ರಿಕ್ಷಾ ಚಾಲಕ ನ ಹಲ್ಲುಗಳನ್ನು ಉದುರಿಸಿ ಪರಾರಿಯಾಗಿದ್ದ ವ್ಯಕ್ತಿಯ ಬಂಧನ

2:45 PM, Wednesday, November 15th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಉಳ್ಳಾಲ : ತೊಕ್ಕೊಟ್ಟು ಸಮೀಪದ ಕುಂಪಲದಲ್ಲಿ ಸಹೋದ್ಯೋಗಿ ರಿಕ್ಷಾ ಚಾಲಕ ನಿಗೆ ಹಲ್ಲೆಗೈದು ಹಲ್ಲುಗಳನ್ನು ಉದುರಿಸಿ ಪರಾರಿಯಾಗಿದ್ದ ಆರೋಪಿ ರಿಕ್ಷಾ ಚಾಲಕನನ್ನು ಘಟನೆ ನಡೆದ 24ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ರೋಕೇಶ್(37) ಯಾನೆ ಸೈಕೋ ರೋಸ್ ಎಂಬಾತನನ್ನು ಬಂಧಿಸಲಾಗಿದೆ.

ಸುಶಾಂತ್(31) ಎಂಬವರಿಗೆ ಕಳೆದ ಆದಿತ್ಯವಾರ ಆರೋಪಿ ರೋಕೇಶ್ ಯಾನೆ ಸೈಕೋ ರೋಸ್ ಸುಶಾಂತ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮುಖಕ್ಕೆ ಬಲವಾಗಿ ಥಳಿಸಿದ್ದು ಎರಡು ಹಲ್ಲುಗಳು ಉದುರಿ ಹೋಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸುಶಾಂತ್ ರವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಬಳಿಕ ಅವರು ಸಹೋದ್ಯೋಗಿ ರೋಕೇಶ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಠಾಣೆಯಲ್ಲಿ ತನ್ನ ವಿರುದ್ದ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

ಇನ್ನು ಆರೋಪಿ ರೋಕೇಶ್ ಯಾನೆ ಸೈಕೊ ರೋಸ್ ಕುಂಪಲ ನಿವಾಸಿಯಾಗಿದ್ದು ಮಾದಕ ವ್ಯಸನಿಯಾಗಿದ್ದ ಅಲ್ಲದೆ ಈತನ ಹಲವು ಆರೋಪಗಳು ಕೂಡ ಕೇಳಿ ಬಂದಿವೆ.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English