೆಡೆ ಸೇರಿಸಿ ಕಾರ್ಯಕ್ರಮ ಮಾಡುತ್ತೇವೆ. ಯಾರು ದೇಶದ್ರೋಹಿಗಳಿದ್ದಾರೆ ಅವರನ್ನು ಸಮಾಜದಿಂದ ಬಹಿಷ್ಕರಿಸುತ್ತೇವೆ. ಇದರ ರೂಪುರೇಷೆ, ಪರಿಣಾಮ ಹೇಗಿರುತ್ತೆ ಅನ್ನುವ ಬಗ್ಗೆ ಶೌರ್ಯ ಜಾಗರಣ ಯಾತ್ರೆ ಮುಗಿದ ಬೆನ್ನಲ್ಲೇ ತಿಳಿಸಲಾಗುವುದು ಎಂದು ಶರಣ್ ಪಂಪ್ವೆಲ್ ತಿಳಿಸಿದ್ದಾರೆ.

ಮಹಿಷ ದಸರಾ ನಡೆಸುವ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ, ಮೈಸೂರಿನಲ್ಲಿ ಮಹಿಷ ದಸರಾ ನಡೆಸುವುದನ್ನು ವಿರೋಧಿಸುತ್ತೇವೆ. ಹಿಂದಿನಿಂದ ಏನು ನಡೆದು ಬಂದಿತ್ತೋ ಅದನ್ನು ಒಪ್ಪಿಕೊಳ್ಳುತ್ತೇವೆ ಎಂದರು. ಉಡುಪಿಯಲ್ಲಿ ಮಹಿಷ ದಸರಾ ನಡೆಸುವ ಕುರಿತ ಪ್ರಶ್ನೆಗೆ, ಕರಾವಳಿಯಲ್ಲಿ ಯಾವುದೇ ಕಡೆ ಮಹಿಷ ದಸರಾ ನಡೆಸುವುದಕ್ಕೆ ನಾವು ಬಿಡಲ್ಲ. ನಮ್ಮ ಕಾರ್ಯಕರ್ತರು ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English