ಫ್ರೆಂಡ್ಸ್ ಬಲ್ಲಾಳ್ ಭಾಗ್ ಬಿರುವೆರ್ ಕುಡ್ಲ ಸ್ಪಂದನ ಸೇವಾ ಯೋಜನೆಯಡಿ 1ಲಕ್ಷ ಧನ ಸಹಾಯ ಹಸ್ತಾಂತರ

6:23 PM, Tuesday, November 21st, 2023
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಫ್ರೆಂಡ್ಸ್ ಬಲ್ಲಾಳ್ ಭಾಗ್ ಬಿರುವೆರ್ ಕುಡ್ಲ ಸ್ಪಂದನ ಸೇವಾ ಯೋಜನೆಯಡಿ ಕ್ಯಾನ್ಸರ್ ರೋಗಕ್ಕೆ ತುತ್ತಾದ ಬಲ್ಲಾಳ್ `ಭಾಗ್ ನಿವಾಸಿ ಜಗದೀಶ್ ಶೆಟ್ಟಿಗಾರ್ ಕುಟುಂಬಕ್ಕೆ 1ಲಕ್ಷ ರೂ. ಆರ್ಥಿಕ ನೆರವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಕುದ್ರೋಳಿ ಕ್ಷೇತ್ರದಲ್ಲಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತಾಡಿದ ಅವರು ಕರಾವಳಿ ಕರ್ನಾಟಕದ ಹೆಮ್ಮೆಯ ಸೇವಾ ಸಂಘಟನೆ ಬಿರುವೆರ್ ಕುಡ್ಲ ಕಳೆದ 9 ವರ್ಷದಲ್ಲಿ ದಾನಿಗಳ ನೆರವಿನಿಂದ ಕೋಟ್ಯಾಂತರ ರೂ.ಆರ್ಥಿಕ ಸಹಾಯವನ್ನು ಸಾವಿರಾರು ಕುಟುಂಬಗಳಿಗೆ ವಿತರಿಸಿ ಆಸರೆಯಾಗಿದೆ. ಇವರ ಸೇವೆ ನಿರಂತರವಾಗಿರಲಿ ಎಂದು ಶುಭ ಹಾರೈಸಿದರು.

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರು ಶ್ರೀ ವೇದ ವ್ಯಾಸ ಕಾಮತ್ ಮಾತನಾಡಿ, ಬಡಜನರಿಗೆ, ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ, ಸೂರಿಲ್ಲದ ಜನರಿಗೆ ಹತ್ತಕ್ಕೂ ಹೆಚ್ಚಿನ ಮನೆ ವಿತರಣೆ,ಕೊರೋನಾ ಸಂದರ್ಭದಲ್ಲಿ ಉಚಿತ ಸುಸಜ್ಜಿತ ಅಂಬ್ಯುಲೆನ್ಸ್ ಸೇವೆ ಸಹಿತ ಇತರರಿಗೆ ಪ್ರೇರಣೆಯಾಗುವ ರೀತಿ ಸೇವಾ ಕಾರ್ಯ ನಡೆಸಿದ್ದಾರೆ. ಇನ್ನೂ ಮುಂದೆಯೂ ಸಂಸ್ಥೆ ಇನ್ನಷ್ಟು ಸೇವೆ ಮಾಡಲು ಭಗವಂತನು ಶಕ್ತಿ ನೀಡಲಿ ಎಂದು ಹಾರೈಸಿದರು.

ಕುದ್ರೋಳಿ ಶ್ರೀ ಗೋಕರ್ಣನಾಥೆಶ್ವರ ದೇವಸ್ಥಾನದ ಅಧ್ಯಕ್ಷರು ಎಚ್. ಎಸ್ ಸಾಯಿರಾಮ್,ಫ್ರೆಂಡ್ಸ್ ಬಲ್ಲಾಳ್ ಭಾಗ್ ಬಿರುವೆರ್ ಕುಡ್ಲ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿ ಬಳ್ಳಾಲ್‍ಬಾಗ್,ಬಿಜೆಪಿ ಮುಖಂಡರಾದ ರಂದೀಪ್ ಕಾಂಚನ್, ವಸಂತ್ ಜೆ. ಪೂಜಾರಿ,ಉದ್ಯಮಿ ರಘುರಾಮ್ ಶೆಟ್ಟಿ , ರಾಕೇಶ್ ಪೂಜಾರಿ ,ಲತೀಶ್ ಪೂಜಾರಿ ಬಲ್ಲಾಳ್ ಭಾಗ್,ಗಿರೀಶ್ ಬತ್ತೇರಿ,ಗೌತಮ್ ಕರ್ಕೇರ,ರೋಷನ್ ಮೆನೇಜಸ್,ರಾಕೇಶ್ ಸಾಲಿಯಾನ್ ಚಿಲಿಂಬಿ,ಗಣೇಶ್ ಚಿಲಿಂಬಿ,ದಿನಿಲ್ ಬಲ್ಲಾಳ್ ಭಾಗ್,ಒಝಿ ಪದವಿನಂಗಡಿ,ಪುಷ್ಪ ಬಲ್ಲಾಳ್ ಭಾಗ್,ರಾಜೇಶ್ ಬಲ್ಲಾಳ್ ಭಾಗ್, ರಾಕೇಶ್ ಪೂಜಾರಿ ಚಿಲಿಂಬಿ,ಬತ್ತೇರಿ ಫ್ರೆಂಡ್ಸ್ ಅಧ್ಯಕ್ಷ ಗಿರೀಶ್, ಗೌತಮ್ ಕರ್ಕೇರ ಹಾಗೂ ಬಿರುವೆರ್ ಕುಡ್ಲ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English