ಕಂಕನಾಡಿ ನಗರ ಠಾಣೆಯ ಇನ್‌ಸ್ಪೆಕ್ಟರ್ ಎಸ್.ಎಚ್. ಭಜಂತ್ರಿ ಅಮಾನತು

1:55 PM, Friday, January 19th, 2024
Share
1 Star2 Stars3 Stars4 Stars5 Stars
(5 rating, 1 votes)
Loading...

ಮಂಗಳೂರು: ಕಂಕನಾಡಿ ನಗರ ಠಾಣೆಯ ಇನ್‌ಸ್ಪೆಕ್ಟರ್ ಎಸ್.ಎಚ್. ಭಜಂತ್ರಿ ಅವರನ್ನು ಅಮಾನತುಗೊಳಿಸಿ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಆದೇಶಿಸಿದ್ದಾರೆ.

ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಮಾಡುವವರ ಜತೆ ಶಾಮೀಲು, ಮನೆ ಪರಿಸರದ ನಿವಾಸಿಗಳ ಜತೆ ಕಿರಿಕ್, ಹಿರಿಯ ಅಧಿಕಾರಿಗಳ ಜತೆ ಉಡಾೆಯಾಗಿ ವರ್ತಿಸಿದ್ದಾರೆಂಬ ಆರೋಪದಲ್ಲಿ ಅವರನ್ನು ಅಮಾನತು ಮಾಡಿದ್ದಾರೆ ಎನ್ನಲಾಗಿದೆ.

ನಗರದ ಜಪ್ಪಿನಮೊಗರು ಕಡೆಕಾರಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯಾ ನಾಯಕ್ ಅವರಿಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಪಿಐ ಭಜಂತ್ರಿ ಅವರಿಗೆ ದಾಳಿ ಮಾಡಲು ಸೂಚಿಸಿದ್ದರು. ಇದನ್ನು ಭಜಂತ್ರಿ ಅವರು ನಿರ್ಲಕ್ಷಿಸಿದ್ದಲ್ಲದೆ, ಹಿರಿಯ ಅಧಿಕಾರಿ ಜತೆ ಉಡಾೆಯಾಗಿ ವರ್ತಿಸಿದ್ದರು ಎಂಬ ಆರೋಪವಿದೆ ಎನ್ನಲಾಗಿದೆ.

ಮರಳು ಮಾಫಿಯಾದೊಂದಿಗೆ ಶಾಮಿಲಾಗಿರುವುದಲ್ಲದೆ, ಅಧಿಕಾರಿಯೊಂದಿಗೆ ಉಡಾಪೆ, ಠಾಣೆಗೆ ಭೇಟಿ ನೀಡಿದವರ ಜತೆಯೂ ಅಗೌರವತೆ ತೋರುವ ಬಗ್ಗೆ ಎಸಿಪಿ ಧನ್ಯ ನಾಯಕ್ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದರು. ಈ ಮಧ್ಯೆ ಭಜಂತ್ರಿ ಅವರು ವಾಸಿಸುತ್ತಿರುವ ಅಪಾರ್ಟ್‌ಮೆಂಟ್ ನಿವಾಸಿಗಳ ಜತೆಯೂ ಉಡಾೆಯಾಗಿ ವರ್ತಿಸುತ್ತಿರುವ ಬಗ್ಗೆ ಅಲ್ಲಿನ ನಿವಾಸಿಗಳು ದೂರು ನೀಡಿದ್ದರು. ಈ ಬಗ್ಗೆ ಸ್ವತಃ ಪೊಲೀಸ್ ಕಮಿಷನರ್ ಅವರೇ ಭಜಂತ್ರಿ ಅವರಲ್ಲಿ ಪ್ರತಿಕ್ರಿಯೆ ಕೇಳಿದಾಗ ಉಡಾಪೆಯಿಂದ ವರ್ತಿಸಿದ್ದಾರೆಂಬ ಆರೋಪವಿದೆ. ಈ ಹಿನ್ನಲೆಯಲ್ಲಿ ಪೊಲೀಸ್ ಕಮಿಷನರ್ ಅವರು ಭಜಂತ್ರಿ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದರು.

ಭಜಂತ್ರಿ ಅವರು ಗ್ರಾಮಾಂತರ ಠಾಣೆಯಲ್ಲೂ ಇನ್‌ಸ್ಪೆಕ್ಟರ್ ಆಗಿದ್ದ ಸಂದರ್ಭ ಅಧಿಕಾರಿಗಳು, ಸಾರ್ವಜನಿಕರ ಜತೆ ಉಡಾಪೆಯಾಗಿ ವರ್ತಿಸಿ ಅಮಾನತುಗೊಂಡಿದ್ದರು. ಠಾಣೆಗೆ ಬರುವ ಸಂದರ್ಶಕರು, ಹಿರಿಯ ಅಧಿಕಾರಿಗಳ ಜತೆ ವ್ಯಂಗ್ಯವಾಗಿ ಮಾತನಾಡುತ್ತಾರೆ ಎನ್ನುವ ಆರೋಪ ಇವರ ಮೇಲಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English