ಸೋಮೇಶ್ವರ ಪುರಸಭೆ : ಪತಿಗೆ ಒಂದು ಮತದ ಅಂತರದಲ್ಲಿ ಸೋಲು, ಪತ್ನಿ ಜಯಶಾಲಿ

6:19 PM, Saturday, December 30th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಉಳ್ಳಾಲ : ಸೋಮೇಶ್ವರ ಪುರಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಎರಡು ವಾರ್ಡ್ ಗಳಲ್ಲಿ ಸ್ಪರ್ಧಿಸಿದ್ದ ದಂಪತಿಗಳಲ್ಲಿ ಪತ್ನಿ ಜಯಶಾಲಿಯಾದರೆ, ಇನ್ಬೊಂದು ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಪತಿ ಒಂದು ಮತದ ಅಂತರದಲ್ಲಿ ಸೋಲನ್ಬು ಅನುಭವಿಸಿದ್ದಾರೆ.

ಒಂದನೇ ಮುಂಡೋಳಿ ವಾರ್ಡ್ ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಮೀನಾ ಬಶೀರ್ ಬಿಜೆಪಿಯ ಅಭ್ಯರ್ಥಿ ಸುನಿತಾ ರಾಜೇಶ್ ಎದುರು 271 ಮತಗಳ ಅಂತರದಲ್ಲಿ ವಿಜಯಿಯಾದರೆ, 2ನೇ ಪ್ರಕಾಶ್ ನಗರ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಅಮೀನಾ ಬಶೀರ್ ಪತಿ ಬಶೀರ್ ಮುಂಡೋಳಿ ಅವರು ಬಿಜೆಪಿಯ ಯಶವಂತ್ ಪ್ರಕಾಶ್ ನಗರ ಎದುರು ಒಂದು ಮತಗಳ ಅಂತರದಲ್ಲಿ ಸೋಲನ್ನು ಅನುಭವಿಸಿದ್ದಾರೆ. ಬಶೀರ್ ಸೋಮೇಶ್ವರ ಪಂಚಾಯತ್ ನ ಮಾಜಿ ಸದಸ್ಯರಾಗಿದ್ದರು.

3ನೇ ವಾರ್ಡ್ ಲಕ್ಷ್ಮಿಗುಡ್ಡೆ ಪ್ರಕಾಶ್ ನಗರದಲ್ಲಿ ಸಹೋದರಿಯರ ನಡುವೆ ನಡೆದ ಸ್ಪರ್ಧೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ತಂಗಿ ವಿಜಯಿಯಾದರೆ ಕಾಂಗ್ರೆಸ್ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಸಿಪಿಐಎಂ ಅಭ್ಯರ್ಥಿ ಅಕ್ಕನಿಗೆ ಸೋಲಾಗಿದೆ.

ಬಿಜೆಪಿಯ ಸಪ್ನ ಶೆಟ್ಟಿ 340 ಮತಗಳನ್ನು ಪಡೆದು ವಿಜಯಿಯಾದರೆ ಅವರ ಸಹೋದರಿ ಸಿಪಿಐಎಂ ಅಭ್ಯರ್ಥಿ ಸೌಮ್ಯಾ ಎಸ್. ಪಿಲಾರ್ 153 ಮತಗಳನ್ನು ಪಡೆದು 183 ಮತಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English