ಕಾಸರಗೋಡು : ದಾಖಲೆಗಳಿಲ್ಲದ ಸುಮಾರು 33.24 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದ ಕಾಸರಗೋಡು ನಗರ ಠಾಣಾ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಮುಹಮ್ಮದ್ ಮತ್ತು ಸುಲೈಮಾನ್ ಬಂಧಿತ ಆರೋಪಿಗಳು.
ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ನಗರದ ಜುವಲ್ಲರಿಯೊಂದರ ಸಮೀಪ ಇಬ್ಬರನ್ನು ಬಂಧಿಸಲಾಯಿತು.
ಬಂಧಿತರ ಬಳಿ ಯಾವುದೇ ದಾಖಲೆ ಪತ್ರ ಲಭಿಸಿಲ್ಲ. ನಗರದಲ್ಲಿ ಅಕ್ರಮ ಹಣಕಾಸಿನ ವ್ಯವಹಾರ ದ ಬಗ್ಗೆ ಮಾಹಿತಿ ಲಭಿಸಿದ್ದರಿಂದ ದಾಳಿ ಹಾಗೂ ತಪಾಸಣೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Click this button or press Ctrl+G to toggle between Kannada and English