ಉಡುಪಿ : ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಇತ್ತು, ಈ ಬಾರಿ ಬಿಜೆಪಿ – ಜೆಡಿಎಸ್ ಮೈತ್ರಿ ಇದೆ ಹೀಗಾಗಿ ನನಗೆ ಸಂತೋಷ ಇದೆ ಯಾಕೆಂದರೆ ನಾನು ಹೋದಲೆಲ್ಲಾ ಜೆಡಿಎಸ್ ನನ್ನ ಹಿಂದೇಯೇ ಬರುತ್ತಿದೆ . ನನಗೆ ಶಾಲು ಹಾಕಿ ಅಭ್ಯಾಸ ಇದೆ ಎಂದು ಮಾಜಿ ಸಚಿವ, ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಪತ್ರಿಕಾಭವನದಲ್ಲಿ ಪತ್ರಕರ್ತರೊಂದಿಗೆ ನಡೆದ ಸಂವಾದ ದಲ್ಲಿ ಮಾತನಾಡಿದ ಅವರು , ಆಕಾಂಕ್ಷಿಯಾಗುವುದರಲ್ಲಿ ಯಾವುದೇ ತಪ್ಪು ಇಲ್ಲ. ಎಲ್ಲರೂ ಆಸೆಯಿಂದಲೇ ರಾಜಕೀಯಕ್ಕೆ ಬರುತ್ತಾರೆ. 3-4 ತಿಂಗಳ ಹಿಂದೇಯೇ ನಾನು ಟಿಕೆಟ್ ಆಕಾಂಕ್ಷಿ ಎಂದು ಘೋಷಿಸಿದ್ದೆ ಎಂದರು.
ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಬಾ ಕ್ಷೇತ್ರಗಳು ಇವೆ. ಹೀಗಾಗಿ ಲೆಕ್ಕ ಹಾಕಿದರೆ ಕಡಿಮೆ ಎಂದರೂ ಇಲ್ಲಿ ಕಾರ್ಯಕರ್ತರ ಭೇಟಿಗೆ ಸುಮಾರು 24 ತಿಂಗಳ ಕಾಲಾವಕಾಶ ಬೇಕಾಗಬಹುದು. ಹೀಗಾಗಿ ಈಗಾಗಲೇ ಶಕ್ತಿ ಕೇಂದ್ರ ಮತ್ತು ಪ್ರಮುಖರ ಭೇಟಿ ಮಾಡಿ ಸಭೆ ನಡೆಸುತಿದ್ದೇನೆ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಕೂಡಾ ನಾನು ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡಲು ತಯಾರಿದ್ದೇನೆ ಎಂದು ತಿಳಿಸಿದರು.
ಕಳೆದ ಬಾರಿ ನನಗೆ ಕೊನೆಯ ಕ್ಷಣ ಟಿಕೆಟ್ ಘೋಷಣೆ ಮಾಡಲಾಗಿತ್ತು ಹೀಗಾಗಿ ಕಾರ್ಯಕರ್ತರ ಭೇಟಿ ಮಾಡಲು ಸಮಯ ಸಿಕ್ಕಿರಲಿಲ್ಲ. ಇದರಿಂದ ಪಾಠ ಕಲಿತಿರುವ ನಾನು ಈ ಬಾರಿ ಬೇಗನೇ ಕಾರ್ಯಕರ್ತರ ಭೇಟಿ ಆರಂಭ ಮಾಡಿದ್ದೇನೆ. ಬಿಜೆಪಿಯಲ್ಲಿ ನನಗೆ ಅಧಿಕಾರ ಕೊಡಲಿ ಅಥವಾ ಕೊಡದೇ ಇರಲಿ ನಾನು ಕೊನೆಯ ಉಸಿರಿನವರೆಗೂ ಬಿಜೆಪಿಯಲ್ಲಿಯೇ ಇರುತ್ತೇನೆ” ಎಂದರು.
Click this button or press Ctrl+G to toggle between Kannada and English