ಪುತ್ತೂರು : ಕಲ್ಲೇಗ ಟೈಗರ್ಸ್ ಹುಲಿ ವೇಷ ಕುಣಿತ ತಂಡದ ನಾಯಕ ಅಕ್ಷಯ್ ಕಲ್ಲೇಗ (26) ನನ್ನು ನವೆಂಬರ್ 6ರಂದು ತಡ ರಾತ್ರಿ 11.30ರ ಸುಮಾರಿಗೆ ಚಾಕು ಮಚ್ಚು ಬಳಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಬನ್ನೂರು ಜೈನರ ಗುರಿ ನಿವಾಸಿಗಳಾದ ಚೇತು ಅಲಿಯಾಸ್ ಚೇತನ್, ಮಂಜು ಯಾನೆ ಮಂಜುನಾಥ ಹಾಗೂ ಪಡೀಲು ನಿವಾಸಿ ಮನೀಶ್ ಮಣಿಯಾಣಿ ಮತ್ತು ಕೇಶವ ಕೊಲೆ ಆರೋಪಿಗಳಾಗಿದ್ದಾರೆ.
ಹತ್ಯೆಯ ಮೂರನೇ ಪ್ರಮುಖ ಆರೋಪಿಯು ಇಂದು ಮುಂಜಾನೆ ಪೊಲೀಸರಿಗೆ ಶರಣಾಗಿದ್ದಾನೆ. ಈ ಹತ್ಯೆಯಲ್ಲಿ ನೇರವಾಗಿ ಭಾಗಿಯಾದ ಇನ್ನಿಬ್ಬರು ಹತ್ಯೆಯ ಬಳಿಕ ಪೊಲೀಸರಿಗೆ ಶರಣಾಗಿದ್ದರು. ಇನ್ನೊರ್ವ ಆರೋಪಿಯು ಕೆ ಪೊಲೀಸರಿಗೆ ಶರಣಾಗುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ನವೆಂಬರ್ 6ರಂದು ತಡ ರಾತ್ರಿ 11.30ರ ಸುಮಾರಿಗೆ ಅಕ್ಷಯ್ ಹತ್ಯೆ ನಡೆದಿತ್ತು. ಭಾನುವಾರ ಸಂಜೆ ನೆಹರೂ ನಗರ ಸಮೀಪ ಬೈಕೊಂದು ಪಾದಾಚಾರಿಗೆ ಢಿಕ್ಕಿ ಹೊಡೆದಿತ್ತು. ಬೈಕ್ ಸವಾರ ಆರೋಪಿ ಚೇತನ್ ಸ್ನೇಹಿತನಾಗಿದ್ದರು. ಗಾಯಾಳು ಅಕ್ಷಯ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. ಗಾಯಾಳುವನ್ನು ಪುತ್ತೂರು ಆಸ್ಫತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸಾ ವೆಚ್ಚ ರೂ 1800 ಆಗಿತ್ತು ಎಂದು ಹೇಳಲಾಗುತ್ತಿದೆ. ಒಟ್ಟು 2 ಸಾವಿರ ರೂ ಪಾವತಿಸುವಂತೆ ಗಾಯಾಳು ಕಡಯಿಂದ ಆಕ್ಷಯ್ ಬೈಕ್ ಸವಾರನಿಗೆ ತಾಕೀತು ಮಾಡಿದ್ದರು ಎನ್ನಲಾಗಿದೆ. ಅಷ್ಟು ಹಣ ಪಾವತಿಸಲು ಒಪ್ಪದ ಚೇತನ್ ಕೇಸಿನಲ್ಲಿ ನೋಡುವ ಎಂದು ತಿಳಿಸಿದ್ದು, ಈ ವಿಚಾರವಾಗಿ ಈ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು ಎಂದು ತಿಳಿದು ಬಂದಿದೆ.
ಆ ಬಳಿಕ ನಿನ್ನೆ ತಡರಾತ್ರಿ ಚೇತನ್ ಸ್ನೇಹಿತ ಮನೀಶ್ ಅವರು ಅಕ್ಷಯ್ ಗೆ ಕರೆ ಮಾಡಿ ಮಾತುಕತೆಗೆ ನೆಹರೂ ನಗರಕ್ಕೆ ಬರಲು ತಿಳಿಸಿದ್ದರು. ಚೇತನ್ ಮತ್ತು ತಂಡದವರು ನ್ಯಾನೋ ಕಾರಿನಲ್ಲಿ ನಗರಕ್ಕೆ ಆಗಮಿಸಿದ್ದು ಆಕ್ಷಯ್ ಬೈಕಿನಲ್ಲಿ ಬಂದಿದ್ದರು ಎಂದು ಮೂಲಗಳು ತಿಳಿಸಿವೆ. ಅಕ್ಷಯ್ ಜತೆ ಇನ್ನಿಬ್ಬರು ಬಂದಿದ್ದರು, ಅವರು ದಾಳಿಯ ವೇಳೆ ಓಡಿ ತಪ್ಪಿಸಿಕೊಂಡರು ಎಂದು ಹೇಳಲಾಗುತ್ತಿದ್ದು ಇದು ಖಚಿತಗೊಂಡಿಲ್ಲ. ಅಕ್ಷಯ್ ಬೈಕ್ ನಲ್ಲಿ ಇದ್ದಾಗಲೇ ದಾಳಿ ನಡೆದಿದೆ ಎನ್ನಲಾಗುತ್ತಿದೆ.
ಮೊದಲು ಅಕ್ಷಯ್ ಕೈಗೆ ಮಾರಾಕಯುದ್ದ ದಿಂದ ದಾಳಿ ಮಾಡಿದ್ದಾರೆ. ದಾಳಿಯಿಂದ ತಪ್ಪಿಸಿಕೊಳ್ಳಲು ಅಕ್ಷಯ್ ನೋಡಿದಾಗ ಬೆನ್ನಟ್ಟಿದ್ದ ತಂಡ ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಕುತ್ತಿಗೆ ಹಾಗೂ ಕಾಲಿಗೆ ಕಡಿದು ಹತ್ಯೆ ಮಾಡಿರುವುದಾಗಿ ಹೇಳಲಾಗುತ್ತಿದೆ.
ಆರೋಪಿಗಳ ಪೈಕಿ ಓರ್ವ ಈ ಹಿಂದೆ ಅಕ್ಷಯ್ ಅವರ ಹುಲಿ ತಂಡದ ಜತೆ ಆತ್ಮೀಯ ಒಡನಾಟ ಹೊಂದಿದ್ದ ಎಂದು ಮೂಲಗಳು ತಿಳಿಸಿವೆ. ಆತ ಈ ಬಾರಿ ಮಾತ್ರ ಆತ ಈ ತಂಡದಿಂದ ಬೆರ್ಪಟ್ಟಿದ್ದ ಎನ್ನಲಾಗಿದೆ. ಆರೋಪಿಗಳ ಪೈಕಿ ಇನ್ನೊರ್ವ ಇನ್ನೊಂದು ಹುಲಿ ತಂಡದ ಜತೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದಎನ್ನಲಾಗಿದೆ.
ಕೇವಲ 2 ಸಾವಿರ ರೂಪಾಯಿ ವಿಚಾರವಾಗಿ ಎರಡು ತಂಡಗಳು ಗಲಾಟೆ ಮಾಡಿಕೊಂಡು ಸ್ನೇಹಿತನನ್ನು ಕಳೆದುಕೊಂಡಂತಾಗಿದೆ ಎಂದು ಅಕ್ಷಯ್ ಆಪ್ತರು ಹೇಳಿಕೊಂಡಿದ್ದಾರೆ.
Click this button or press Ctrl+G to toggle between Kannada and English