ಮಂಗಳೂರು : ಜನವರಿ 4 ರಂದು ಸಕಲೇಶಪುರ ಬಳಿ ಕಡಗರವಳ್ಳಿ- ಎಡಕುಮೇರಿ ನಡುವೆ ನಡೆದ ಯಶವಂತಪುರ- ಮಂಗಳೂರು ಎಕ್ಸ್‌ಪ್ರೆಸ್ ರೈಲು ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸದಂತೆ ಸಮಯಪ್ರಜ್ಞೆ ಮೆರೆದ ಚಾಲಕ ಮೈಸೂರು ಮೂಲದ ಶಿವರಾಮುರವರನ್ನು ಭಾನುವಾರ ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕ್ ಮತ್ತು ನವೋದಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾನುವಾರ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಶಿವರಾಮನ್ ರಿಗೆ 50 ಸಾವಿರ ರೂಪಾಯಿ ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ರಾಜ್ಯ ಸಭೆ ಸದಸ್ಯ ಆಸ್ಕರ್ ಫರ್ನಾಂಡಿಸ್ ಮಾತನಾಡಿ 1800 ಮಂದಿ ಪ್ರಯಾಣಿಕರ ಜೀವ ರಕ್ಷಣೆ ಮಾಡುವ ಮೂಲಕ ಸಾಧನೆ ಮೆರೆದಿದ್ದಾರೆ. ಅವರನ್ನು ಗುರುತಿಸಿ ಸನ್ಮಾನ ಮಾಡುವುದು ಮುಖ್ಯ. ಈ ಮೂಲಕ ಇತರರಿಗೆ ಅವರು ಮಾದರಿಯಾಗಲಿ ಎಂಬುದೇ ಸನ್ಮಾನದ ಹಿಂದಿನ ಸಂದೇಶ. ಸಮಯಪ್ರಜ್ಞೆ ಎಲ್ಲ ಚಾಲಕರಿಗೂ ಬಹುಮುಖ್ಯ, ರಾಷ್ಟ್ರ ಪ್ರಶಸ್ತಿ ಬಗ್ಗೆ ರೈಲ್ವೆ ಇಲಾಖೆ ಜತೆ ಮಾತನಾಡುತ್ತೇನೆ ಎಂದರು.
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಚಾಲನೆ ಸಂದರ್ಭ ಚಾಲಕ ತನ್ನ ಮನಸ್ಸನ್ನು ಚಂಚಲಗೊಳಿಸದೆ ಸಮಯ ಪ್ರಜ್ಞೆಯಿಂದ ಸುರಕ್ಷತೆ ಪಾಲಿಸಬಹುದು ಎಂಬುದನ್ನು ಚಾಲಕ ಶಿವರಾಮನ್ ತೋರಿಸಿಕೊಟ್ಟಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವರಾಮುರವರು, ಜನವರಿ 4 ರ ಮುಂಜಾನೆ ಸುಮಾರು 4.50 ರ ವೇಳೆಗೆ ಸಕಲೇಶಪುರದ ಎಡಕುಮೇರಿ ಸುರಂಗ ದಾಟಿದ ಬಳಿಕ ರೈಲುಚಕ್ರ ಹಳಿ ತಪ್ಪಿರುವುದು ಅರಿವಿಗೆ ಬಂತು. ರೈಲು ಗಂಟೆಗೆ 62 ಕಿ.ಮೀ. ವೇಗದಲ್ಲಿ ಓಡುತ್ತಿತ್ತು. ತಕ್ಷಣ ನಾನು ಬ್ರೇಕ್ ಹಾಕಿದೆ. ಹಾಗೆ 50 ಮೀಟರ್ ದೂರದಲ್ಲಿ ನಿಂತಿತು. ನಾನು ಬ್ರೇಕ್ ಹಾಕದೆ ತಡವರಿಸಿದ್ದರೆ, ರೈಲಿನಲ್ಲಿದ್ದ ಅಷ್ಟೂ ಪ್ರಯಾಣಿಕರಿಗೆ ಅಪಾಯವಾಗುತ್ತಿತ್ತು. ಆ ಕ್ಷಣಕ್ಕೆ ನಾನು ನನ್ನ ಕರ್ತವ್ಯ ಮುಗಿಸಿದೆ. ಆ ಶಕ್ತಿಯನ್ನು ನನಗೆ ಭಗವಂತನೇ ಕೊಟ್ಟ. ನನ್ನ ಸಮಯ ಪ್ರಜ್ಞೆಯನ್ನು ಮೆಚ್ಚಿ ರೈಲು ನಿಗಮದ ಸದಸ್ಯರು ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದಾರೆ. ಇದೆಲ್ಲ ನನ್ನ ಜವಾಬ್ದಾರಿ ಮತ್ತು ಸಮಯ ಪ್ರಜ್ಞೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದರು.
ವಿನಯ ಕುಮಾರ್ ಸೂರಿಂಜೆ, ರಾಜು ಪೂಜಾರಿ, ಮೋನಪ್ಪ ಗೌಡ, ಸುರೇಶ್ ಶೆಟ್ಟಿ, ಸುಧೀರ್, ರೋಹನ್ ಮೊಂತೆರೋ, ಎಂ.ಎ.ಗಫೂರ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English