ನಾ ನಿನ್ನ ಉಸಿರು

7:17 PM, Sunday, July 31st, 2022
Share
1 Star2 Stars3 Stars4 Stars5 Stars
(No Ratings Yet)
Loading...

ನನ್ನ ಕಡೆಯದಿರು ಮೂರ್ಖ
ಮುಂದಿಹುದು ನಿನಗೆ ನರಕ,
ನಾನಿದ್ದರೆ ನಿನಗೆ ಉಸಿರು
ನಾನಿದ್ದರೆ ಜಗವೇ ಹಸಿರು…..

ಧಣಿದವರಿಗೆ ನೆರಳಾಗುವೆ
ಹಸಿದವರಿಗೆ ಹಣ್ಣು ನೀಡುವೆ
ಖಗ – ಮೃಗಗಳಿಗೆ
ನಾ ಆಸರೆಯ ಗೂಡಾಗುವೆ….

ಮಕ್ಕಳಿಗೆಲ್ಲ ಮರಕೋತಿ
ಜೋಕಾಲಿ, ಕಣ್ಣಾಮುಚ್ಚಾಲೆ
ಆಟವಾಡಿ ಖುಷಿಪಡಲು
ನಾನು ಬೇಕಾಗಿರುವೆ…..

ನನ್ನನ್ನು ಕಡಿದರೆ
ನಿನಗಿಲ್ಲ ಉಳಿಗಾಲ,
ಮುನಿಯುವ ಮಳೆರಾಯ
ರವಿಯು ತರುವ ಉರಿಯ..

ನನ್ನನ್ನು ನೀ ಹರಸು
ನಿತ್ಯವೂ ನೀ ಸಂಭ್ರಮಿಸು,
ನನ್ನ ಸಂತತಿ ಬೆಳೆಸು
ನಿನ್ನ ಬಾಳಾಗುವುದು ಸೊಗಸು….


ಮಂಜುನಾಥ ಗುತ್ತೇದಾರ.
ಸಾ// ದೇವಸೂಗೂರು.
ತಾ// ಜಿ// ರಾಯಚೂರು.
ಮೋ.ನಂ. 9632759691
ಇಮೇಲ್ manjunatha071@gmail.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English