ಮಂಗಳೂರು: ಹತ್ತು ವರ್ಷಗಳ ಹಿಂದೆ ಆಧಾರ್ ಕಾರ್ಡ್ ಮಾಡಿಸಿಕೊಂಡವರು ಇದೀಗ ಡಿ.14ರ ಮೊದಲು ಅಪ್ಡೇಟ್ ಮಾಡಬೇಕಾಗಿರುವುದು ಕಡ್ಡಾಯವಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ.
2011ರಿಂದ 2015ರೊಳಗೆ ಆಧಾರ್ ಕಾರ್ಡ್ ಮಾಡಿಸಿಕೊಂಡು ಒಮ್ಮೆಯೂ ಅಪ್ಡೇಟ್ ಮಾಡದವರಿಗೆ ಇದೀಗ ಅಪ್ಡೇಟ್ ಮಾಡುವಂತೆ ಸಂದೇಶ ರವಾನೆಯಾಗುತ್ತಿದೆ. ಅವರು ಸಮೀಪದ ಆಧಾರ ಕೇಂದ್ರದಲ್ಲಿ ಹೋಗಿ ತಮ್ಮ ಆಧಾರ್ ಕಾರ್ಡ್‌ನ್ನು ಅಪ್ಡೇಟ್ ಮಾಡಬೇಕಾಗಿದೆ
ಆರಂಭದಲ್ಲಿ ಆಧಾರ್ ಮಾಡಿಸುವಾಗ ಇದ್ದ ವಿಳಾಸ ಆ ಬಳಿಕ ಬದಲಾವಣೆಯಾಗಿರುತ್ತದೆ. ಕೆಲವರ ವಿಳಾಸ ಸರಿಯಾಗಿರುವುದಿಲ್ಲ. ಹೀಗಾಗಿ ಅಪ್ಡೇಟ್ ಮಾಡಬೇಕಾಗಿದೆ. ದ.ಕ. ಜಿಲ್ಲೆಯ ಬಹುತೇಕ ಅಂಚೆ ಕಚೇರಿಗಳಲ್ಲಿ ಆಧಾರ್ ಕಾರ್ಡ್‌ನ್ನು ಅಪ್ಡೇಟ್ ಮಾಡಲು ಅವಕಾಶ ಇದೆ.
ಆಧಾರ್ ಕಾರ್ಡ್ ಮಾಹಿತಿ ಸೋರಿಕೆ ಹಿನ್ನೆಲೆಯಲ್ಲಿ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಜನ ಸಮಾನ್ಯರು ಆಧಾರ್ ಕಾರ್ಡ್ ಅಪ್ಡೇಟ್ ಮಾಡುವಂತೆ ಸಂದೇಶ ಬಂದ ಜನರು ಅನಮಾನದಿಂದ ನೋಡುವಂತಾಗಿದೆ.
ಹಲವು ಮಂದಿ ಈ ಬಗ್ಗೆ ಆಧಾರ್ ಅಪ್ಡೇಟ್ ಸುದ್ದಿಯ ನೈಜತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿ ಹಿನ್ನೆಲೆಯಲ್ಲಿ ಸತ್ಯಾಸತ್ಯೆಯ ಬಗ್ಗೆ ತಿಳಿಯಲು ಅವರನ್ನು ವಾರ್ತಾಭಾರತಿ ಸಂಪರ್ಕಿಸಿದಾಗ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.
ಆಧಾರ್ ಕಾರ್ಡ್ ಭಾರತದ ನಿವಾಸಿಯ ಪ್ರಮುಖ ದಾಖಲೆಯಾಗಿದ್ದು, ಇದು ಇಲ್ಲದೆ ಇವತ್ತು ಯಾವುದೇ ಸರಕಾರಿ ಮತ್ತು ಸರ್ಕಾರೇತರ ಕೆಲಸ ನಡೆಯುವುದಿಲ್ಲ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಭಾರತದ ನಿವಾಸಿಗಳಿಗೆ ಆಧಾರ್ ಕಾರ್ಡ್ ನೀಡುವ ಸಂಸ್ಥೆಯಾಗಿದೆ.
Click this button or press Ctrl+G to toggle between Kannada and English