ಕಂಕನಾಡಿ ಗ್ರಾಮಾಂತರ ಠಾಣೆ ಹಾಗೂ ಬಜ್ಪೆ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆ

10:27 PM, Sunday, October 29th, 2023
Share
1 Star2 Stars3 Stars4 Stars5 Stars
(4 rating, 1 votes)
Loading...

ಮಂಗಳೂರು : ವಾಮಂಜೂರಿನಲ್ಲಿ ಕಂಕನಾಡಿ ಗ್ರಾಮಾಂತರ ಠಾಣೆಯ ನೂತನ ಕಟ್ಟಡ ಹಾಗೂ ಬಜ್ಪೆ ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ಉದ್ಘಾಟನೆಯನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್ ನೆರವೇರಿಸಿದರು.

 ಉದ್ಘಾಟನೆ ಬಳಿಕ ಮಾತನಾಡಿದ ಅವರು ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್ ಮಾಡುತ್ತಿದ್ದೇವೆ. ಸಿಸಿಟಿವಿಗಳ ಮೂಲಕ ಇಡೀ ರಾಜ್ಯದಲ್ಲಿ ಪೊಲೀಸ್ ಠಾಣೆಗಳನ್ನು ನಿಗಾ ಇಡುತ್ತೇವೆ. ಈ ರೀತಿಯ ನಿಗಾ ಸೆಂಟರ್ ದೇಶದಲ್ಲೇ ಮೊದಲು ಎಂದು ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. 

1950ರಲ್ಲಿ ಕಂಕನಾಡಿ ಗ್ರಾಮಾಂತರ, 1959 ರಲ್ಲಿ ಬಜ್ಪೆ ಠಾಣೆ ಸ್ಥಾಪನೆಯಾಗಿತ್ತು. ಇವೆರಡಕ್ಕೂ ಸುದೀರ್ಘ ಅವಧಿಯ ಬಳಿಕ ಸುಸಜ್ಜಿತ ಸ್ವಂತ ಕಟ್ಟಡ ಲಭಿಸಿದೆ. ಪೊಲೀಸರು ಕೆಲವು ಕಡೆ ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಸ್ಥಿತಿ ಇದೆ. ಎಲ್ಲ ಕಡೆಯೂ ಪೊಲೀಸ್ ಠಾಣೆಗಳನ್ನು ಆಧುನೀಕರಣ ಮಾಡುತ್ತಿದ್ದೇವೆ, ವಾಮಂಜೂರಿನಲ್ಲಿ ಕಮಾಂಡ್ ಸೆಂಟರ್ ರೂಪುರೇಷೆ ರೆಡಿಯಾಗಿದ್ದು ಅದರ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಒಟ್ಟು 134 ಕೋಟಿ ವೆಚ್ಚದಲ್ಲಿ ಈ ಕೆಲಸ ಆಗುತ್ತಿದ್ದು ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎಂದರು.

ಸಮಾಜ ಶಾಂತಿಯಿಂದ ಇದ್ದರೆ ಪೊಲೀಸ್ ಸ್ಟೇಶನ್ ಯಾಕೆ ಬೇಕು. ಒಂದು ಠಾಣೆ ಆಗಬೇಕಿದ್ದರೆ 300 ಅಪರಾಧ ಆಗಿರಬೇಕೆಂದು ಮಾನದಂಡ ಇದೆ. ಕೆಲವು ಶಾಸಕರು ಅಧಿವೇಶನದಲ್ಲಿ ತಮಗೆ ಪೊಲೀಸ್ ಠಾಣೆ ಬೇಕೆಂದು ಕೇಳಿದಾಗ, ಯಾಕೆ ಮಾರಾಯ್ರೆ ಅಂತ ಕೇಳಿದ್ದು ಇದೆ. ಅಪರಾಧ ಆಗದಂತೆ ನೋಡಿಕೊಂಡರೆ ಪೊಲೀಸ್ ಠಾಣೆ ಬೇಕಾಗಲ್ಲ ಎಂದಿದ್ದೇನೆ. ಆದರೆ ಪೊಲೀಸರು ಜಾಗೃತ ಇರುವುದರಿಂದ ಜನರು ನೆಮ್ಮದಿಯಲ್ಲಿದ್ದಾರೆ ಎಂದರು. 

ಅಪರಾಧ ಪ್ರಮಾಣ ಕಳೆದ ಆರು ತಿಂಗಳಲ್ಲಿ ಕಡಿಮೆಯಾಗಿದೆ. ಆದರೆ ಸೈಬರ್ ಕ್ರೈಮ್ ರೇಟ್ ಹೆಚ್ಚುತ್ತಿದೆ. ಸಾವಿರಾರು ಸೈಬರ್ ಕ್ರೈಮ್ ದಿನಕ್ಕೆ ಆಗುತ್ತಿದೆ. ಜನರ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ಹಣ ತಗೊಳ್ಳುತ್ತಿದ್ದಾರೆ. ಇದಕ್ಕಾಗಿ ಎಲ್ಲ ಠಾಣೆಗಳಲ್ಲಿಯೂ ಸೈಬರ್ ಅಪರಾಧಗಳನ್ನು ದಾಖಲಿಸಲು ಅವಕಾಶ ನೀಡಲಾಗಿದೆ. 

ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್, ಶಾಸಕ ಭರತ್ ಶೆಟ್ಟಿ, ಮಾಜಿ ಸಚಿವ ರಮಾನಾಥ ರೈ, ಎಂಎಲ್ಸಿಗಳಾದ ಮಂಜುನಾಥ ಭಂಡಾರಿ, ಹರೀಶ್ ಕುಮಾರ್, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಜಿಲ್ಲಾಧಿಕಾರಿ ಮುಲೈ ಮುಗಿಲನ್ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English