ಉಡುಪಿ ಶ್ರೀಕೃಷ್ಣ ಮಠದ ನೂತನ ಬ್ರಹ್ಮರಥ ಶ್ರೀಕೃಷ್ಣನ ಸೇವೆಗೆ ಅರ್ಪಣೆ

2:35 PM, Tuesday, January 15th, 2013
Share
1 Star2 Stars3 Stars4 Stars5 Stars
(No Ratings Yet)
Loading...

Brahmaratha Sri Krishna Muttಉಡುಪಿ : ಶ್ರೀಕೃಷ್ಣ ಇಹಲೋಕ ತ್ಯಜಿಸಿದ ಬಳಿಕ ಅರ್ಜುನನ ಮೇಲೆ ಇತರರು ಆಕ್ರಮಣ ನಡೆಸಿದರು. ಆಗ ಅರ್ಜುನ ಸೋತು ಹೋಗುತ್ತಾನೆ. ಕಾರಣವೆಂದರೆ ಕೃಷ್ಣ ಇಲ್ಲದೆ ಇರುವುದು. ಇಲ್ಲಿಯೂ ರಥ ನಿರ್ಮಿಸಿರಬಹುದು. ಅದರಲ್ಲಿ ಶ್ರೀಕೃಷ್ಣ ಪ್ರತಿಷ್ಠೆ ಆದರೆ ಮಾತ್ರ ಶೋಭೆ’ ಎಂದು ಶ್ರೀಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭತೀರ್ಥರು ಹೇಳಿದರು. ಅವರು ಉಡುಪಿ ಶ್ರೀಕೃಷ್ಣ ಮಠದಲ್ಲಿ ನೂತನವಾಗಿ ನಿರ್ಮಿಸಲಾದ ರಥವನ್ನು ಶ್ರೀಕೃಷ್ಣನ ಸೇವೆಗೆ ಅರ್ಪಿಸಿದರು.

ಉಡುಪಿ ಶ್ರೀಕೃಷ್ಣ ಮಠದಲ್ಲಿ ನಿರ್ಮಿಸಲಾದ ನೂತನ ಬ್ರಹ್ಮರಥ ಶ್ರೀಕೃಷ್ಣನ ಸೇವೆಗೆ ಸೋಮವಾರ ಮಕರ ಸಂಕ್ರಮಣ ಉತ್ಸವದಲ್ಲಿ ಮೊದಲ ಬಾರಿಗೆ ಪಾಲ್ಗೊಳ್ಳುವ ಮೂಲಕ ಉದ್ಘಾಟನೆಗೊಂಡಿತು. ಪರ್ಯಾಯ ಶ್ರೀಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭತೀರ್ಥರು, ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥರು, ಶ್ರೀವಿಶ್ವಪ್ರಸನ್ನತೀರ್ಥರು, ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥರು, ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು ರಥವನ್ನು ಎಳೆದು ಕೃಷ್ಣಾರ್ಪಣ ಮಾಡಿದರು.

ಈ ಸಂದರ್ಭ ರಥದ ಪ್ರಧಾನ ಶಿಲ್ಪಿ ಬಳ್ಕೂರು ಗೋಪಾಲಾಚಾರ್ಯ ಮತ್ತು ತಂಡದವರನ್ನು ಸಮ್ಮಾನಿಸಲಾಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English