ಪಳ್ಳಿಕೆರೆ ರೈಲ್ವೇ ಟ್ರ್ಯಾಕ್ ಬಳಿ ಯುವತಿಯ ಮೃತದೇಹ ಪತ್ತೆ

7:00 PM, Saturday, January 6th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಕಾಸರಗೋಡು : ಯುವತಿಯೊಬ್ಬಳ ಮೃತದೇಹ ಪಳ್ಳಿಕೆರೆ ಮಾಸ್ತಿ ಗುಡ್ಡೆ ಯಲ್ಲಿ ಎಂಬಲ್ಲಿ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ.

ಪೊಲೀಸರಿಗೆ ದೊರೆತ ಮಾಹಿತಿಯಂತೆ ಮೃತ ಯುವತಿಯನ್ನು ಕಾವುಮಂದದ ಐಶ್ವರ್ಯ ಜೋಸೆಫ್ (30) ಎಂದು ಗುರುತಿಸಲಾಗಿದೆ.

ಇಂದು ಬೆಳಿಗ್ಗೆ ಪರಿಸರವಾಸಿಗಳು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ರಾತ್ರಿ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತ ದೇಹದ ಬಳಿ ಲಭಿಸಿದ ಪರ್ಸ್ ನಲ್ಲಿದ್ದ ಗುರುತು ಚೀಟಿಯಿಂದ ಯುವತಿಯ ಗುರುತು ಪತ್ತೆ ಹಚ್ಚಲಾಗಿದೆ.

ಕೋಜಿಕ್ಕೊಡ್ ನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಳು. ಉದ್ಯೋಗ ದ ನಿಮಿತ್ತ ನೇತ್ರಾವತಿ ರೈಲಿನಲ್ಲಿ ಮಂಗಳೂರಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಈ ಘಟನೆ ಬಗ್ಗೆ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English