ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಕೋರಿ ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ, ಬಿಎಂಎಸ್ ಮುಖಂಡ ಗಣೇಶ್ ಶೆಣೈ ಮುಲ್ಕಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪತ್ರದ ಪ್ರತಿಯ ಜತೆ ಈ ಮಾಹಿತಿ ಹಂಚಿಕೊಂಡ ಗಣೇಶ್ ಶೆಣೈ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ವಿದ್ಯುತ್ ಬಿಲ್ ಶೇ.55 ಅಧಿಕಗೊಂಡಿದೆ. ಭೂಮಿ ರಿಜಿಸ್ಟ್ರೇಷನ್ ದರ, ಹಾಲು, ಮೊಸರು, ಮಜ್ಜಿಗೆ ದರ ಏರಿಕೆಯಾಗಿದೆ. ಹಿಂದು ಕಾರ್ಯಕರ್ತರಿಗೆ ಕಿರುಕುಳ ಹೆಚ್ಚಿದೆ. ಆದರೆ ನನ್ನ ಪಕ್ಷದ ನಾಯಕರು ಸರಿಯಾದ ಪ್ರತಿಭಟನೆ ನಡೆಸಿಲ್ಲ. ನರೇಂದ್ರ ಮೋದಿಯವರ ಸಾಧನೆಗಳನ್ನು ಮನೆಮನೆಗೆ ತಲುಪಿಲ್ಲ. ಆದ್ದರಿಂದ ತಾನು ಈ ಇಳಿವಯಸ್ಸಿನಲ್ಲಿಯೂ ರಾಜಕೀಯಕ್ಕೆ ಧುಮುಕುತ್ತಿದ್ದೇನೆ ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರಾದ ಪಣಂಬೂರು ನರಸಿಂಹ ಭಂಡಾರ್ಕರ್ ಹಾಗೂ ಕೆ.ವೆಂಕಟೇಶ್ ನಾಯಕ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English