ಮಂಗಳೂರು : ನಗರದ ಗುಜ್ಜರಕೆರೆ ಲೇಕ್ ವ್ಯೂ ಅಪಾರ್ಟ್ಮೆಂಟ್ ನ ಫ್ಲಾಟ್ ನಂಬರ್ 507 ರಲ್ಲಿ ತಾಯಿಯೊಬ್ಬಳು ನಾಲ್ಕೂವರೆ ತಿಂಗಳ ಮಗುವನ್ನು ಉಸಿರುಗಟ್ಟಿಸಿ ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಸಂಜೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಖತಿಜಾತುಲ್ ಕುಬ್ರ ರವರ ಮಗಳು ಫಾತಿಮಾ ರುಕಿಯಾ (23) ಎಂದು ಗುರುತಿಸಲಾಗಿದೆ.
ಫಾತಿಮಾ ರುಕಿಯಾ ಸುಮಾರು ಒಂದೂವರೆ ವರ್ಷದ ಹಿಂದೆ ಮುಹಮ್ಮದ್ ಉನೈಸ್ ಎಂಬವರನ್ನು ವಿವಾಹವಾಗಿದ್ದು ನಾಲ್ಕು ತಿಂಗಳ ಹಿಂದೆ ಗಂಡು ಮಗುವಾಗಿದ್ದು ಬಳಿಕ ತನ್ನ ತಾಯಿ ಬಳಿ ಆತ್ಮ ಹತ್ಯೆ ಮಾಡುವುದಾಗಿ ಹೇಳಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಫಾತಿಮಾ ರುಕಿಯಾ ರವರು ಹೆರಿಗೆಯಾದ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಅವರಿಗೆ ಮಂಗಳೂರಿನ ಅರೋಗ್ಯ ಕ್ಲಿನಿಕ್ ನಲ್ಲಿ ಮಾನಸಿಕ ವೈದ್ಯರಾದ ಡಾ. ಸುಪ್ರಿಯಾ ರವರಲ್ಲಿ ಚಿಕಿತ್ಸೆ ಕೊಡಿಸುತ್ತಿದರು.
ದಿನಾಂಕ : 02.12.2023 ರಂದು ಬೆಳಿಗ್ಗೆ 11-00 ಗಂಟೆಯಿಂದ ಮದ್ಯಾಹ್ನ 1-30 ಗಂಟೆಯ ಮಧ್ಯ ಮನೆಯಲ್ಲಿ ಯಾರು ಇಲ್ಲದ ಸಮಯ ಫಾತಿಮಾ ರುಕಿಯಾ ತಾನು ವಾಸವಾಗಿದ್ದ ಗುಜ್ಜರಕೆರೆ ಲೇಕ್ ವ್ಯೂ ಅಪಾರ್ಟ್ಮೆಂಟ್ ನ ಫ್ಲಾಟ್ ನಂಬರ್ 507 ರ ಬೆಡ್ ರೂಮ್ ನ ಗ್ಯಾಲರಿಯಲ್ಲಿ ಪ್ಲಾಸ್ಟಿಕ್ ಟಬ್ ನಲ್ಲಿ ನೀರು ತುಂಬಿಸಿ ನಾಲ್ಕೂವರೆ ತಿಂಗಳ ಮಗುವನ್ನು ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿ, ಆಕೆ ಕೂಡ ರೂಮಿನ ಕಿಟಕಿಯ ಕಬ್ಬಿಣದ ಸರಳಿಗೆ ಸೀರೆಯಿಂದ ಕಟ್ಟಿ ಮತ್ತೊಂದು ತುದಿಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ದಾಖಲಾಗಿದೆ.
Click this button or press Ctrl+G to toggle between Kannada and English