ಎಸ್. ಪಿ. ವೈ. ಎಸ್. ಎಸ್. ಯೋಗ ಸಮಿತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ

12:27 PM, Tuesday, June 21st, 2022
Share
1 Star2 Stars3 Stars4 Stars5 Stars
(No Ratings Yet)
Loading...

ಮೂಡಬಿದ್ರೆ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.)ಕರ್ನಾಟಕ. (ಎಸ್ ಪಿ ವೈ ಎಸ್ ಎಸ್) ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ ಹಾಗೂ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ರಾಜ್ಯ ಸರ್ಕಾರ ಗುರುತಿಸಿದ ರಾಜ್ಯದ 75 ಐತಿಹಾಸಿಕ, ಪಾರಂಪರಿಕ ಸ್ಥಳವಾದ ಜೈನಕಾಶಿ ಮೂಡಬಿದ್ರೆಯ ಸಾವಿರ ಕಂಬದ ಬಸದಿಯಲ್ಲಿ ಜಿಲ್ಲಾಡಳಿತ ಹಾಗೂ ಆಯುಷ್ ಇಲಾಖೆಯ ಸಹಯೋಗದೊಂದಿಗೆ ಸಾಮೂಹಿಕ ಯೋಗಾಭ್ಯಾಸ ಹಾಗೂ ಯೋಗನಡಿಗೆ ಕಾರ್ಯಕ್ರಮ ಜರುಗಿತು.

ಮುಂಜಾನೆ 05:30ರಿಂದ ಆರಂಭವಾದ ಕಾರ್ಯಕ್ರಮ 07:00 ಘಂಟೆಗೆ ಸಮಾಪನಗೊಂಡಿತು. ಜಗದ್ಗುರು ಡಾ|| ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯರು ಮಹಾಸ್ವಾಮೀಜಿಗಳು ಇವರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮದ ಉದ್ಘಾಟನೆಗೊಂಡಿತು. ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.

ಸಮಿತಿಯ ಎರಡು ಸಾವಿರಕ್ಕೂ ಮಿಕ್ಕಿದ ಯೋಗಪಟುಗಳು,ಸಾರ್ವಜನಿಕ ಬಂಧುಗಳು,ಗಣ್ಯರು ಯೋಗಾಭ್ಯಾಸ ಮಾಡಿದರು.

ನಿನ್ನೆ ರಾತ್ರಿಯಿಂದಲೇ ನಿರಂತರವಾಗಿ ಮಳೆ ಸುರಿಯುತ್ತಿದ್ದು ಬಸದಿಯ ಅಂಗಣ ಪೂರ್ತಿ ಒದ್ದೆಯಾಗಿದ್ದರೂ ಇದ್ಯಾವುದನ್ನೂ ಲೆಕ್ಕಿಸದೆ ಯೋಗಪಟುಗಳು ಶಿಸ್ತುಬದ್ಧವಾಗಿ ಸಾಲಾಗಿ ಕುಳಿತು ಯೋಗಾಭ್ಯಾಸ ಮಾಡಿದರು. ಶ್ರೀಮತಿ ಸುಮನಾ ಹೊಸಬೆಟ್ಟು ಹಾಗೂ ಶಿಕ್ಷಕರ ತಂಡದವರು ಆಯುಷ್ ಇಲಾಖೆಯ ಪಠ್ಯಕ್ರಮದಂತೆ ಅಭ್ಯಾಸವನ್ನು ಮಾಡಿಸಿದರು. ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆಯನ್ನು ಯೂಟ್ಯೂಬ್ ಮೂಲಕ ಮಾಡಲಾಗಿತ್ತು. ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಮಹತ್ವವನ್ನು ಜಯರಾಮ ಚೆಂಬುಗುಡ್ಡೆ ಇವರು ತಿಳಿಸಿದರು.

ಮುಂಜಾನೆ 5:00 ಗಂಟೆ ಹೊತ್ತಿಗೆ ಬಸದಿಯ ಒಳಾಂಗಣ,ಸುತ್ತುಪೌಳಿ ಭರ್ತಿಯಾಗಿ.. ಬಳಿಕ ಹೊರಾಂಗಣದಲ್ಲಿಯೂ ಯೋಗಪಟುಗಳು ತುಂಬಿದ್ದರು.
ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮದ ಬಳಿಕ ಸಾವಿರ ಕಂಬದ ಬಸದಿಯಿಂದ ಸ್ವರಾಜ್ ಮೈದಾನ ಮೂಡಬಿದ್ರೆಯ ತನಕ ಯೋಗಪಟುಗಳು ಯೋಗ ನಡಿಗೆಯ ಮೂಲಕ ಯೋಗ ಜಾಗೃತಿ ಮೂಡಿಸುವ ಘೋಷಣೆಗಳನ್ನು ಕೂಗುತ್ತಾ ಸಾಲಾಗಿ ಸಾಗಿದರು.ಬಳಿಕ ನಾರಾವಿ ಸೂರ್ಯನಾರಾಯಣ ದೇವಸ್ಥಾನ ಸುತ್ತಮುತ್ತಲಿನ ದೇವಸ್ಥಾನಗಳಿಗೆ ಭೇಟಿನೀಡಿ ಯೋಗ ಜಾಗೃತಿ ಮಾಡಿದರು. ಸುಬ್ರಹ್ಮಣ್ಯ, ಪಂಜ, ಉಪ್ಪಿನಂಗಡಿ, ಪುತ್ತೂರು, ಕಲ್ಲಡ್ಕ, ಬಿಸಿರೋಡ್, ಪೊಳಲಿ, ಸುರತ್ಕಲ್ ಹಾಗೂ ಮಂಗಳೂರು ನಗರಗಳಿಂದ 15ಕ್ಕೂ ಹೆಚ್ಚು ಬಸ್ಸು, ಮಿನಿ ಬಸ್ಸು, ಕಾರು, ಜೀಪು, ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದ್ದರು. ಕಾರ್ಯಕ್ರಮದ ಬಳಿಕ ಬಸದಿಯ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು.

ಗೀತಾ ಷಡಕ್ಷರಿ ಇವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಕಾರ್ಯಕ್ರಮದ ಸಂಚಾಲಕರಾದ ಶಿವಪ್ರಸಾದ್ ಪೊಳಲಿ ವಂದಿಸಿದರು.

         

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English