ಕಲಬುರಗಿಯ ಸಂತೋಷಿ ಜೊತೆ ಪಿಎಂ ಸಂವಾದ

8:51 PM, Tuesday, May 31st, 2022
Share
1 Star2 Stars3 Stars4 Stars5 Stars
(No Ratings Yet)
Loading...

ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಗರೀಬ್ ಕಲ್ಯಾಣ್ ಸಮ್ಮೇಳನ ಅಂಗವಾಗಿ ವಿವಿಧ ಫಲಾನುಭವಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಕಲಬುರಗಿಯ ಫಲಾನುಭವಿ ಸಂತೋಷಿ ಭಾಗಿಯಾಗಿದ್ದರು.

ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿ ಸಂತೋಷಿ ಅವರು ಅನಾರೋಗ್ಯ ಪೀಡಿತರಾದ ತಮ್ಮ ತಾಯಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ ಹಾಗೂ ಜನ ಔಷಧಿ ಕೇಂದ್ರದಲ್ಲಿ ಕೈಗೆಟಕುವ ದರದಲ್ಲಿ ಔಷಧ ದೊರೆತ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಸಂತೋಷಿ ಕನ್ನಡದಲ್ಲಿ ಮಾತನಾಡಿದರು. ಅಧಿಕಾರಿಯೊಬ್ಬರು ಅದನ್ನು ಹಿಂದಿಗೆ ಅನುವಾದಿಸಿದರು.

*ಬಳಕ ಪ್ರಧಾನಿ ಮೋದಿಯವರು ಮಾತನಾಡಿ “ನೀವು ಕನ್ನಡದಲ್ಲಿ ಮಾತನಾಡಿದ್ರು ನಿಮ್ಮ ಮುಖದ ಭಾವನೆ ಸಂತಸದಲ್ಲಿರುವು ತೋರಿಸುತ್ತದೆ” ಎಂದರು.

ನಾನು ಪಕ್ಷದ ಕಾರ್ಯಕರ್ತನ್ನಾಗಿ ಕರ್ನಾಟಕದಲ್ಲಿದ್ದರೆ ನಾನು ನಿಮ್ಮ ಮನೆಗೆ ಬಂದು ಸಂತೋಷದಲ್ಲಿ ಭಾಗಿಯಾಗುತ್ತಿದ್ದೆ ಎಂದರಲ್ಲದೇ, ಸಂತೋಷಿಗೆ ನೀವು ಆ ಊರಿನ ದೊಡ್ಡ ನಾಯಕಿಯಾಗ್ತಿರಾ ಎಂದು ಭವಿಷ್ಯ ನುಡಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English