ಮಂಗಳೂರು: ಕದ್ರಿ ಶೀ ಮಂಜುನಾಥ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸೋಮವಾರ ಆರಂಭಗೊಂಡಿತು.
ಏಳು ಪಟ್ಟಣ ಮೊಗವೀರ ಸಭಾದವರಿಂದ ಸಾಯಂಕಾಲ ಧ್ವಜ ಆರೋಹಣ ನಡೆಯಿತು. ಬಳಿಕ ಮಹಾಪೂಜೆ ನಡೆದು, ಶ್ರೀ ಮಲರಾಯ ದೈವದ ಭಂಡಾರ ಆಗಮನವಾಯಿತು. ರಾತ್ರಿ ಧ್ವಜಬಲಿ, ಕದ್ರಿಯ ಹತ್ತು ಸಮಸ್ತರಿಂದ ಗರುಡಾರೋಹಣ, ಉತ್ಸವ ಬಲಿ, ಭೂತ ಬಲಿ, ಕಂಚುದೀಪ ಬೆಳಗಿಸುವುದು, ದೀಪಬಲಿ ಉತ್ಸವ, ಶ್ರೀ ಮಲರಾಯ ದೈವದ ಭೇಟಿ, ಕಂಚಿಲು ಸೇವೆ ಮತ್ತು ಸಣ್ಣ ರಥೋತ್ಸವ ನೆರವೇರಿತು.
ಬೆಳಗೆ ನಾಲ್ಕು ಗಂಟೆಯಿಂದಲೇ ನೂರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಕೆರೆಯಲ್ಲಿ ತೀರ್ಥ ಸ್ನಾನ ಮಾಡಿ ಬಳಿಕ ದೇವರ ಧನುಪೂಜೆಯಲ್ಲಿ ಭಾಗವಹಿಸಿದರು.
ಸಂಕ್ರಾಂತಿ ರಜೆ ಹಿನ್ನೆಯಲ್ಲಿ ಮಧ್ಯಾಹ್ನ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆಕೂಡ ಹೆಚ್ಚಿತ್ತು.
ಜ.16ರಂದು ರಾತ್ರಿ ದೀಪದ ಬಲಿ ಮತ್ತು ಸಣ್ಣರಥೊತ್ಸವ, 17ರಂದು ಬಿಕರ್ನಕಟ್ಟೆ ಸವಾರಿ ಬಲಿ, 18ರಂದು ಮಲ್ಲಿಕಟ್ಟೆ ಸವಾರಿ ಬಲಿ, 19ರಂದು ಮುಂಡಾಣಕಟ್ಟೆ ಸವಾರಿ ಬಲಿ, 20ರಂದು ಕೊಂಚಾಡಿ ಸವಾರಿ ಬಲಿ, 21ರಂದು ಏಳನೇ ದೀಪೊತ್ಸವ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ 22ರಂದು ಸಂಜೆ ಶ್ರೀ ಮನ್ಮಹಾರಥೊತ್ಸವ, ಬೆಳ್ಳಿರಥೊತ್ಸವ, ಜ.23ರಂದು ಬೆಳಗ್ಗೆ ‘ಅವಭೃತಸ್ನಾನ’ ರಾತ್ರಿ ಉತ್ಸವ ಬಲಿ, ಚಂದ್ರಮಂಡಲ ಉತ್ಸವ ಜರುಗಲಿದ್ದು, ಜ.25ರಂದು ರಾತ್ರಿ ಶ್ರೀ ಮಲರಾಯ ಹಾಗೂ ಪರಿವಾರ ದೈವಗಳ ನೇಮ ಜರುಗಲಿರುವುದು
ಚಿತ್ರ : ರಮೇಶ್ ಶೆಣೈ
Click this button or press Ctrl+G to toggle between Kannada and English