ಪುತ್ತೂರು ಪತ್ರಕರ್ತನ ಪತ್ನಿ ಮನೆಗೆ ಬರುವುದಾಗಿ ರೌಡಿಶೀಟರ್ ಬೆದರಿಕೆ, ಪೊಲೀಸರಿಗೆ ದೂರು

2:47 PM, Sunday, January 28th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಪುತ್ತೂರು : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಪ್ರದೀಪ್ ಕುಮಾರ್ ಶೆಟ್ಟಿ ಅವರಿಗೆ ರೌಡಿಶೀಟರ್ ಆಗಿರುವ ನವೀನ್ ರೈ ಪನಡ್ಕ ಕೈಕಾರ ಎಂಬಾತ ರಾತ್ರಿ ವೇಳೆ ಸಂದೇಶ ಹಾಗೂ ಕರೆಗಳ ಮೂಲಕ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ .

ಅಲ್ಲದೆ ಪತ್ನಿ ಮನೆಗೆ ಬರುವುದಾಗಿ ಬೆದರಿಕೆಯನ್ನು ಹಾಕಿದ್ದಾನೆ.

ನವೀನ್‌ ರೈ ಪನಡ್ಕ ವರದಿಯೊಂದರ ವಿಚಾರಕ್ಕೆ ಸಂಬಂದಿಸಿದಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದ.

ನವೀನ್‌ ರೈ ಪನಡ್ಕ ವಿರುದ್ದ 2022ರಲ್ಲಿ ಪುತ್ತೂರು ಗ್ರಾಮಾಂತಾರ ಠಾಣೆಯಲ್ಲಿ ಸದ್ವರ್ತನೆಗಾಗಿ ಪಿಎಆರ್‌ ದಾಖಲಾಗಿತ್ತು. ಹೀಗಾಗಿ ಗಡಿಪಾರು ಹಾಗೂ ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ತಾನು ಮುಂದಿನ ದಿನಗಳಲ್ಲಿ ಸನ್ನಡತೆ ತೋರುವುದಾಗಿ ಪುತ್ತೂರು ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಯವರಿಗೆ ಜಾಮೀನು ಸಹಿತ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದ. ಆದರೇ ಆ ಬಳಿಕವು ಆರೋಪಿ ತನ್ನ ಹಳೆ ಚಾಳಿಯನ್ನು ಮುಂದುವರಿಸಿ ಅಪರಾಧ ಕೃತ್ಯದಲ್ಲಿ ಭಾಗಿಯಾಗುವ ಮೂಲಕ ಬಾಂಡ್‌ ನಿಯಮಗಳನ್ನು ಸಾರಾಸಗಟಾಗಿ ಉಲ್ಲಂಘಿಸಿದ್ದ ಎನ್ನಲಾಗಿದೆ.

ಕಳೆದ ವಿಧಾನ ಸಭೆ ಚುನಾವಣೆ ಸಂದರ್ಭ ಹಿಂದೂ ಪರ ಸಂಘಟನೆಯ ಕಾರ್ಯಕರ್ತರ ಮೇಲೆ ತಲ್ವಾರಿನಿಂದ ದಾಳಿ ನಡೆಸಲು ಯತ್ನಿಸಿದ್ದ ಬಗ್ಗೆ ಸಂಪ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೆ ಪ್ರಕರಣದ ಆಧಾರದಲ್ಲಿ ಆರೋಪಿಯು ಸದ್ವರ್ತನೆಗೆ ನೀಡಿದ 50 ಸಾವಿರ ರೂಪಾಯಿ ಬಾಂಡ್‌ ಅನ್ನು ಮುಟ್ಟುಗೋಲು ಹಾಕುವಂತೆ ಪೊಲೀಸ್‌ ಇಲಾಖೆ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಯವರಿಗೆ ಮನವಿ ಸಲ್ಲಿಸಿತ್ತು.

ಈಗಾಗಲೇ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸ್ ಇಲಾಖೆಯಿಂದಲೇ ಬಾಂಡ್ ರದ್ದುಗೊಂಡ ಈತನ ವಿರುದ್ಧ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪೊಲೀಸ್ ಇಲಾಖೆಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇಲಾಖೆ ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕೋದ್ಯಮಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ನವೀನ್ ರೈ ಪನಡ್ಕನ ಈ ದುರ್ವರ್ತನೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪುತ್ತಿಲ ಪರಿವಾರ ಮನವಿ ಮಾಡಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English