ಮಂಗಳೂರು : ಇತಿಹಾಸ ಪ್ರಸಿದ್ಧ ಹಾಗೂ ಸಾವಿರಾರು ವರ್ಷಗಳ ಇತಿಹಾಸವಿರುವ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವವು ಅ 8 ರಿಂದ 18 ರವರೆಗೆ ನಡೆಯಲಿರುವುದು ಎಂದು ದೇವಳದ ಆಡಳಿತ ಮಂಡಳಿ ಅಧ್ಯಕ್ಷರಾದ ರಾಮಾನಾಥ ಹೆಗ್ಡೆಯವರು ಇಂದು ದೇವಸ್ಥಾನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಅ. 8ರಂದು ಎರಡೂವರೆ ಕೆ.ಜಿ. ಚಿನ್ನದಿಂದ ತಯಾರಿಸಿದ ಚಿನ್ನದ ಮುಖವಾಡವನ್ನು ದ.ಕ. ಜಿಲ್ಲಾಧಿಕಾರಿ ಪೊನ್ನುರಾಜ್ ಹಾಗೂ ಬಂಟರ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿಯವರ ಮತ್ತು ಭಕ್ತಾದಿಗಳ ಸಮ್ಮುಖದಲ್ಲಿ ಶ್ರೀ ದೇವಿಗೆ ಸರ್ಮಪಿಸಲಾಗುವುದು. ಅದರೊಂದಿಗೆ ದೇವಸ್ಥಾನದ ಮಹಾದ್ವಾರದ ಎರಡನೇ ಹಂತದ ಬಾಗಿಲನ್ನು ದೇವರಿಗೆ ಸಮರ್ಪಿಲಾಗುವುದು ಎಂದು ಅವರು ಹೇಳಿದರು.
ಅ. 9ರಂದು ಕಲೋತ್ಸವ ನಡೆಯಲಿದ್ದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಬಿ.ಆರ್. ಭಟ್ ಜನರಲ್ ಮ್ಯಾನೇಜರ್ ಕಾಪೋರೇಶನ್ ಬ್ಯಾಂಕ್ ಇವರು ನಡೆಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಸ್ಥಳೀಯ ಕಾಪೋರೇಟರ್ ಪ್ರೇಮಾನಂದ ಶೆಟ್ಟಿ ಭಾಗವಹಿಸಲಿದ್ದಾರೆ.
ನವರಾತ್ರಿಯ ಒಂಭತ್ತು ದಿನಗಳು ದೇವಿಗೆ ಬೇರೆ ಬೇರೆ ರೀತಿ ಅಲಂಕಾರಗಳು ನಡೆಯಲಿದೆ.
Click this button or press Ctrl+G to toggle between Kannada and English