ಮಂಗಳೂರು : ರಾಷ್ಟ್ರೀಯ ಹೆದ್ದಾರಿ 169(13) ಸಾವಣೂರು ಜಂಕ್ಷನ್ ಬಿಕರ್ನಕಟ್ಟೆ ವಿಭಾಗದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗಾಗಿ ಮೂಡಬಿದ್ರೆ ತಾಲ್ಲೂಕು ಪಡುರ್ಮಾನಾಡು ಮತ್ತು ಪುತ್ತಿಲ ಗ್ರಾಮಗಳಿಗೆ ಭೂಸ್ವಾಧೀನಗೊಂಡ ಜಮೀನನ್ನು ಭೂ ಮಾಲೀಕರಿಗೆ ರಾಜ್ಯ ಉಚ್ಚ ನ್ಯಾಯಾಲಯದ ಆದೇಶ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಆದೇಶದಂತೆ ಪರಿಹಾರ ಪಡೆದುಕೊಳ್ಳಲು ದಾಖಲೆಗಳೊಂದಿಗೆ ಕೋರಿಕೆ ಪತ್ರ ಸಲ್ಲಿಸುವಂತೆ ಸೂಚನಾ ಪತ್ರವನ್ನು ಕಚೇರಿಯಿಂದ ಈಗಾಗಲೇ ಜ್ಯಾರಿ ಮಾಡಲಾಗಿದೆ.
ಈ ರಸ್ತೆ ಕಾಮಗಾರಿಯು ಪ್ರಗತಿಯಲ್ಲಿದ್ದು, ಈವರೆಗೆ ಕ್ಲೇಮ್ ಅರ್ಜಿ ಸಲ್ಲಿಸದಿರುವ ಭೂ ಮಾಲೀಕರು ಒಂದು ವಾರದೊಳಗೆ ಕ್ಲೇಮ್ ಅರ್ಜಿಯನ್ನು ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರಿ ರಾಷ್ಟ್ರೀಯ ಹೆದ್ದಾರಿ 169(13), ಮಂಗಳೂರು ಈ ಕಚೇರಿಗೆ ಸಲ್ಲಿಸಬಹುದು ಎಂದು ವಿಶೇಷ ಭೂ ಸ್ವಾಧೀನಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English