ಮಂಗಳೂರಿನಲ್ಲಿ ಬೀದಿ ಬದಿಯಲ್ಲಿ ಮಲಗುವ ವಸತಿ ರಹಿತ ನಾಗರೀಕರಿಗೆ ತಂಗಲು ವ್ಯವಸ್ಥೆ

10:05 PM, Friday, December 8th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದೀನ್ ದಯಾಳ್ ಅಂತ್ಯೋದಯ ಯೋಜನೆ ರಾಷ್ತ್ರೀಯ ನಗರ ಜೀವನೋಪಾಯ ಅಭಿಯಾನದ ನಗರದ ವಸತಿ ರಹಿತ ರಿಗೆ ಆಶ್ರಯ ಉಪಘಟಕದಡಿ ನಗರದ ಬೀದಿ ಬದಿಗಳಲ್ಲಿ, ಬಸ್ಸು ನಿಲ್ದಾಣ, ಅಂಗಡಿಗಳ ಎದುರುಗಡೆ, ಹಳೆ ಕಟ್ಟಡ, ಸಾರ್ವಜನಿಕ ಮೈದಾನ ಅಥವಾ ಇನ್ನಿತರೇ ಪ್ರದೇಶಗಳಲ್ಲಿ ರಾತ್ರಿ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತಿರುವ ರಾತ್ರಿ ವಸತಿ ರಹಿತ ನಾಗರೀಕರಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯು ಸ್ವಯಂ ಸೇವಾ ಸಂಸ್ಥೆಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಯಲ್ಲಿ ಬಂದರು, ಉರ್ವ ಮಾರ್ಕೆಟ್ ಮತ್ತು ಸುರತ್ಕಲ್ ಪ್ರದೇಶದಲ್ಲಿ 3 ನಗರ ವಸತಿ ರಹಿತರ ಆಶ್ರಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಸದರಿ ಕೇಂದ್ರಗಳಲ್ಲಿ ನಿವಾಸಿಗಳಿಗೆ ಉಚಿತ ತಂಗುವ ವ್ಯವಸ್ಥೆ, ಅರೋಗ್ಯ ತಪಾಸಣೆ, ಅರ್ಹರು ಸಾಮಾಜಿಕ ಭದ್ರತೆ ಯೋಜನಾ ಸೌಲಭ್ಯ ಪಡೆಯಬಹುದಾಗಿದೆ.

ನಿರ್ವಹಣೆ ಮತ್ತು ಮೇಲ್ವಿಚಾರಣಾ ಸ್ವಯಂ ಸೇವಾ ಸಂಸ್ಥೆಗಳ ದೂರವಾಣಿ ಸಂಖ್ಯೆ ಹಾಗೂ ನಗರ ವಸತಿ ರಹಿತರ ಆಶ್ರಯ ಕೇಂದ್ರಗಳ ವಿಳಾಸ: ಎನ್.ಕೃಷ್ಣಾನಂದ ಪೈ, ಸುವರ್ಣಾ ಕರ್ನಾಟಕ ಸಂಸ್ಥೆ(ರಿ), ದೂರವಾಣಿ ಸಂಖ್ಯೆ: 9845567552, ನಗರ ವಸತಿ ರಹಿತರ ಆಶ್ರಯ ಕೇಂದ್ರ, ದರಿಯಾ ಐಸ್ ಪ್ಲಾಂಟ್ ಎದುರುಗಡೆ, ಹಳೇ ಬಂದರು ರಸ್ತೆ, ಬಂದರು ಮಂಗಳೂರು.

ಭರತ್ ಎಸ್.ಕರ್ಕೇರ, ವಿಧಾತ್ರಿ ಕಲಾವಿದೆರ್ ಕೈಕಂಬ-ಕುಡ್ಲ(ರಿ)ದೂರವಾಣಿ ಸಂಖ್ಯೆ: 9164632658, ನಗರ ವಸತಿ ರಹಿತರ ಆಶ್ರಯಕೇಂದ್ರ, ಉರ್ವ ಸಮುದಾಯ ಭವನ ಉರ್ವಾ ಮಾರ್ಕೇಟ್, ಮಂಗಳೂರು.

ಚಿದಾನಂದ ಅದ್ಯಾಪಾಡಿ, ವಿಧಾತ್ರಿ ಕಲಾವಿದೆರ್ ಕೈಕಂಬ-ಕುಡ್ಲ (ರಿ), ದೂರವಾಣಿ ಸಂಖ್ಯೆ: 9844023564ನಗರ ವಸತಿ ರಹಿತರ ಆಶ್ರಯ ಕೇಂದ್ರ, ದುರ್ಗಾ ಕಾಂಪ್ಲೆಕ್ಸ್,ಸುರತ್ಕಲ್ ರೈಲ್ವೇ ಸ್ಟೇಷನ್ ರಸ್ತೆ,ಸುರತ್ಕಲ್, ಮಂಗಳೂರು.

ರಾತ್ರಿ ವಸತಿ ರಹಿತ ನಾಗರಿಕರು ಕಂಡು ಬಂದಲ್ಲಿ ಸಾರ್ವಜನಿಕರು ನಗರ ವಸತಿ ರಹಿತರ ಆಶ್ರಯ ಕೇಂದ್ರಗಳ ನಿರ್ವಹಣೆ ಮತ್ತು ಮೇಲ್ವಿಚಾರಣಾ ಸ್ವಯಂ ಸೇವಾ ಸಂಸ್ಥೆಗಳಿಗೆ ದೂರವಾಣಿ ಮೂಲಕ ಸಂಪರ್ಕಿಸುವಂತೆ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English