ಬೆಂಗಳೂರಿನಲ್ಲಿ ವಿಶ್ವದ ಮೊದಲ ಮಲ್ಟಿಓಮಿಕ್ಸ್‌ ಲ್ಯಾಬ್‌ ಸ್ಥಾಪನೆ: ವಿಜ್ಹಿ ಸಿಇಓ ಡಾ ವಿಷ್ಣುವರ್ಧನ್‌

2:44 PM, Saturday, February 24th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಬೆಂಗಳೂರು : ಮೆಟಬಾಲಿಕ್‌ ಡಿಸ್‌ಆರ್ಡರ್‌ಗಳ ನಿರ್ವಹಣೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವಾಗಿರುವ ಮಲ್ಟಿಓಮಿಕ್ಸ್‌ ನ ವಿಶ್ವದ ಮೊದಲ ಲ್ಯಾಬ್‌ ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುವುದು ಎಂದು ವಿಜ್ಹಿ ಸಂಸ್ಥೆಯ ಸಂಸ್ಥಾಪಕರು “ಸ್ವದೇಶಿ ಜಿಪಿಟಿ ಹನೂಮಾನ್”‌ ನ ನಿರ್ಮಾತೃಗಳಾದ ಡಾ. ವಿಷ್ಣುವರ್ಧನ್‌ ತಿಳಿಸಿದರು.

ಅಮೇರಿಕಾದ ಇಲಿಯಾನ್ಸ್‌ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರಗಳ ಮೂಲಕ ಆವಿಷ್ಕಾರಗೊಳಿಸಲಾಗಿರುವ ಈ ನೂತನ ತಂತ್ರಜ್ಞಾನ ಮೆಟಬಾಲಿಕ್‌ ಡಿಸ್‌ ಆರ್ಡರ್‌ಗಳ ನಿರ್ವಹಣೆಯಲ್ಲಿ ಹೊಸದೊಂದು ಮೈಲಿಗಲ್ಲನ್ನು ಸ್ಥಾಪಿಸಲಿದೆ. ಮೆಟಬಾಲಿಕ್‌ ಕಾಯಿಲೆಗಳ ಸಂಕೀರ್ಣತೆಗಳನ್ನು ಅರ್ಥೈಸಿಕೊಳ್ಳುವಲ್ಲಿ ಮಲ್ಟಿಓಮಿಕ್ಸ್‌ ತಂತ್ರಜ್ಞಾನ ಬಹಳ ಸಮರ್ಥವಾಗಿದೆ. ಇಲಿಯಾನ್ಸ್‌ ವಿಶ್ವವಿದ್ಯಾಲಯ, ಐಐಟಿ ಬಾಂಬೆಯಂತ ಪ್ರತಿಷ್ಠಿತ ಸಂಸ್ಥೆಗಳ ಸಹಯೋಗದಿಂದ ಆವಿಷ್ಕಾರಗೊಳಿಸಲಾಗಿರುವ ಈ ತಂತ್ರಜ್ಞಾನ ಡಯಾಬಿಟಿಕ್‌, ಓಬೆಸಿಟಿ, ರಕ್ತದ ಒತ್ತಡ ಹಾಗೂ ಅದರಿಂದ ಆಗುವಂತಹ ಸಂಕೀರ್ಣ ಸಮಸ್ಯೆಗಳನ್ನ ಸರಿಯಾಗಿ ಅರ್ಥೈಸಿಕೊಳ್ಳುವಲ್ಲಿ ಹಾಗೂ ನಿರ್ವಹಣೆ ಮಾಡುವಲ್ಲಿ ಸಹಾಯ ಮಾಡಲಿದೆ ಎಂದರು.

“ಸ್ವದೇಶಿ ಜಿಪಿಟಿ ಹನೂಮಾನ್”‌ ನ ಅಳವಡಿಕೆಯಿಂದಾಗಿ ವ್ಯಕ್ತಿಗಳ ಆರೋಗ್ಯ ಕುರಿತ ಹಿಂದಿನ ಸಮಗ್ರ ದಾಖಲೆಗಳನ್ನ ಸುಲಭ ರೀತಿಯಲ್ಲಿ ದಾಖಲಿಸಿಡಲು ಹಾಗೂ ಅಗತ್ಯವಿರುವ ಸಂಧರ್ಭದಲ್ಲಿ ಸುಲಭ ರೀತಿಯಲ್ಲಿ ಪರಾಮರ್ಶೆ ನಡೆಸಲು ಇದು ಸಹಾಯ ಮಾಡಲಿದೆ. “ವಿಜ್ಹಿ ಮಲ್ಟಿಓಮಿಕ್ಸ್‌” ಗೆ ಆರೋಗ್ಯ ದಾಖಲೆಗಳನ್ನು ಅಪ್‌ ಲೋಡ್‌ ಮಾಡಿದರೆ ವಿಶ್ಲೇಷಣೆ ಮಾಡಿ, ಅಗತ್ಯವಿರುವಷ್ಟು ಮಾಹಿತಿಯನ್ನು ಇದು ಸಮರ್ಥವಾಗಿ ಒದಗಿಸಲಿದೆ. ಯಾವುದೇ ಭಾಷೆಯಲ್ಲಿ ಕೇಳಿದರೂ ವೈದ್ಯಕೀಯ ಸಾರಾಂಶ ಒದಗಿಸಲಿದೆ. ಇದರಿಂದ ರೋಗಿಗಳಿಗೆ ನಿಖರ ಮತ್ತು ವೈಜ್ಞಾನಿವಾಗಿ ಚಿಕಿತ್ಸೆ ನೀಡಲು ವೈದ್ಯರುಗಳಿಗೆ ಸಹಾಯವಾಗಲಿದೆ. ದೇಹ ಅತ್ಯಂತ ಸಂಕಿರ್ಣದಾಯಕವಾಗಿದ್ದು, ಪ್ರತಿಯೊಬ್ಬರೂ ತನ್ನದೇ ಆದ ವಂಶಾವಳಿಯನ್ನು ಹೊಂದಿದ್ದಾರೆ. ದೇಹದಲ್ಲಿ ವಂಶಾವಳಿಯ ಬದಲಾವಣೆ, ಪ್ರೋಟಿನ್‌ ಗಳ ಅಗತ್ಯತೆ. ಯಾವ ಆಹಾರವನ್ನು ಸ್ವೀಕರಿಸಲಾಗುತ್ತಿದೆ ಹೀಗೆ ಹತ್ತು ಹಲವು ದತ್ತಾಂಶವನ್ನು ವಿಶ್ಲೇಷಣೆ ಮಾಡಲಿದೆ. ಕೃತಕ ಬುದ್ದಿಮತ್ತೆಯ ತಂತ್ರಜ್ಞಾನದಲ್ಲಿ ಇದು ಡಿಜಿಟಲ್‌ ಸಹಿಯನ್ನು ಒಳಗೊಂಡಿದ್ದು, ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ ತರಲಿದೆ ಎಂದು ಡಾ. ಡಾ. ವಿಷ್ಣು ವರ್ಧನ್‌ ಹೇಳಿದರು.

ಇಲಿಯಾನ್ಸ್‌ ವಿವಿ ತಿಮೋತಿ ಲಾರೆನ್ಸ್‌ ಕಿಲೀನ್‌ ಮಾತನಾಡಿ, ಮಲ್ಟಿಓಮಿಕ್ಸ್‌ ಮೆಟಬಾಲಿಕ್‌ ಡಿಸ್‌ಆರ್ಡರ್‌ಗಳ ನಿರ್ವಹಣೆಯಲ್ಲಿ ಪ್ರಮುಖವಾದ ಆವಿಷ್ಕಾರವಾಗಿದೆ. ಈ ಆವಿಷ್ಕಾರ ಮುಂದಿನ ದಿನಗಳಲ್ಲಿ ಆರೋಗ್ಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದರು.

ಪ್ರೊ. ನರೇಂದ್ರ ಅಹುಜಾ ಅವರು ಮಾತನಾಡಿ, ಚಿಕಿತ್ಸಾ ವಿಧಾನದಲ್ಲಿನ ಹೊಸ ಭವಿಷ್ಯವನ್ನು ಮೆಟಾಓಮಿಕ್ಸ್‌ ರೂಪಿಸಲಿದೆ. ಇದರ ಉಪಯೋಗ ಎಲ್ಲರೂ ಪಡೆದುಕೊಳ್ಳಲಿದ್ದಾರೆ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English