ಕಾರವಾರ : ಭಟ್ಕಳದ ಜಾಲಿ ಪಟ್ಟಣದಲ್ಲಿ ‘ದೇವಿ ನಗರ’ ಎಂಬ ಹೆಸರಿನಲ್ಲಿ ಹಾಕಲಾಗಿದ್ದ ನಾಮಫಲಕ ತೆರವುಗೊಳಿಸಿದ್ದಕ್ಕೆ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ನಾಮಫಲಕ ತೆರವು ಗೊಳಿಸಲು ಮದರಸಾದ ಗುರುಗಳು ಒತ್ತಡ ಹಾಕಿ ತೆರವುಗೊಳಿಸಿದ್ದರು ಎಂದು ಆರೋಪಿಸಲಾಗಿದೆ.
ಹಿಂದೂಗಳು ಪ್ರತಿಭಟನೆ ನಡೆಸಿದ್ದಕ್ಕೆ ದುಬೈನಿಂದ ಕಾರ್ಯಕರ್ತರಿಗೆ ವಿಡಿಯೋ ಕಾಲ್ ಮಾಡಿ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ.
ಪ್ರತಿಭಟನೆಯಲ್ಲಿ ಭಾಗಿಯಾದ ಹರೀಶ, ದೇಯಾ ಹಾಗೂ ಮಹೇಶ ಎಂಬವರಿಗೆ ದುಬೈನಿಂದ ವಿಡಿಯೋ ಮೂಲಕ ಮುಕ್ತಾರ್ ಮಹ್ಮದ್ ಕೊಟ್ಟಿಕೋಡಿ ಎಂಬಾತ ಮನೆಗೆ ನುಗ್ಗಿ ಹೊಡೆಯುತ್ತೇನೆ ಎಂದು ಅವಾಚ್ಯ ಶಬ್ಧದಿಂದ ನಿಂದಿಸಿ ಧಮ್ಕಿ ಹಾಕಿದ್ದಾನೆ ಎಂದು ದೂರಲಾಗಿದೆ.
ಭಟ್ಕಳ ತಾಲೂಕಿನ ಜಾಲಿ ಪಟ್ಟಣದಲ್ಲಿ ಹಿಂದೂ ದೇವರ ಹೆಸರಿನಲ್ಲಿ ಇರುವ ದೇವಿ ನಗರ ಎಂಬ ಹೆಸರಿನ ನಾಮಫಲಕವನ್ನು ತೆರವು ಗೊಳಿಸಲು ಮದರಸಾದ ಗುರುಗಳಿಂದ ಒತ್ತಡ ಹಾಕಿದ್ದರು, ಈ ಹಿನ್ನೆಲೆಯಲ್ಲಿ ನಾಮಫಲಕ ತೆರವುಗೊಳಿಸಲಾಗಿದೆ. ನಾಮಫಲಕ ತೆರವಿಗೆ ವಿರೋಧಿಸಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಜಾಲಿ ಪಟ್ಟಣದಲ್ಲಿರುವ ಅನಧಿಕೃತ ಮಸೀದಿ ತೆರವುಗೊಳಿಸುವಂತೆ ಹಿಂದೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಆಗ್ರಹಿಸಿದ್ದರು.
ಭಟ್ಕಳದ ಜಾಲಿ ಗ್ರಾಮದ ಮುಕ್ತಾರ್ ಮಹ್ಮದ್ ಕೊಟ್ಟಿಕೋಡಿ ಎಂಬಾತ ದಮ್ಕಿ ಹಾಕಿದ್ದಾಗಿ ಆರೋಪಿಸಿ ಹಿಂದೂ ಕಾರ್ಯಕರ್ತರು ಭಟ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು, ಸೆಕ್ಷನ್ 504, 506, 507 ರ ಅಡಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English