ಮಂಗಳೂರು : ನಗರದಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ವಾಹನ ಚಾಲಕರು ಅನಾವಶ್ಯಕವಾಗಿ ಹಾರ್ನ್ ಬಳಸುತ್ತಿರುವುದರಿಂದ ಸರ್ಕಾರಿ ಕಛೇರಿಗಳ ಕೆಲಸ ಕಾರ್ಯಗಳ, ಶಾಲಾ ಕಾಲೇಜು ವಿದ್ಯಾರ್ಥಿಗಳ ಮತ್ತು ಆಸ್ಪತ್ರೆಗಳಲ್ಲಿನ ರೋಗಿಗಳ ಆರೋಗ್ಯದ ದೃಷ್ಟಿಯಿಂದ ಹಾಗೂ ಶಬ್ದ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಸಾರ್ವಜನಿಕರ ಹಿತದೃಷ್ಠಿಯಿಂದ ಮಂಗಳೂರು ನಗರದ ಈ ಕೆಳಕಂಡ ಪ್ರದೇಶಗಳನ್ನು “ಹಾರ್ನ್ ನಿಷೇಧಿತ ಪ್ರದೇಶ” (No Horn Zone) ಎಂದು ಘೋಷಿಸಲಾಗಿದೆ.
ಘೋಷಿತ ಪ್ರದೇಶಗಳ ವಿವರ:-
1) ಲೇಡಿಗೋಷನ್ ಆಸ್ಪತ್ರೆಯ ಸುತ್ತುಮುತ್ತಲಿನ ಪ್ರದೇಶ :-
I. ರಾವ್ & ರಾವ್ ವೃತ್ತದ ಸಮೀಪದ ಮೈದಾನ 3ನೇ ಅಡ್ಡ ರಸ್ತೆಯಿಂದ ಲೇಡಿಗೋಶನ್ ಆಸ್ಪತ್ರೆವರೆಗೆ.
II.ಲೇಡಿಗೋಶನ್ ಆಸ್ಪತ್ರೆಯಿಂದ ಕ್ಲಾಕ್ ಟವರ್ ವರೆಗೆ.
III.ಲೇಡಿಗೋಶನ್ ಆಸ್ಪತ್ರೆಯಿಂದ ಕಲ್ಪನಾ ಸ್ವೀಟ್ಸ್ ವರೆಗೆ.
2) ಹಂಪನಕಟ್ಟೆ ಜಂಕ್ಷನ್:-
I. ಹಂಪನಕಟ್ಟೆ ಜಂಕ್ಷನ್‍ನಿಂದ ಮಿಲಾಗ್ರಿಸ್ ಚರ್ಚ್ ವರೆಗಿನ ಪ್ರದೇಶ.
II. ಮಿಲಾಗ್ರಿಸ್ ಚರ್ಚ್ ಬಳಿಯ ವೆನ್‌ಲಾಕ್ ಆಸ್ಪತ್ರೆಯ ಗೇಟ್ (Causality Gate) ನಿಂದ ಮುತ್ತಪ್ಪ ಗುಡಿಯ ವರೆಗೆ.
III.ಹಂಪನಕಟ್ಟೆ ಜಂಕ್ಷನ್‌ನಿಂದ ಮಿನಿ ವಿಧಾನ ಸೌಧ ಕಟ್ಟಡದ ವರೆಗೆ.
3) ಡಾ. ಅಂಬೇಡ್ಕರ್ ವೃತ್ತದ ಸುತ್ತಲಿನ ಪ್ರದೇಶ:-
I.ಅಂಬೇಡ್ಕರ್ ವೃತ್ತದಿಂದ ಬಲ್ಮಠ ಜಂಕ್ಷನ್ ಕಡೆಗೆ 50 ಮೀಟರ್ ಪ್ರದೇಶ.
II.ಅಂಬೇಡ್ಕರ್ ವೃತ್ತದಿಂದ ಬಂಟ್ಸ್ ಹಾಸ್ಟೆಲ್ ವೃತ್ತದ ಕಡೆಗೆ 50 ಮೀಟರ್ ಪ್ರದೇಶ.
III.ಅಂಬೇಡ್ಕರ್ ವೃತ್ತದಿಂದ ಹಂಪನಕಟ್ಟೆ ವೃತ್ತದ ಕಡೆಗೆ 50 ಮೀಟರ್ ಪ್ರದೇಶ.
IV.ಬಾವುಟಗುಡ್ಡ (ಮಹಿಳಾ ಸಭಾ ಕಟ್ಟಡ) ದಿಂದ ಅಂಬೇಡ್ಕರ್ ವೃತ್ತದ ವರೆಗೆ.
4) ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯ ಉತ್ತರ ಬದಿಯ ಕಂಪೌಂಡ್ ಸಮೀಪದಿಂದ ಬಿಷಪ್ ವಿಕ್ಟರ್( ಅತ್ತಾವರ ನ್ಯೂ ರೋಡ್) ತಿರುವಿನವರೆಗೆ.
5) ದೇರಳಕಟ್ಟೆ ಯೇನಪೋಯ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ 100 ಮೀಟರ್ ಪ್ರದೇಶ.
6) ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ 100 ಮೀಟರ್ ಪ್ರದೇಶ.
ವಾಹನ ಚಾಲಕರು ಮೇಲ್ಕಂಡ ಸ್ಥಳಗಳಲ್ಲಿ ವಾಹನಗಳ ಹಾರ್ನ್ ಬಳಸುವುದನ್ನು ನಿಷೇಧಿಸಲಾಗಿದೆ.
ಭಾರತೀಯ ಮೋಟಾರು ವಾಹನ ಅಧಿನಿಯಮ (ತಿದ್ದುಪಡಿ) 2019 ರ ಕಲಂ 194 (ಎಫ್) ರಂತೆ ಹಾರ್ನ್ ನಿಷೇಧಿಸಿದ ಸಂಚಾರ ಸೂಚನಾ ಫಲಕ ಇರುವ ಪ್ರದೇಶದಲ್ಲಿ ಹಾರ್ನ್ ಬಳಸಿದ್ದಲ್ಲಿ ಅಂತಹ ವಾಹನ ಚಾಲಕರ ಮೇಲೆ ಮೊದಲನೆಯ ಉಲ್ಲಂಘನೆಗೆ ರೂ 1000/- ದಂಡವನ್ನು ಹಾಗೂ ಎರಡನೇಯ ಹಾಗೂ ತದನಂತರದ ಪ್ರತಿ ಉಲ್ಲಂಘನೆಗೆ ರೂ 2000/- ದಂಡವನ್ನು ವಿಧಿಸಲಾಗುವುದು.
Click this button or press Ctrl+G to toggle between Kannada and English