ಅಜ್ಜನ ಮರಣ ಪತ್ರಕ್ಕೆ ಲಂಚ ಪಡೆದ ಗ್ರಾಮ ಲೆಕ್ಕಿಗನನ್ನು ಬಂಧಿಸಿದ ಪೊಲೀಸರು

5:56 PM, Friday, November 24th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಅಜ್ಜನ ಮರಣ ಪತ್ರವನ್ನು ಕೇಳಲು ಬಂದ ವ್ಯಕ್ತಿಗೆ ಸುಮಾರು 13 ಸಾವಿರ ರೂಪಾಯಿಗಳನ್ನು ಲಂಚ ಕೇಳಿದ ಚೇಳ್ಯಾರು ಗ್ರಾಮದ ಗ್ರಾಮ ಲೆಕ್ಕಿಗನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಚೇಳ್ಯಾರು ಗ್ರಾಮದ ವ್ಯಕ್ತಿಯೊಬ್ಬರು ತನ್ನ ತಾಯಿಯ ಹೆಸರಿನಲ್ಲಿದ್ದ ಜಾಗದಲ್ಲಿ 5 ಸೆಟ್ಸ್ ಜಾಗವನ್ನು ಮಾರಾಟ ಮಾಡುವ ಉದ್ದೇಶದಿಂದ ಅಜ್ಜನ ಮರಣ ಪತ್ರ ಹಾಗೂ ಸಂತತಿ ನಕ್ಷೆ ಮಾಡಲು ಮುಂದಾಗಿದ್ದು ಮಂಗಳೂರು ತಾಲೂಕಿನ ಚೇಳ್ಯಾರು ಗ್ರಾಮದ ಗ್ರಾಮ ಲೆಕ್ಕಿಗ ವಿಜಿತ್ ಬಳಿ ಅರ್ಜಿ ಹಾಕಿದ್ದರು.

ವಿಜಿತ್ ನ. 20 ರಂದು ಅರ್ಜಿ ಹಾಕಿದ ವ್ಯಕ್ತಿಗೆ ಕರೆಮಾಡಿ ನಿಮ್ಮ ಅಜ್ಜನ ಮರಣ ಪ್ರಮಾಣ ಪತ್ರ ರೆಡಿಯಾಗಿದೆ, 15 ಸಾವಿರ ಹಿಡಿದುಕೊಂಡು ಬನ್ನಿ ಎಂದು ಹೇಳಿದ್ದರು. ಆಗ ವ್ಯಕ್ತಿಯು ತನ್ನಲ್ಲಿ ಅಷ್ಟು ಹಣ ಇಲ್ಲವೆಂದು ಹೇಳಿದಾಗ ನಾಳೆಯಾದರೂ ತೆಗೆದುಕೊಂಡು ಬನ್ನಿ ಎಂದು ಹೇಳಿದ್ದರು, ಕೊನೆಗೆ 13 ಸಾವಿರ ಹಣವನ್ನು ಸುರತ್ಕಲ್ ನಾಡ ಕಚೇರಿಗೆ ತಂದುಕೊಡಿ ಎಂದು ಹೇಳಿದರು. ಈ ಬಗ್ಗೆ ಆ ವ್ಯಕ್ತಿಯು ಲೋಕಾಯುಕ್ತಕ್ಕೆ ದೂರನ್ನು ನೀಡಿದ್ದು ಹಣ ಪಡೆಯುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಮಾಡಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English