ಮಂಗಳೂರು : ಮೂಡಬಿದ್ರೆ ಪೊಲೀಸ್ ನಿರೀಕ್ಷಕರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಅವರು ಹಾಗೂ ಅವರ ಠಾಣಾ ಸಿಬ್ಬಂದಿಯವರು ಬೆಳಗಿನ ಜಾವ ಮೂಡಬಿದ್ರೆ ಠಾಣ ವ್ಯಾಪ್ತಿಯ ಮಾರ್ಪಾಡಿ ಗ್ರಾಮದ ಸಾವಿರ ಕಂಬದ ಬಸದಿಯ ಬಳಿ ಇರುವ ಕೊಂಡೆ ಸ್ಟ್ರೀಟ್ ಎಂಬಲ್ಲಿ , ಇಬ್ಬರು ಯುವಕರನ್ನು ಹಾಗೂ ಅವರ ವಶದಲ್ಲಿದ್ದ ನಂಬ್ರ ಪ್ಲೇಟ್ ಇಲ್ಲದ ಮೋಟಾರು ಸೈಕಲ್ ವಶಪಡಿಸಿ ಕೊಂಡಿರುತ್ತಾರೆ.
ರಾಯಲ್ ಎನ್ ಫೀಲ್ಡ್ Royal Enfield Classic 350 ಮೋಟಾರು ಸೈಕಲಿನ ಸಮೇತ ವಶಕ್ಕೆ ಪಡೆದು ಠಾಣೆಗೆ ಕರೆ ತಂದು ಕೂಲಂಕುಶವಾಗಿ ವಿಚಾರಣೆ ಮಾಡಿದಾಗ ಅವರ ವಶದಲ್ಲಿದ್ದ ರಾಯಲ್ ಎನ್ ಫೀಲ್ಡ್ Royal Enfield Classic 350 ಮೋಟಾರು ಸೈಕಲನ್ನು ಆರೋಪಿಗಳು ಅಕ್ಟೋಬರ್ 24 ಮತ್ತು 25 ರಂದು ಮಧ್ಯರಾತ್ರಿ ಮೂಡಬಿದ್ರೆ ಜೈನ್ ಪೇಟೆಯ ಬಡಗ ಬಸದಿ ಎದುರು ಇರುವ ದೇವಿ ಕೃಪಾ ಅಪಾರ್ಟ್ ಮೆಟ್ ನ ಪಾರ್ಕಿಂಗ್ ಏರಿಯಾದಲ್ಲಿ , ನಿಲಿಸಿದನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ, ಆರೋಪಿಗಳು ವಿಚಾರಣೆಯ ವೇಳೆ ಮೂಡಬಿದ್ರೆ ಠಾಣಾ ವ್ಯಾಪ್ತಿಯ ಮಾರ್ಪಾಡಿ ಗ್ರಾಮದಲ್ಲಿರುವ ಎವರ್ ಪ್ರೈಸ್ ರೆಸಿಡೆನ್ಸ್, ಅಪಾರ್ಟ್ ಮೆಂಟ್ ನ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ KA-19-EU-0009 ನೇ ರಾಯಲ್ ಎನ್ ಫೀಲ್ಡ್ Royal Enfield Classic 350 ಮೋಟಾರು ಸೈಕಲನ್ನು ಕೂಡ ಕಳವು ಮಾಡಿ ಪೇಪರ್ ಮಿಲ್ ಬಳಿ ಇರುವ ಕೀರ್ತಿ ನಗರ ಕ್ರಾಸ್ ಬಳಿ ಪೊದೆಗಳ ಮಧ್ಯೆ ಬಚ್ಚಿಟ್ಟಿರುವ ಬಗ್ಗೆ ಮಾಹಿತಿ ಕಲೆ ಹಾಕಿ ಅಲ್ಲಿಂದ KA-19-EU-0009 ನೇ ರಾಯಲ್ ಎನ್ ಫೀಲ್ಡ್ Royal Enfield Classic 350 ಮೋಟಾರು ಸೈಕಲನ್ನು ಕೂಡ ಸ್ವಾಧೀನಪಡಿಸಿಕೊಂಡಿದ್ದು ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ 3,00,000/- ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಆರೋಪಿಗಳಾದ ಸಯ್ಯದ್ ಝಾಕೀರ್ ಪ್ರಾಯ: 20 ವರ್ಷ ತಂದೆ ಸಯ್ಯದ್ ಆರೀಫ್ @ ಆಲಿ, ವಾಸ: 7-69/ಎ, ಇದಾ ಕೋಟೆಬಾಗಿಲು, ಪ್ರಾಂತ ಗ್ರಾಮ ಮೂಡಬಿದ್ರೆ, ತಾಲೂಕು ದ.ಕ ಜಿಲ್ಲೆ ಹಾಗೂ ಮೊಹಮ್ಮದ್ ಶಾಹೀಮ್ ಪ್ರಾಯ 24 ವರ್ಷ ತಂದೆ: ಮುಬೀನ್ ವಾಸ: ದರ್ಗಾ ರೋಡ್ ಮನೆ, ಕೋಟೆಬಾಗಿಲು ಪ್ರಾಂತ್ರ ಗ್ರಾಮ ಮೂಡಬಿದರೆ ತಾಲೂಕು ದ.ಕ ಜಿಲ್ಲೆ, ಇವರುಗಳನ್ನು ಸ್ವತ್ತು ಸಮೇತ ವಶಕ್ಕೆ ಪಡೆಯಲಾಗಿದೆ.
ಈ ಪ್ರಕರಣದಲ್ಲಿ ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರ್ವಾಲ್, IPS ರವರ ಮಾರ್ಗದರ್ಶನದಂತೆ, ಮಾನ DCP ಯವರಾದ ಶ್ರೀ ಸಿದಾರ್ಥ ಗೊಯಲ್ IPS (ಕಾ&ಸು), ಶ್ರೀ ದಿನೇಶ್ ಕುಮಾರ್ DCP (ಅ & ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಮಾನ ACP ಶ್ರೀ ಮನೋಜ್ ಕುಮಾರ್ ನಾಯಕ್ ರವರ ನಿರ್ದೇಶನದಂತೆ, ಈ ಕಾರ್ಯಚರಣೆಯಲ್ಲಿ, ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಸಂದೇಶ್ ಪಿ.ಜಿ ಹಾಗೂ ಠಾಣಾ ಅಪರಾಧ ವಿಭಾಗದ ಸಿಬ್ಬಂಧಿಯವರಾದ ಮೊಹಮ್ಮದ್ ಇಟ್ಬಾಲ್, ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್, ವೆಂಕಟೇಶ್ ಮತ್ತು ಚಂದ್ರಹಾಸ ರೈ ರವರುಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.
Click this button or press Ctrl+G to toggle between Kannada and English