ನರ್ತನದ ಹೊತ್ತಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದ ಪಾತ್ರಿ, ಮಕ್ಕಳನ್ನೇ ದೈವ ನರ್ತಕರನ್ನಾಗಿ ಮಾಡಿದ ದೈವ

2:38 PM, Saturday, January 27th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಕಡಬ : ದೈವ ನರ್ತನದ ಹೊತ್ತಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದ ದೈವ ನರ್ತಕನ ಮಕ್ಕಳನ್ನೇ ನರ್ತಕರನ್ನಾಗಿ ದೈವ ನೇಮಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲದ ಶಿರಾಡಿಯಲ್ಲಿ ನಡೆದಿದೆ.

ಕಳೆದ 2023ರ ಮಾರ್ಚ್‌ನಲ್ಲಿ ದೈವ ನರ್ತನದ ವೇಳೆ ಕಾಂತು ಅಜಿಲ ಎನ್ನುವರು ಕುಸಿದು ಬಿದ್ದು ಸಾವಿಗೀಡಾಗಿದ್ದರು. ಕಾಂತು ಅಜಿಲ ಸಾವಿನ ಬಳಿಕ ಗ್ರಾಮಸ್ಥರು ಹೊಸ ದೈವದ ನರ್ತಕನ ಹುಡುಕಾಟದಲ್ಲಿದ್ದರು. ದೈವಜ್ಞರ ಪ್ರಶ್ನೆಯಲ್ಲಿ ಕಂಡುಬಂದಂತೆ ಕಾಂತು ಅಜಿಲರ ಮಕ್ಕಳಾದ ಮೋನಪ್ಪ ಮತ್ತು ದಿನೇಶ್‌ರನ್ನು ಮುಂದಿನ ದೈವ ನರ್ತಕರನ್ನಾಗಿ ನೇಮಿಸಲಾಯಿತು.

ಇದೇ ವಿಚಾರದಲ್ಲಿ ಊರವರು ಪ್ರಶ್ನಾಚಿಂತನೆ ಇಟ್ಟಾಗ ಸಾವನ್ನಪ್ಪಿದ ಮಗನೇ ದೈವ ನರ್ತಕನಾಗಬೇಕು ಅಂತ ಕಂಡು ಬಂದಿತ್ತು. ಪ್ರಶ್ನೆಯಲ್ಲಿ ಕಂಡು ಬಂದಂತೆ ದೈವದ ಮುಂದೆ ಮೃತಪಟ್ಟ ದೈವ ನರ್ತಕನ ಮಕ್ಕಳಿಗೆ ದೀಕ್ಷೆ ಬೂಳ್ಯ ನೀಡಲಾಯಿತು.

ಕಾಂತು ಅಜಿಲನ ಮಕ್ಕಳಾದ ಮೋನಪ್ಪ ಹಾಗೂ ದಿನೇಶ್ ಅವರು ದೀಕ್ಷೆ ಬೂಲ್ಯ ಪಡೆದು, ಸಂಬಂಧಪಟ್ಟ ನಾಲ್ಕು ಗ್ರಾಮಕ್ಕೆ ದೈವಗಳ ಸೇವೆಯ ಜವಾಬ್ದಾರಿ ಹೊತ್ತರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English