ನರಿಂಗಾನ ಲವ – ಕುಶ ಜೋಡುಕರೆ ಕಂಬಳ ಕೂಟದ ಫಲಿತಾoಶ

9:11 PM, Monday, January 15th, 2024
Share
1 Star2 Stars3 Stars4 Stars5 Stars
(5 rating, 1 votes)
Loading...

ಮಂಗಳೂರು : ಉಳ್ಳಾಲ ತಾಲೂಕಿನ ನರಿಂಗಾನದ ಲವ- ಕುಶ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ ನರಿಂಗಾನದ ಮೋರ್ಲ ಬೋಳದಲ್ಲಿ ಜನವರಿ 13ಮತ್ತು 14, 2024 ರಂದು ನಡೆದ ದ್ವಿತೀಯ ವರ್ಷದ ಹೊನಲು ಬೆಳಕಿನ ಲವ-ಕುಶ ಜೋಡುಕರೆ `ನರಿಂಗಾನ ಕಂಬಳೋತ್ಸವದ’ ಫಲಿತಾoಶ ಈ ರೀತಿ ಇದೆ.

ಕಂಬಳ ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ ಸಂಖ್ಯೆ: 204 ಜೊತೆಯಾಗಿದ್ದು ಅದರಲ್ಲಿ ಕನೆಹಲಗೆ: 05 ಜೊತೆ, ಅಡ್ಡಹಲಗೆ: 06 ಜೊತೆ, ಹಗ್ಗ ಹಿರಿಯ: 16 ಜೊತೆ, ನೇಗಿಲು ಹಿರಿಯ: 34 ಜೊತೆ, ಹಗ್ಗ ಕಿರಿಯ: 31 ಜೊತೆ, ನೇಗಿಲು ಕಿರಿಯ: 112 ಜೊತೆ.

ಕನೆಹಲಗೆಯಲ್ಲಿ 6.5 ಕೋಲು ನಿಶಾನೆಗೆ ನೀರು ಹಾಯಿಸಿದವರು ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ, ಬೋಳಾರ ತ್ರಿಶಾಲ್ ಕೆ ಪೂಜಾರಿ ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ, ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ ಹಲಗೆ ಮುಟ್ಟಿದವರು: ಬೈಂದೂರು ರಾಘವೇಂದ್ರ ಪೂಜಾರಿ.

ಅಡ್ಡ ಹಲಗೆಯಲ್ಲಿ ಪ್ರಥಮ ಬಹುಮಾನ ಪಡೆದವರು ಮೋರ್ಲ ಪ್ರಾಪ್ತಿ ಗಿರೀಶ್ ಆಳ್ವ “ಬಿ” ಹಲಗೆ ಮುಟ್ಟಿದವರು: ಭಟ್ಕಳ ಹರೀಶ್, ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ.

ಹಗ್ಗ ಹಿರಿಯದಲ್ಲಿ ಪ್ರಥಮ ಬಹುಮಾನ ಪಡೆದವರು ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್ ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ. ದ್ವಿತೀಯ: ಎರ್ಮಾಳ್ ರೋಹಿತ್ ಹೆಗ್ಡೆ ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ.

ಹಗ್ಗ ಕಿರಿಯದಲ್ಲಿ ಪ್ರಥಮ ಬಹುಮಾನ ಪಡೆದವರು ನೂಜಿಪ್ಪಾಡಿ ಚಂದ್ರಶೇಖರ ಹೊಳ್ಳ “ಬಿ” ಓಡಿಸಿದವರು: ಬೈಂದೂರು ಮಂಜುನಾಥ ಗೌಡ. ದ್ವಿತೀಯ: ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್ ದಿನಕರ್ ಶೆಟ್ಟಿ “ಬಿ”
ಓಡಿಸಿದವರು: ಕಾವೂರು ದೋಟ ಸುದರ್ಶನ್.

ನೇಗಿಲು ಹಿರಿಯ ಪ್ರಥಮ ಬಹುಮಾನ ಪಡೆದವರು ಇರುವೈಲು ಪಾನಿಲ ಬಾಡ ಪೂಜಾರಿ “ಎ” ಓಡಿಸಿದವರು: ಬೈಂದೂರು ಮಂಜುನಾಥ ಗೌಡ. ದ್ವಿತೀಯ: ಕೂಳೂರು ಪೊಯ್ಯೆಲು ಪಿ.ಆರ್. ಶೆಟ್ಟಿ ಓಡಿಸಿದವರು: ಪಟ್ಟೆ ಗುರುಚರಣ್.

ನೇಗಿಲು ಕಿರಿಯ ( ಸಮಾನ ಬಹುಮಾನ ) ಮುನಿಯಾಲ್ ಉದಯ ಕುಮಾರ್ ಶೆಟ್ಟಿ ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್ ಮಾಳ ಕಲ್ಲೇರಿ ಶರತ್ ಶೆಟ್ಟಿ ಓಡಿಸಿದವರು: ನತೀಶ್ ಬಾರಾಡಿ ಪಡೆದಿರುತ್ತಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English