ಹಿರಿಯ ಪತ್ರಕರ್ತ ರಘುನಾಥ ಎಂ. ವರ್ಕಾಡಿಯವರ ತುಳು ಕಥೆಗಳ ಕೃತಿ ಬಿಡುಗಡೆ

10:21 PM, Thursday, January 4th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು: ಹಿರಿಯ ಪತ್ರಕರ್ತ ರಘುನಾಥ ಎಂ. ವರ್ಕಾಡಿಯವರು ಬರೆದು, ಆಕೃತಿ ಆಶಯ ಪಬ್ಲಿಕೇಶನ್ಸ್‌ನಿಂದ ಪ್ರಕಟಿಸಿರುವ ‘ದೇವಕಿ ಬೈದ್ಯೆದಿ ಪಂಡ್‌ನ ಜನಪದ ಕತೆಕುಲು- ಸೂರ್ಯೆ ಚಂದ್ರೆ ಸಿರಿ’ ಎಂಬ ತುಳು ಕಥೆಗಳ ಕೃತಿಯನ್ನು ನಗರದ ಪತ್ರಿಕಾ ಭವನದಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸ್ಥಾಪಕ ಅಧ್ಯಕ್ಷ ಡಾ.ತುಕರಾಮ ಪೂಜಾರಿ ಗುರುವಾರ ಬಿಡುಗಡೆಗೊಳಿಸಿದರು.

ಭತ್ತದ ಬಗೆಗಿನ ತುಳುನಾಡಿನ ನಂಬಿಕೆ, ಆರಾಧನಾ ಭಾವ ಹೆಚ್ಚಿನವರಿಗೆ ತಿಳಿದಿಲ್ಲ. ಅಂತಹ ವಿಷಯಗಳು ಕೃತಿಗಳ ರೂಪದಲ್ಲಿ ಮೂಡಿಬಂದಾಗ ಅದು ಇತಿಹಾಸವಾಗಿ ಮುಂದಿನ ಜನಾಂಗಕ್ಕೂ ತಿಳಿಯಲ್ಪಡುತ್ತದೆ. ಆ ನಿಟ್ಟಿನಲ್ಲಿ ವರ್ಕಾಡಿ ಅವರ ಕಾರ್ಯ ಸ್ತುತ್ಯರ್ಹ. ತಮ್ಮ ತಾಯಿಯಿಂದ ಕೇಳಿ ತಿಳಿದುಕೊಂಡ ವಿಷಯಗಳನ್ನು ಪುಸ್ತಕ ರೂಪದಲ್ಲಿ ದಾಖಲೀಕರಿಸುವ ಕಾರ್ಯವನ್ನು ರಘುನಾಥ ಎಂ. ವರ್ಕಾಡಿ ಅವರು ಮಾಡಿದ್ದಾರೆ ಎಂದು ತುಕರಾಮ ಪೂಜಾರಿ ಅಭಿನಂದಿಸಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿಶ್ವವಿದ್ಯಾನಿಲಯದ ಪ್ರೊ.ಎಂ.ಎಸ್.ಕೋಟ್ಯಾನ್ ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಗತಿಪರ ಕೃಷಿಕ ನೀಲಯ ಎಂ. ಅಗರಿ, ನಮ್ಮ ಕುಡ್ಲ ಚಾನೆಲ್‌ನ ಸುರೇಶ್ ಬಿ. ಕರ್ಕೇರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೃತಿ ರಚನೆಕಾರ ರಘುನಾಥ ಎಂ. ವರ್ಕಾಡಿ ಅವರು ಸ್ವಾಗತಿಸಿ, ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English