ಉಡುಪಿ: ಎಸ್ ಎಸ್ ಫಿಶ್ ಕಟಿಂಗ್ ಯೂನಿಟ್ ನಲ್ಲಿ ಅಸ್ಸಾಂ ಯುವಕನೊಬ್ಬನಿಗೆ ದೆವ್ವದ ಆವೇಶ ಆಗಿ ಜೊತೆಯಲ್ಲಿದ್ದ ಕಾರ್ಮಿಕರ ತಂಡ ಓಡಿ ಹೋಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉಡುಪಿ ಜಿಲ್ಲೆ ಕಾಪುವಿನ ಉದ್ಯಾವರ ಪಿತ್ರೋಡಿಯಲ್ಲಿ ಈ ಘಟನೆ ನಡೆದಿದ್ದು ಕೊಠಡಿಯಲ್ಲಿದ್ದ ಎಲ್ಲಾ ಕಾರ್ಮಿಕರು ದೆವ್ವ ಇದೆಯೆಂದು ಆತಂಕಪಟ್ಟಿದ್ದಾರೆ. ಅಸ್ಸಾಂ ಬಿಹಾರ ಪಶ್ಚಿಮ ಬಂಗಾಳದ ಕಾರ್ಮಿಕರು ಭಯ ಬಿದ್ದು ಓಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇಲ್ಲಿನ ಸ್ಥಳೀಯರು ಕೊಡುವ ಮಾಹಿತಿ ಪ್ರಕಾರ, ಫಿಶ್ ಕಟ್ಟಿಂಗ್ ಯೂನಿಟ್ ಹಿಂಭಾಗದಲ್ಲಿ ಮಾರಿಗುಡಿ ಕಲ್ಲು ಇದೆ. ಅಲ್ಲಿ ಪ್ರತಿವರ್ಷ ಕೋಳಿ ಬಲಿ ನಡೆಯುತ್ತದೆ. ಕಾರ್ಮಿಕರು ಅಲ್ಲಿ ಸ್ವಚ್ಛತೆಯನ್ನ ಕಾಪಾಡುವುದಿಲ್ಲ ಹಾಗಾಗಿ ಈ ರೀತಿ ಆಗಿರಬಹುದು ಎಂದು ಹೇಳುತ್ತಿದ್ದಾರೆ.
ಸೋಮವಾರ ಅಸ್ಸಾಂ ಬಿಹಾರ ಯುವಕರು ದೆವ್ವದ ಭಯ ಎಂದು ಕಂಪೆನಿಯನ್ನು ಬಿಟ್ಟು ಹೋಗಿದ್ದಾರೆ. ಆದರೆ ಎಸ್ ಎಸ್ ಫಿಶ್ ಕಟಿಂಗ್ ಯೂನಿಟ್ ನಲ್ಲಿ ಕೆಲಸ ಮಾಡುವ ಹಿರಿಯ ಕಾರ್ಮಿಕರು ಇದೆಲ್ಲಾ ದೊಡ್ಡ ನಾಟಕ ಎಂದಿದ್ದಾರೆ. ನಾವು ರಾತ್ರಿ ಹಗಲು ಇಲ್ಲೇ ಮನೆ ಮಾಡಿಕೊಂಡಿದ್ದೇವೆ. ಘಟನೆ ನಡೆದ ದಿನ ನಾನು ಸೈಟ್ ನಲ್ಲೆ ಇದ್ದೆ. ಕೆಲಸ ಬಿಟ್ಟು ಹೋಗಲು ದೆವ್ವ ಪಿಶಾಚಿ ಭೂತ ಎಂಬ ನಾಟಕಗಳನ್ನಾಡಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ಬಿಹಾರ ಮೂಲದ ಯುವಕನಿಗೆ ಹಿಂದಿನಿಂದಲೂ ಆವೇಶ ಬರುತ್ತಿತ್ತು. ಆತನ ಚಿಕಿತ್ಸೆಗೆ ಜೊತೆಗಿರುವ ಗೆಳೆಯರು ಬಾಬಾ, ಮುಲ್ಲಾಗಳನ್ನು ಕರೆಸಿದ್ದರು ಎಂಬ ಮಾಹಿತಿಯೂ ಇದೆ. ಒಟ್ಟಿನಲ್ಲಿ ಸ್ಥಳೀಯ ಗ್ರಾಮಸ್ಥರು ಸುತ್ತಮುತ್ತ ದೆವ್ವ ಇದೆ ಎಂಬೂದನ್ನು ತಳ್ಳಿಹಾಕಿದ್ದಾರೆ. ಕಾರ್ಮಿಕರ ಕಟ್ಟುಕಥೆ ಎಂದಿದ್ದಾರೆ.
Click this button or press Ctrl+G to toggle between Kannada and English