ಮಂಗಳೂರು : ತೊಕ್ಕೊಟ್ಟು ಹೊಸ ಬಸ್ ನಿಲ್ದಾಣ ಸಮೀಪವಿರುವ ರಾಜಧಾನಿ ಜ್ಯುವೆಲ್ಲರಿಗೆ ಶುಕ್ರವಾರ ಆಗಮಿಸಿದ ಜಾರ್ಜಿಯ ಮೂಲದ ಇಬ್ಬರು ವ್ಯಕ್ತಿಗಳು ಜ್ಯುವೆಲ್ಲರಿಯಿಂದ ಸುಮಾರು 1.3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿ ಅದರಲ್ಲಿ ಒಬ್ಬ ಸೆರೆ ಸಿಕ್ಕಿದ್ದು ಇನ್ನೊಬ್ಬ ಪರಾರಿಯಾಗಿದ್ದಾನೆ.
ಶುಕ್ರವಾರ ಮಧ್ಯಾಹ್ನ 2;30 ರ ವೇಳೆಗೆ ಗ್ರಾಹಕರ ಸೋಗಿನಲ್ಲಿ ಆಗಮಿಸಿದ ಸನೂಸ್ ಮತ್ತು ಇನ್ನೋರ್ವ ಅಂಗಡಿಯಲ್ಲಿದ್ದ ಕೆಲಸದವರಲ್ಲಿ ಬಳೆ ಹಾಗೂ ಬ್ರಾಸ್ಲೇಟ್ ಗಳ ಬೆಲೆ ಕೇಳಿ ಅವರ ಗಮನವನ್ನು ಬೇರೆಡೆ ಸೆಳೆದು ಎರಡು ಬಳೆಗಳನ್ನು, ಬ್ರಾಸ್‌ಲೈಟ್ ಎಗರಿಸಿ ಏನನ್ನು ಖರಿದಿಸದೆ ವಾಪಾಸ್ಸಾಗಿದ್ದರು. ಆದರೆ ಜ್ಯುವೆಲ್ಲರಿ ಸಿಬ್ಬಂದಿ ಚಿನ್ನ ಪರಿಶೀಲಿಸಿದಾಗ ವ್ಯತ್ಯಾಸ ಕಂಡುಬಂದಿದ್ದು ಅಂಗಡಿಯಲ್ಲಿರುವ ಸಿಸಿಟಿವಿ ಮೂಲಕ ಗಮನಿಸಿದಾಗ ವಿದೇಶಿ ಗರಿಬ್ಬರು ಕಳವು ನಡೆಸಿರುವುದು ಬೆಳಕಿಗೆ ಬಂದಿತು. ಕೂಡಲೇ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಉಳ್ಳಾಲ ಪೊಲೀಸರ ಮಾಹಿತಿಯಂತೆರಾಷ್ಟ್ರೀಯ ಹೆದ್ದಾರಿಗಳಲ್ಲಿ ನಾಕಾ ಬಂಧಿ ಹಾಕಲಾಯಿತು. ನಾಕಾಬಂಧಿ ಹಾಕುತ್ತಿದ್ದಂತೆ ಆರೋಪಿಗಳ ಸುಳಿವು ಲಭ್ಯವಾಗಿತ್ತು. ಆದರೆ ಅವರು ಕಾರನ್ನು ಒಳರಸ್ತೆಗಳ ಮೂಲಕ ಕೊಂಡೊಯ್ದು ಸಂಜೆಯವರೆಗೆ ಪೊಲೀಸರ ಜಾಡು ತಪ್ಪಿಸಿದರು. ಮುಲ್ಕಿ ಸಮೀಪ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸಿದಾಗ ಮುಲ್ಕಿ ಪೊಲೀಸರು ತಡೆಯೊಡ್ಡಿದಾಗ ಅವರಿಂದ ತಪ್ಪಿಸಿ ಕಿನ್ನಿಗೋಳಿ ಮಾರ್ಗವಾಗಿ ಪರಾರಿಯಾಗಲು ಯತ್ನಿಸಿದರು. ಬಜಪೆ ಪೊಲೀಸರಿಗೆ ಮಾಹಿತಿ ನೀಡಿ ಅವರು ನಾಕಾ ಬಂದಿ ಹಾಕಿರುವುದನ್ನು ಲೆಕ್ಕಿಸದೆ ಮತ್ತೆ ಮುಂದೆ ಸಾಗಿದ್ದರು. ಕೆರೆಕಾಡು ಸಮೀಪ ಸಾರ್ವಜನಿಕರು ಪೊಲೀಸರ ಸಹಕಾರದೊಂದಿಗೆ ಕಾರನ್ನು ತಡೆಗಟ್ಟುವಲ್ಲಿ ಯಶಸ್ವಿಯಾದರು. ಆದರೆ ಈ ಸಂದರ್ಭ ಓರ್ವ ಆರೋಪಿ ಪರಾರಿಯಾಗಿದ್ದು, ಸೆರೆಯಾದ ಸನೂಸ್ ಮತ್ತು ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಆರೋಪಿಯಿಂದ ಪಾಸ್‌ಪೋರ್ಟ್, ಬುರ್ಕಾ, ಕಾಂಡೋಮ್, ಗಾಂಜಾ, ಸಿಗರೇಟ್, ನಕಲಿ ಚಿನ್ನದ ಬಳೆಗಳು ದೊರೆತಿವೆ ಮತ್ತು ಆತನ ಬಳಿ ಇರುವ ಪಾಸ್ ಪೋರ್ಟ್‌ನಲ್ಲಿ ಆತನ ಹೆಸರು ಶಾನಿಜಾ ಎಂದು ಬರೆಯಲಾಗಿದೆ. ಆತ ಜಾರ್ಜಿಯಾ ದೇಶದನಾಗಿದ್ದಾನೆ. ಇನ್ನೊಬ್ಬ ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ.
Click this button or press Ctrl+G to toggle between Kannada and English