ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರ ಅದ್ದೂರಿ ಪುರಪ್ರವೇಶ

9:53 PM, Monday, January 8th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಉಡುಪಿ: ನಗರದ ಪ್ರಮುಖ ರಸ್ತೆಯಲ್ಲಿ ಹಂಸವಾಹನದಲ್ಲಿ ಆಸೀನರಾಗಿ ಧಾರ್ಮಿಕ, ಸಾಂಸ್ಕೃತಿಕ ಸಂದೇಶ ಸಾರುವ ಕಲಾತಂಡಗಳ ಮೆರವಣಿಗೆಯಲ್ಲಿ ಭಾವೀ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರು ಸೋಮವಾರ ಪುರಪ್ರವೇಶಗೈದರು.

ಪರ್ಯಾಯ ಪೀಠಾರೋಹಣಕ್ಕೆ ಮುನ್ನ ಕಳೆದ 1 ವರ್ಷಗಳಿಂದ ದೇಶದ ವಿವಿಧ ಧಾರ್ಮಿಕ ಹಾಗೂ ತೀರ್ಥ ಕ್ಷೇತ್ರಗಳ ಸಂಚಾರ ಮುಗಿಸಿ ಸೋಮವಾರ ಕನ್ನರ್ಪಾಡಿ ಜಯದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದ ಶ್ರೀಗಳು, ಸಾಯಂಕಾಲ 4.30ಕ್ಕೆ ಜೋಡುಕಟ್ಟೆಗೆ ಆಗಮಿಸಿದರು. ಸಕಲ ಗೌರವದೊಂದಿಗೆ ಶ್ರೀಗಳನ್ನು ಬರಮಾಡಿಕೊಳ್ಳಲಾಯಿತು. ಶ್ರೀಗಳು ಜೋಡುಕಟ್ಟೆಯಲ್ಲಿ ಪಟ್ಟದ ದೇವರಿಗೆ ಪೂಜೆಯನ್ನು ಸಲ್ಲಿಸಿದರು. ನಂತರ ವಿವಿಧ ಸಂ ಸಂಸ್ಥೆಗಳ ಪ್ರಮುಖರು ಶ್ರೀಗಳಿಗೆ ಹಾರ ಹಾಕಿ ಗೌರವಿಸಿದರು.

ಮೆರವಣಿಗೆಯಲ್ಲಿ ಕರಾವಳಿಯ ಜಾನಪದ, ಸಾಂಸತಿಕ ವೈಭವ ಸಾರುವ ಕಲಾತಂಡಗಳು ಭಾಗವಹಿಸಿದ್ದವು. ಕುಣಿತ ಭಜನೆ, ಕೋಲಾಟ ತಂಡಗಳು, ವಿವಿಧ ಭಜನಾ ತಂಡಗಳು, ಉಡುಪಿ ಸೀರೆ ಧರಿಸಿದ್ದ ಉಡುಪಿ ನೇಕಾರರ ಸಂ ಸದಸ್ಯರ ಸಹಿತ ವಿವಿಧ ಸಾಂಸತಿಕ ಕಲಾವೈಭವ ಗಮನ ಸೆಳೆಯಿತು. 15ಕ್ಕೂ ಅಧಿಕ ಟ್ಯಾಬ್ಲೋಗಳಲ್ಲಿ ಕೃಷ್ಣ ದೇವರು, ಮಧ್ವಾಚಾರ್ಯರು, ವಾದಿರಾಜರು, ಗೋತೋಪದೇಶ, ಪುತ್ತಿಗೆ ಮಠ ಶ್ರೀ ಸುಜ್ಞಾನೇಂದ್ರ ತೀರ್ಥರ ಸ್ಥಬ್ತಚಿತ್ರಗಳನ್ನು ಇರಿಸಲಾಗಿತ್ತು. ಬಿರುದಾವಳಿಗಳು, ವಾದ್ಯಗಳು, ಚೆಂಡೆ, ಕಹಳೆ, ಹುಲಿವೇಷ, ಮಹಿಷಾಸುರ ವೇಷ ಪ್ರಮುಖ ಆಕರ್ಷಣೆಯಾಗಿತ್ತು.

ಜೋಡುಕಟ್ಟೆಯಿಂದ, ಡಯಾನಾ ವೃತ್ತ, ಕೆಎಂ ಮಾರ್ಗ, ಸಂಸತ ಕಾಲೇಜು ಮಾರ್ಗವಾಗಿ ಪಲ್ಲಕ್ಕಿಯಲ್ಲಿ ಪಟ್ಟದ ದೇವರಾದ ವಿಠಲ ದೇವರೊಂದಿಗೆ ಉಭಯ ಶ್ರೀಗಳು ಹಂಸವಾಹನದಲ್ಲಿ ಕುಳಿತು ಶಿಷ್ಯರೊಂದಿಗೆ ರಥಬೀದಿ ಪ್ರವೇಶಿಸಿದರು. ಮೆರವಣಿಗೆ ಉದ್ದಕ್ಕೂ ಭಕ್ತರು ಶ್ರೀಗಳಿಗೆ ಪೂಜೆ ಸಲ್ಲಿಸಿ, ಫಲತಾಂಬೂಲ ನೀಡಿದರು. ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ ಸಾವಿರಾರು ಜನರು ನೆರೆದಿದ್ದರು.

ರಥಬೀದಿ ಪ್ರವೇಶಿಸಿದ ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಸುಶ್ರೀಂದ್ರ ತೀರ್ಥ ಕನಕ ಕಿಂಡಿಯಲ್ಲಿ ಕೃಷ್ಣ ದೇವರ ದರ್ಶನ ಮಾಡಿದರು. ಬಳಿಕ ಅನಂತೇಶ್ವರ, ಚಂದ್ರಮೌಳೀಶ್ವರ ದೇವರ ದರ್ಶನ ಮಾಡಿದರು.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಯಶ್ಪಾಲ್​ ಸುವರ್ಣ, ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಎಚ್​.ಎಸ್​. ಬಲ್ಲಾಳ್​, ಕಾರ್ಯಾಧ್ಯಕ್ಷ ಕೆ.ರುಪತಿ ಭಟ್​, ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್​ ಶೆಟ್ಟಿ, ವಿಧಾನ ಪರಿಷತ್​ ಸದಸ್ಯ ಪ್ರತಾಪ್​ ಸಿಂಹ ನಾಯಕ್​, ಉದ್ಯಮಿ ಮನೋಹರ್​ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಅಜಯ್​ ಶೆಟ್ಟಿ, ಕಪ್ಪೆಟ್ಟು ಪ್ರವಿಣ್​ ಕುಮಾರ್​ ಶೆಟ್ಟಿ, ಮಟ್ಟು ಲಕ್ಷ್ಮಿನಾರಾಯಣ, ಶಾರದಾ ವಿದ್ಯಾಲಯ ಸಂಚಾಲಕ ಎಂ.ಬಿ ಪುರಾಣಿಕ್​, ವಿಹಿಂಪ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಜಿಲ್ಲಾ ಸಹಕಾರಿ ಯೂನಿಯನ್​ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ನೀಲಾವರ ಸುರೇಂದ್ರ ಅಡಿಗ, ದಿವಾನ್​ ನಾಗರಾಜ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಪ್ರದಿಪ್​ ಕುಮಾರ್​, ಡಯಾನಾ ಹೋಟೆಲ್​ ಮಾಲೀಕ ವಿಠಲ ಪೈ, ಕಾಶಿರಾಮ್​ ಪೈ, ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಅಶೋಕ್​ ಕುಮಾರ್​ ಕೊಡವರು, ಪ್ರಸಾದ್​ ರಾಜಕಾಂಚನ್​, ಎಸ್​ಪಿ ಅರುಣ್​ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English