ಮಂಗಳೂರು : ಮಂಗಳಾ ಈಜು ಕೊಳದಲ್ಲಿ ಈಜಲು ಹೋಗಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ಘಟನೆ ಬರ್ಕೆ ಠಾಣಾ ವ್ಯಾಪ್ತಿಯ ಮಂಗಳ ಈಜು ಕೊಳದಲ್ಲಿ ಸಂಜೆ ನಡೆದಿದೆ.
ಮೃತ ವ್ಯಕ್ತಿಯನ್ನು ಹರಿಯಾಣ ಮೂಲದ ಅಭಿಷೇಕ್ ಆನಂದ್ (30)ಎಂದು ಗುರುತಿಸಲಾಗಿದೆ. ಈಜುಕೊಳದಲ್ಲಿ ಪಬ್ಲಿಕ್ ಬ್ಯಾಚ್ ನಲ್ಲಿ 30 ರಿಂದ 40 ಜನರು ಈಜುತ್ತಿದ್ದರು ಎನ್ನಲಾಗಿದೆ.. ಆರು ಜನ ಲೈಫ್ ಗಾರ್ಡ್ನಲ್ಲಿ ಹಾಕಿಕೊಂಡಿದ್ದರು. ಆದರೆ ಅಭಿಷೇಕ್ ಈಜುವ ವೇಳೆ ಯಾವುದೇ ಕೂಗು ಹಾಕದೇ , ಮೇಲೆ ಕೆಳಗೆ ಬರದೇ ಇದ್ದಾಗ ಹತ್ತಿರದಲ್ಲಿ ಈಜುತ್ತಿದ್ದ ಹುಡುಗ ಕೆಲವರು ಏನೋ ತಮಾಷೆಗೆ ಹುಡುಕುತ್ತಿದ್ದಾನೆ ಎಂದು ತಿಳಿದುಕೊಳ್ಳಲಾಯಿತು.ಆದರೆ ಅಭಿಷೇಕ್ ಬಾರದೇ ಇದ್ಧನ್ನು ಗಮನಿಸಿ ಲೈಫ್ ಗಾರ್ಡ್ ಗಮನಕ್ಕೆ ತರಲಾಯಿತು.
15 ಫೀಟ್ ಆಳದಲ್ಲಿ ರಾಜೇಂದ್ರ ಹಾಗು ಪುಂಡಲಿಕ್ ನೀರಿಗೆ ಜಿಗಿದು ಅಭಿಷೇಕ್ನ್ನು ಮೇಲೆ ತಂದು ಪ್ರಥಮ ಚಿಕಿತ್ಸೆ ಮಾಡಲು ಪ್ರಯತ್ನಿದ್ದರು ಯಾವುದೇ ಪ್ರತಿಕ್ರಿಯೆ ಇರಲಿಲ್ಲ . ಬಳಿಕ ವೆನ್ಲಾಕ್ ಆಸ್ಪತ್ರೆಗೆ ಕರೆತರಲಾಯಿತು, ಸಂಜೆ 6.25ಕ್ಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
Click this button or press Ctrl+G to toggle between Kannada and English