ಸಿಸಿಬಿ ಪೊಲೀಸರ ಕಾರ್ಯಾಚರಣೆ ಯಲ್ಲಿ ಕೋಟ್ಯಾಂತರ ಮೌಲ್ಯದ ಅಂಬರ್ ಗ್ರೀಸ್ ವಶ

5:54 PM, Saturday, November 25th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು: ಸಿಸಿಬಿ ಪೊಲೀಸರ ಕಾರ್ಯಾಚರಣೆ ಯಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್) ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದು ಆರೋಪಿಗಳಿಂದ ಒಟ್ಟು 1,62,80,000/- ರೂ ಮೌಲ್ಯದ ಸೊತ್ತು ವಶಕ್ಕೆ ಪಡೆಯಲಾಗಿದೆ.

ನವೆಂಬರ್ 25 ರಂದು ರಂದು ಮಂಗಳೂರು ನಗರದ ಪಂಪ್ ವೆಲ್ ಬಳಿಯ ಇಂಡಿಯಾನ ಆಸ್ಪತ್ರೆಯ ಹತ್ತಿರ 4 ಜನ ವ್ಯಕ್ತಿಗಳು ಸ್ವಿಪ್ಟ್ ಕಾರಿನಲ್ಲಿ ತಿಮಿಂಗಿಲದ ವಾಂತಿ(ಅಂಬರ್ ಗ್ರೀಸ್) ಎಂಬ ಬೆಲೆಬಾಳುವ ವನ್ಯ ಜೀವಿ ಉತ್ಪನ್ನವನ್ನು ಗಿರಾಕಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಮೂರು ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ದಸ್ತಗಿರಿ ಮಾಡಿದ ಮೂರು ಆರೋಪಿತರಿಂದ 1,57,50,000/- ರೂ ಮೌಲ್ಯದ 1.575 ಕೆಜಿ ತಿಮಿಂಗಿಲದ ವಾಂತಿ(ಅಂಬರ್ ಗ್ರೀಸ್), ಕಾರು ಹಾಗೂ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿರುತ್ತಾರೆ.

ಆರೋಪಿಗಳಿಂದ ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ವಿವರ 1.575 ಕೆಜಿ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್)-( 1,57,50,000/-), REDMI ಕಂಪನಿಯ ಮೊಬೈಲ್ ಫೋನ್ -1 (10,000/-), ಕೆಎ-25-MG-0625 ನೇ ಸಿಲ್ವರ್ ಬಣ್ಣದ ಸ್ವಿಪ್ಟ್-1 (5,00,000/-) , MOTOROLA ಕಂಪನಿಯ ಮೊಬೈಲ್ ಫೋನ್ -1 (10,000/-), REDMI ಕಂಪನಿಯ ಮೊಬೈಲ್ ಫೋನ್ -1 (10,000/-) ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ/- 1,62,80,000/-ರೂ ಆಗಬಹುದು.

ಆರೋಪಿಗಳಾದ ಪ್ಯಾರೇಜಾನ್ @ ಸೇಟು, ಪ್ರಾಯ:37 ವರ್ಷ, ತಂದೆ: ದಿ. ಅಬ್ದುಲ್ ಘನಿ, ವಿಳಾಸ: ಬಾಡಿಗೆ ಮನೆ, ಸಂತೆ ಮಾರ್ಕೆಟ್, ಅಕ್ಸಾ ಮಸೀದಿ ಹತ್ತಿರ, ತಮಿಳ್ ಕಾಲೊನಿ, ಚಿಕ್ಕಮಗಳೂರು ಜಿಲ್ಲೆ. ಹಾಲಿ ವಾಸ: ಇಬ್ರಾಹಿಂ ರವರ ಬಾಡಿಗೆ ಮನೆ, ಪಾತಿರತೋಟ ಹೌಸ್, ಮಂಗಿಲಪದವು, ವಿಟ್ಲ , ಬಂಟ್ವಾಳ ತಾಲೂಕು, ಬದ್ರುದ್ದೀನ್ @ ಬದ್ರು, ಪ್ರಾಯ:28 ವರ್ಷ, ತಂದೆ: ಅಬ್ದುಲ್ ರಹಿಮಾನ್, ವಿಳಾಸ: ಪಾತಿರತೋಟ ಹೌಸ್, ಮಂಗಿಲಪದವು, ವಿಟ್ಲ , ಬಂಟ್ವಾಳ ತಾಲೂಕು, ದ.ಕ. ಜಿಲ್ಲೆ, ರಾಜೇಶ್.ಆರ್, ಪ್ರಾಯ:22 ವರ್ಷ, ತಂದೆ: ರವಿಚಂದ್ರನ್. ಎಸ್, ವಿಳಾಸ: ಮನೆ ನಂಬ್ರ 32, ಸನ್ನಧಿ ಕೋಯಿಲ್ ಟೆಂಪಲ್ ಸ್ಟ್ರೀಟ್, ನಾಗಪಟ್ಟಿನಂ ಜಿಲ್ಲೆ, ತಮಿಳುನಾಡು ರಾಜ್ಯ

ಈ ಪತ್ತೆ ಕಾರ್ಯವನ್ನು ಮಂಗಳೂರು ನಗರ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರ್ವಾಲ್ ಐಪಿಎಸ್ ರವರ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಶ್ರೀ ಸಿದ್ದಾರ್ಥ ಗೋಯಲ್ ಐಪಿಎಸ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಶ್ರೀ ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಎಸಿಪಿ ಶ್ರೀ ಪಿ.ಎ.ಹೆಗಡೆ ರವರ ನೇತೃತ್ವದಲ್ಲಿ ಈ ಆರೋಪಿಗಳ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿಯವರು ಪಾಲ್ಗೋಂಡಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English