ಸಸ್ಪೆನ್ಸ್-ಥಿಲ್ಲರ್‌, ಆ್ಯಕ್ಷನ್ ಎಂಟರ್ಟೈನ್ಮಂಟ್ ಸಿನಿಮಾ ಕ್ಲಾಂತಾ ಫೆ.2 ಕ್ಕೆ ತೆರೆಗೆ

7:05 PM, Wednesday, January 31st, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಕ್ಲಾಂತಾ ಕನ್ನಡ ಸಿನಿಮಾ ಚಿತ್ರೀಕರಣವು ಬಹುತೇಕ ಕರಾವಳಿಯ ಸುತ್ತಮುತ್ತ ನಡೆದಿದ್ದು, ನಮ್ಮ ಮಣ್ಣಿನ ಮಹಿಮೆ, ಆಚಾರ, ವಿಚಾರ,ಸಂಸ್ಕೃತಿಯನ್ನು ಸಾರುವುದರ ಜೊತೆಗೆ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ. ಚಿತ್ರದಲ್ಲಿ ತುಳುನಾಡಿನ ಕೊರಗಜ್ಜ ದೈವದ ಪವಾಡದ ಬಗ್ಗೆ ಹೇಳಲಾಗಿದೆ. ಈ ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ಫೆಬ್ರವರಿ 2 ರಂದು ತೆರೆಕಾಣಲಿದೆ ಎಂದು ಸಿನಿಮಾದ ನಿರ್ದೇಶಕ ವೈಭವ್ ಪ್ರಶಾಂತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಿನಿಮಾ ರೋಚಕವಾಗಿ, ಟ್ವಿಸ್ಟ್‌ಗಳ ಮೂಲಕ ಸಾಗಿ, ಪ್ರೇಕ್ಷಕರಿಗೆ ಕುತೂಹಲ ಮೂಡಿಸುತ್ತದೆ . ಈ ಸಿನಿಮಾದಲ್ಲಿ ಇಂದಿನ ಯುವ ಜನಾಂಗಕ್ಕೆ ಒಂದು ಸಂದೇಶ ಹೇಳುವ ಪ್ರಯತ್ನ ಮಾಡಲಾಗಿದೆ. ನಿರ್ದೇಶಕ ವೈಭವ್ ಪ್ರಶಾಂತ್, ನಿರ್ಮಾಪಕ ಉದಯ್ ಅಮ್ಮಣ್ಣಾಯ ಕೆ ಅವರ ಅದ್ಭುತ ಪ್ರಯತ್ನವಾಗಿದೆ. ಸಿನಿಮಾದಲ್ಲಿ ಎಂ ವಿಫೇಶ್ ನಾಯಕರಾಗಿ ಹಾಗೂ ಸಂಗೀತಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಅವರೊಂದಿಗೆ ಪಂಚಮಿ ವಾಮಂಜೂರು, ಶೋಭರಾಜ್, ವೀಣಾ ಸುಂದರ್, ಸಂಗೀತಾ, ದೀಪಿಕಾ, ಪ್ರವೀಣ್ ಜೈನ್, ಸ್ವಪ್ಪಾ ಶೆಟ್ಟಿಗಾರ್ ತುಳು ರಂಗಭೂಮಿ ಖಳನಟ ತಿಮ್ಮಪ್ಪ ಕುಲಾಲ್, ರಾಘವೇಂದ್ರ ಕಾರಂತ್ ಹೊಸ ಪ್ರತಿಭೆ ಯುವ ಮಂಜೇಶ್ ನಟಿಸಿದ್ದಾರೆ. ನಿರ್ಮಾಪಕರಾಗಿ ಸುಬ್ರಹ್ಮಣ್ಯ ಪಂಜದ ಉದಯ ಅಮ್ಮಣ್ಣಾಯ ಕೆ, ಸಹೋದರ ಸತೀಶ್ ಅಮ್ಮಣ್ಣಾಯ ಇವರು ಬಂಡವಾಳ ಹಾಕಿ, ಪ್ರದೀಪ್ ಗೌಡ, ಅರುಣ್ ಕುಮಾರ್, ಜಯಕುಮಾರ್, ಹೇಮಂತ್ ರ ಇವರು ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಛಾಯಾಗ್ರಹಣ ಮೋಹನ್, ಸಂಗೀತ ಎಸ್ ಪಿ ಚಂದ್ರಕಾಂತ್, ಸಾಹಸ ವಿನೋದ್, ಸಂಭಾಷಣೆ ಮಹೇಶ್ ಮಂಡ್ಯ ,ಸಂಕಲನ ಪಿ ಆರ್ ಸೌಂದರ್ ರಾಜ್ ಇವರು ಕೆಲಸ ಮಾಡಿದ್ದಾರೆ.

ಸಿನಿಮಾದ ಕಥೆ ಬಗ್ಗೆ ಹೇಳುವುದಾದರೆ,ವೀಕೆಂಡ್‌ನಲ್ಲಿ ಮನೆಯವರಿಗೆ ತಿಳಿಸದ ಹುಡುಗ-ಹುಡುಗಿ ಅಪರಿಚಿತ ಸ್ಥಳವೊಂದಕ್ಕೆ ಹೋಗಿ, ಅಲ್ಲಿ ಸಮಸ್ಯೆಗಳಿಗೆ ಸಿಲುಕಿ ಕೊಳ್ಳುತ್ತಾರೆ. ಇದರಿಂದ ಹೇಗೆ ಪಾರಾಗುತ್ತಾರೆ, ಒಂದು ನಿರ್ಧಾರ ಹೇಗೆಲ್ಲಾ ತೊಂದರೆಗೆ ಸಿಲುಕಿಸುತ್ತದೆ, ಅಲ್ಲಿಂದ ಅವರು ಪಾರಾಗುತ್ತಾರೆಯೋ, ಅಲ್ಲೇ ಮಣ್ಣಾಗುತ್ತಾರೋ, ಅಥವಾ ದೈವ ಅವರನ್ನು ರಕ್ಷಿಸುತ್ತದೆಯೋ ಎಂಬುದೇ ಸಿನಿಮಾದ ಕಥೆಯ ಒಂದು ಎಳೆ.

ಸಿನಿಮಾವು ಈಗಾಗಲೇ ರಾಜ್ಯಾದ್ಯಂತ ಬಿಡುಗಡೆ ಆಗಿ ಎಲ್ಲಾ ಕಡೆ ಅದ್ಭುತ ಪ್ರತಿಕ್ರಿಯೆ ಬಂದಿದ್ದು ಈಗ ಫೆಬ್ರವರಿ 2 ನೇ ತಾರೀಕಿನಿಂದ ಕರಾವಳಿ ಭಾಗದ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನಗೊಳ್ಳಲಿದೆ.

ಪತ್ರಿಕಾಗೋಷ್ಠಿಯಲ್ಲಿ ವಿಘ್ನೇಶ್, ಪಂಚಮಿ ವಾಮಂಜೂರು ಉಪಸ್ಥಿತರಿದ್ದರು. ಉತ್ತಮ ಸಿನಿಮಾಗಳಿಗೆ ಪ್ರೋತ್ಸಾಹ ನೀಡಿ: ವಿಘ್ನೇಶ್ ಉತ್ತಮ ಸಿನಿಮಾಗಳು ಬಂದಾಗ ಪ್ರೇಕ್ಷಕರು ಟಾಕೀಸ್ ಗೆ ಬಂದು ಸಿನಿಮಾ ನೋಡಿ ಎಂದು ಚಿತ್ರದ ನಟ ವಿಘ್ನೇಶ್ ವಿನಂತಿಸಿದರು. ಪ್ರೇಕ್ಷಕರು ಸಿನಿಮಾ ನೋಡಿ ಬೆಂಬಲಿಸಿದಾಗ ನಿರ್ಮಾಪಕರಿಗೂ ಅನುಕೂಲವಾಗುತ್ತದೆ. ನನ್ನಂತಹ ಹೊಸ ಕಲಾವಿದರಿಗೆ ತಂತ್ರಜ್ಞರಿಗೆ ಸಹಾಯ ಆಗುತ್ತದೆ ಎಂದವರು ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English