ಮಂಗಳೂರು: ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳೂರು ನಗರದ ಎಲ್ಲಾ ಪೊಲೀಸ್ ಠಾಣೆಗಳ ಸಕ್ರೀಯ ರೌಡಿಗಳ ಪರೇಡ್‌ನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರ ನೇತೃತ್ವದಲ್ಲಿ ನಡೆಯಿತು.
ಹಳೇ ರೌಡಿಶೀಟರ್‌ಗಳು, ಕ್ರಿಮಿನಲ್ ಹಿನ್ನೆಲೆಯುಳ್ಳವರು, ಹತ್ತು ಹಲವು ಪ್ರಕರಣಗಳನ್ನು ದಾಖಲಿಸಿಕೊಂಡವರನ್ನು ಕರೆಸಿ ಅವರ ಪೂರ್ವಾಪರಗಳನ್ನು ಪೊಲೀಸ್ ಕಮಿಷನರ್ ವಿಚಾರಿಸಿದರು. ಈ ಸಂದರ್ಭದಲ್ಲಿ ಕ್ರಿಮಿನಲ್ ಗಳಿಗೆ ಎಚ್ಚರಿಕೆ ನೀಡಿದ ಅವರು, ಇನ್ನು ಮುಂದೆ ಕಾನೂನು ಉಲ್ಲಂಘನೆ ಮಾಡಿದರೆ, ಅವರ ಬಾಂಡ್ ರದ್ದುಮಾಡಿ ಆಸ್ತಿ ಮತ್ತು ಹಣವನ್ನು ಮುಟ್ಟುಗೋಲು ಹಾಕುವುದಾಗಿ ಎಚ್ಚರಿಸಿದರು.
ಈಗಾಗಲೇ ಹಲವು ಕ್ರಿಮಿನಲ್‌ಗಳ ಬಗ್ಗೆ ಈ ರೀತಿ ಮಾಡಿದ್ದರೂ , ಇನ್ನು ಹಲವು ಮಂದಿ ಸರಿಯಾಗಿಲ್ಲ. ಅಂಥವರನ್ನು ಗಡೀಪಾರು ಮಾಡುತ್ತೇವೆ. ಕ್ರಿಮಿನಲ್ ಗಳು ತಮ್ಮ ಕೆಟ್ಟ ನಡತೆಯನ್ನು ಸರಿಪಡಿಸಿಕೊಳ್ಳಬೇಕು. ಈಗ ಸುಮಾರು 10 ಮಂದಿಯನ್ನು ಗಡೀಪಾರು ಮಾಡುವ ಸಿದ್ಧತೆ ನಡೆಯುತ್ತಿದೆ. ಅದರ ದಾಖಲೆ ಪತ್ರಗಳನ್ನು ಹಾಜರುಪಡಿಸಲು ಇನ್ಸ್‌ಪೆಕ್ಟರ್‌ಗಳಿಗೆ ಸೂಚಿಸಲಾಗಿದೆ. ಇದು ನಿಮಗೆಲ್ಲರಿಗೂ ಕೊಡುವ ಎಚ್ಚರಿಕೆ ಎಂದು ಕ್ರಿಮಿನಲ್‌ಗಳಿಗೆ ವಾರ್ನಿಂಗ್ ನೀಡಿದರು.
ಹಬ್ಬದ ದಿನಗಳು ಬರುತ್ತಿದ್ದು, ಈ ಸಂದರ್ಭದಲ್ಲಿ ಯಾರೂ ಕೂಡಾ ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಬಾರದು. ನ್ಯಾಯಾಲಯಕ್ಕೆ ಹಾಜರಾಗದೇ ಇರುವ ಹಲವು ಕ್ರಿಮಿನಲ್‌ಗಳು ಇದ್ದಾರೆ. ಅವರು ತಪ್ಪದೇ ಹಾಜರಾಗಬೇಕು. ನ್ಯಾಯಾಲಯದ ಕಲಾಪಗಳನ್ನು ನಾವು ಪರಿಶೀಲನೆ ಮಾಡುತ್ತೇವೆ ಎಂದರು. ಇದು ನಾನು ನಡೆಸುವ ಮೊದಲ ಪರೇಡ್ ಆಗಿದ್ದು, ನಿರಂತರವಾಗಿ ಇಂತಹ ಪರೇಡ್ ನಡೆಸಲಾಗುವುದು ಎಂದರು.
ಈ ಪರೇಡ್‌ನಲ್ಲಿ ಶ್ರೀ ಸಿದ್ದಾರ್ಥ ಗೋಯಲ್ ಐ.ಪಿ.ಎಸ್ ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ, ಶ್ರೀ ಬಿಪಿ ದಿನೇಶ್ ಕುಮಾರ್ ಡಿಸಿಪಿ ಅಪರಾಧ ಮತ್ತು ಸಂಚಾರ, ನಗರದ ಎಲ್ಲಾ ಎಸಿಪಿರವರು ಹಾಗೂ ಸಂಬಂಧಪಟ್ಟ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು ಉಪಸ್ಥಿತಿಯಿದ್ದರು
Click this button or press Ctrl+G to toggle between Kannada and English