ರಾಪಟ ತುಳು ಸಿನಿಮಾದ ಟ್ರೇಲರ್ ಬಿಡುಗಡೆ

8:37 PM, Tuesday, November 14th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು: ಅವಿಕಾ ಪ್ರೊಡಕ್ಷನ್ ಲಾಂಛನದಲ್ಲಿ ಡಾ ದೇವದಾಸ್ ಕಾಪಿಕಾಡ್ ರ ಚಿತ್ರಕತೆ ಸಾಹಿತ್ಯ ಸಂಭಾಷಣೆಯಲ್ಲಿ ತಯಾರಾದ ಅರ್ಜುನ್ ಕಾಪಿಕಾಡ್ ನಿರ್ದೇಶನದ ರಾಪಟ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭವು ಭಾರತ್ ಮಾಲ್ ನ ಬಿಗ್ ಸಿನಿಮಾಸ್ ನಲ್ಲಿ ನಡೆಯಿತು.

ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಡಾ. ದೇವದಾಸ್ ಕಾಪಿಕಾಡ್, ವಿಜಯಕುಮಾರ್ ಕೊಡಿಯಾಲ್ ಬೈಲ್, ಕಿಶೋರ್ ಡಿ ಶೆಟ್ಟಿ, ಪ್ರಕಾಶ್ ಪಾಂಡೇಶ್ವರ್, ಮುಖೇಶ್ ಹೆಗ್ಡೆ, ಸನಿಲ್ ಗುರು, ಉದ್ಯಮಿ ಸಂಜಯ್ ರಾವ್ , ಸಂತೋಷ್ ಸುವರ್ಣ , ರಾಕೇಶ್ ಶೆಟ್ಟಿ , ಅಶಿಕಾ ಸುವರ್ಣ, ಭೋಜರಾಜ ವಾಮಂಜೂರು, ಶರ್ಮಿಳಾ ಕಾಪಿಕಾಡ್ , ಸಚಿನ್ ಉಪ್ಪಿನಂಗಡಿ, ಅರ್ಜುನ್ ಕಾಪಿಕಾಡ್ಕಾವ್ಯಾ ಅರ್ಜುನ್ ಕಾಪಿಕಾಡ್ ದಿವ್ಯ, ಸಂದೀಪ್ ಶೆಟ್ಟಿ, ಪ್ರಕಾಶ್ ತೂಮಿನಾಡ್ ದೀಪಕ್ ರೈ ಪಾಣಾಜೆ ಸುನಿಲ್ ಸಚಿನ್ ಶೆಟ್ಟಿ ರೂಪ ವರ್ಕಾಡಿ, ಅನೂಪ್ ಸಾಗರ್ , ಸಂದೀಪ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಲಕ್ಷ್ಮೀಶ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು.

ಸಂಪೂರ್ಣ ಹಾಸ್ಯ ಮನರಂಜನೆಯ ರಾಪಟ ಸಿನಿಮಾದಲ್ಲಿ ಉತ್ತಮ ಕತೆ ಇದೆ. ಅರ್ಜುನ್ ಕಾಪಿಕಾಡ್ ನಿರ್ದೇಶನದ ಸಿನಿಮಾದಲ್ಲಿ ಖ್ಯಾತ ಕಲಾವಿದರು ಅಭಿನಯಿಸಿದ್ದಾರೆ.

ಡಿಸೆಂಬರ್ 1 ರಂದು ರಾಪಟ ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ. ರಾಪಟ ಸಿನಿಮಾ ಈಗಾಗಲೇ ವಿದೇಶದಲ್ಲಿ ಪ್ರೀಮಿಯರ್ ಶೋ ಮೂಲಕ ಬಾರೀ ಜನಮನ್ನಣೆಗೆ ಪಾತ್ರವಾಗಿದೆ. ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ಬೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಸಾಯಿಕೃಷ್ಣ, ತಿಮ್ಮಪ್ಪ ಕುಲಾಲ್, ಅನೂಪ್ ಸಾಗರ್, ಸುನಿಲ್ ಚಿತ್ರಾಪುರ, ರವಿ ರಾಮಕುಂಜ, ನಿರಿಕ್ಷಾ ಶೆಟ್ಟಿ, ವಿಕೀಷಾ ರಾವ್ ಮೊದಲಾದವರು ತಾರಾಗಣದಲ್ಲಿದ್ದಾರೆ. ಅರ್ಜುನ್ ಕಾಪಿಕಾಡ್ ನಿರ್ದೇಶನದ ರಾಪಟ ಹಾಸ್ಯ ಮಿಶ್ರಿತ ಮನರಂಜನೆಯನ್ನು ಒಳಗೊಂಡಿದೆ. ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಸಿನಿಮಾ ಮೂಡಿಬಂದಿದೆ. ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎನ್ನುವ ನಂಬಿಕೆ ಇದೆ. ಸಮಸ್ತ ತುಳುವರು ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ನಿರ್ದೇಶಕ ಅರ್ಜುನ್ ಕಾಪಿಕಾಡ್ ವಿನಂತಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English