ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ದಲ್ಲಿ ‘ಮಂಗಳೂರು ದಸರಾ’ ಶೋಭಾಯಾತ್ರೆ

1:40 PM, Wednesday, October 25th, 2023
Share
1 Star2 Stars3 Stars4 Stars5 Stars
(5 rating, 1 votes)
Loading...

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ದಲ್ಲಿ ‘ಮಂಗಳೂರು ದಸರಾ’ ಶೋಭಾಯಾತ್ರೆ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಗಳ ಜಲ ಸ್ತಂಭನದೊಂದಿಗೆ ಸಮಾಪನಗೊಂಡಿದೆ.

ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನಗಳೊಂದಿಗೆ ಮಹಾಗಣಪತಿ, ಶಾರದಾ ಮಾತೆಯೊಂದಿಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಿ, ಕೂಷ್ಮಾಂಡಿನಿ, ಸ್ಕಂದ ಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿಯರ ಪೂಜೆ ಯೊಂದಿಗೆ ಮಂಗಳವಾರ ಸಂಜೆ ಶೋಭಾಯಾತ್ರೆ ಮೆರವಣಿಗೆ ಆರಂಭಗೊಂಡಿತ್ತು.

ಸುಮಾರು 7 ಕಿ.ಮೀ. ನಗರ ಪ್ರದಕ್ಷಿಣೆಯ ಬಳಿಕ ಬುಧವಾರ ಮುಂಜಾನೆ ಮರಳಿ ಕುದ್ರೋಳಿ ಆಗಮಿಸಿದ ಬಳಿಕ ಪುಷ್ಕರಣಿಯಲ್ಲಿ ವಿಗ್ರಹಗಳ ಜಲ ಸ್ತಂಭನಗೊಳಿಸಲಾಯಿತು.

ಕುದ್ರೊಳಿ ಕ್ಷೇತ್ರದ ಆಧುನೀಕರಣದ ರೂವಾರಿ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಉಪಸ್ಥಿತರಿದ್ದರು.

ನವದುರ್ಗೆಯರ ಮೆರವಣಿಗೆಯ ಜೊತೆ ಆಕರ್ಷಕ ಹುಲಿ ವೇಷದ ತಂಡಗಳು ಬೃಹತ್ ಗಾತ್ರದ ಟ್ಯಾಬ್ಲೊಗಳ ಟ್ರ ಕ್ ಗಳು, ವಿವಿಧ ಸ್ತಬ್ಧ ಚಿತ್ರಗಳು, ವಿಶೇಷವಾಗಿ ಮಂಗಳೂರಿನ ಸೌಹಾರ್ದ ಸಾರುವ ಟ್ಯಾಬ್ಲೊ ಗಮನ ಸೆಳೆದಿದೆ. ಆಕರ್ಷಕ ಕೇರಳ ದ ತ್ರಿಶೂರಿನ ಬಣ್ಣದ ಕೊಡೆಗಳು, ಬ್ಯಾಂಡ್ ಸೆಟ್ಗಳು, ಸುಮಾರು 40 ಜಾನಪದ ಕುಣಿತಗಳ ತಂಡ, ಕೇರಳ ಚೆಂಡೆವಾದನ, ಕೊಂಬು ಕಹಳೆ ದೇಶದ ಇತಿಹಾಸವನ್ನು ಬಿಂಬಿಸುವ ಸುಮಾರು 60ಕ್ಕೂ ಅಧಿಕ ಸ್ತಬ್ಧಚಿತ್ರಗಳು ಈ ದಸರಾ ಮೆರವಣಿಗೆ ಯ ವಿಶೇಷ ಆಕರ್ಷಣೆ ಯಾಗಿತ್ತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English