ವಿಶ್ವ ಮಾನವ ಸಂದೇಶ ನೀಡಿದ ಮಹಾನ್ ಚೇತನ ಕುವೆಂಪು : ಮುಂಡಾಜೆ

9:19 PM, Friday, December 29th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ವಿಶ್ವ ಮಾನವ ರಾಗಲು ವಿದ್ಯೆಯ ಕೇಂದ್ರೀಕರಣ ಮಾತ್ರವಲ್ಲ ಸಮಗ್ರವಾದ ಜ್ಞಾನವನ್ನು ಗ್ರಹಿಸುವುದು ಮುಖ್ಯ ಎಂದು ಕಾಸರಗೋಡು ಪೆರಿಯ ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಪ್ರೋ.ಚೇತನ್ ಮುಂಡಾಜೆ ಹೇಳಿದರು.

ಅವರು ಶುಕ್ರವಾರ ನಗರದ ರಥಬೀದಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವ ಮಾನವ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಕವಿತೆ, ವೈಚಾರಿಕ ಕಾದಂಬರಿ, ಮಹಾಕಾವ್ಯದಲ್ಲಿ ಸ್ಥಾಪಿತವಾದ ಚಿಂತನೆಗೆ ಹೊಸ ರೂಪವನ್ನು ನೀಡಿದರು. ಕೃಷಿ ಸದೃಶವಾದ ಬರವಣಿಗೆಯಲ್ಲಿ ಕುವೆಂಪು ಅನ್ನು ರಸ ಋಷಿ ಕವಿ ಎಂದು ಕರೆಯಲಾಗುತ್ತದೆ. ಕುವೆಂಪು ಅವರು ಮಾನವ ಕುಲಕ್ಕೆ ನೀಡಿದ ಮಾರ್ಗದರ್ಶನ ಸಾರ್ವಕಾಲಿಕವಾಗಿದೆ ಎಂದು ಹೇಳಿದರು.

ಮನುಜಮತ ವಿಶ್ವ ಪಥ ಸಂದೇಶ ಸಾರಿದ ಶ್ರೇಷ್ಠ ವಿಶ್ವ ಮಾನವ ಕುವೆಂಪು. ವಿಶ್ವ ಮಾನವರು ಹುಟ್ಟುತ್ತಾ ವಿಶ್ವ ಮಾನವರು ನಂತರ ಅವರು ಆವರಣಗಳನ್ನು ಸೃಷ್ಟಿಸಿ ಅಲ್ಪ ಮಾನವರಾಗುತ್ತಿದ್ದೇವೆ ಎಂದು ಅವರು ಹೇಳಿದರು.

ನಾವು ವಿಶಾಲ ಮನಸ್ಸಿನವರಾಗಬೇಕು. ತಮ್ಮ ಬದುಕಿನಲ್ಲಿ ಕುವೆಂಪು ಅವರ ಜೀವನ ಚರಿತ್ರೆ ಆದರ್ಶನಗಳನ್ನು ನಾವು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು. ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಶಿವಮೊಗ್ಗದ ಸೂಕ್ಷ್ಮ ಚಿತ್ರಣವನ್ನು ಚಿತ್ರಸಿದ್ದಾರೆ. ಸಾಹಿತ್ಯದ ಮೂಲಕ ಮನಸ್ಸು ಗೆಲ್ಲುವ ಕೆಲಸ ಮಾಡಿದ್ದಾರೆ. ಸಾಹಿತ್ಯದ ಓದುವಿಕೆ ಮನಸ್ಸನ್ನು ಬೆಳೆಸುತ್ತದೆ ವೈಚಾರಿಕ ಲೇಖನಗಳ ವಿಷಯ ನಮ್ಮ ಚಿಂತನಾ ಶೀಲತೆಯನ್ನು ಬೆಳೆಸುತ್ತದೆ ಎಂದು ರಥಬೀದಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಭಾರತಿ ಭಾಯಿ.ಕೆ ಹೇಳಿದರು

ಎಲ್ಲರೂ ಕಟ್ಟುಪಾಡುಗಳನ್ನು ಬಿಟ್ಟು ಬೆಳೆಯಬೇಕು ಆಗ ಮಾತ್ರ ನಾವು ಸಮರ್ಥ ವ್ಯಕ್ತಿಯಾಗಲು ಸಾಧ್ಯ ಮೊಬೈಲ್ ಬಳಕೆಯಿಂದ ನಾವು ತಲೆ ತಗ್ಗಿಸುವಂತೆ ಆಗುತ್ತದೆ ಆದರೆ ಪುಸ್ತಕಗಳ ಓದುವಿಗೆ ನಮ್ಮ ತಲೆಯನ್ನು ಎತ್ತಿ ನಡೆಯುವಂತೆ ಮಾಡುತ್ತದೆ ಎಂದು ಹೇಳಿದರು.

ಗ್ರಂಥಾಲಯದ ಪುಸ್ತಕಗಳ ಜೊತೆಗೆ ಪಠ್ಯಪುಸ್ತಕವನ್ನು ಕೂಡ ಓದಿ. ಕುವೆಂಪು ಅವರ ಹಾಡನ್ನು ಹಾಡುವುದಷ್ಟೇ ಅಲ್ಲ ಅದರ ಅರ್ಥವನ್ನು ತಿಳಿಯಬೇಕು. ಕನ್ನಡ ಭಾಷಾ ಬೆಳೆಯಲು ನಾವು ಹೆಚ್ಚು ಹೆಚ್ಚು ಓದಬೇಕು ಕನ್ನಡ ಮಾಧ್ಯಮದಲ್ಲಿ ಓದಲು ಮೊದಲು ಅವಕಾಶ ಮಾಡಿಕೊಟ್ಟವರಲ್ಲಿ ಕುವೆಂಪು ಮೊದಲಿಗರು.

ವೇದಿಕೆಯಲ್ಲಿ ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ರಥಬೀದಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಭಾರತಿ ಭಾಯಿ. ಕೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಭಾಗವಹಿಸಿದ್ದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್. ಜಿ ಸ್ವಾಗತಿಸಿದರು. ಪ್ರದೀಪ್. ಡಿ. ಹಾವಂಜೆ ನಿರೂಪಿಸಿದರು.

ಕಾರ್ಯಕ್ರಮದ ನಂತರ ಸಂಸ್ಕೃತಿಕ ಕಾರ್ಯಕ್ರಮ ನಡೆಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English