ಮಂಗಳೂರು : ಮಾರ್ಚ್ 1 ರಿಂದ 3ರವರೆಗೆ ಪಣಂಬೂರು ಬೀಚಿನಲ್ಲಿ ನಡೆಯುವ ನಡೆಯುವ ಜಾನಪದ ಕಡಲು ಉತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಅಧಾನಿ ಗ್ರೂಪ್‌ನ ಅಧ್ಯಕ್ಷರಾದ ಕಿಶೋರ್ ಆಳ್ವ, ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ಮುಂಬಯಿಯ ಅಧ್ಯಕ್ಷರಾದ ಶ್ರೀ ಸದಾಶಿವ ಶೆಟ್ಟಿ ಕನ್ಯಾನ, ರೋಹನ್ ಕಾರ್ಪೊರೇಶನ್ ಸಂಸ್ಥಾಪಕರಾದ ರೋಹನ್ ಮೊಂತೆರೋ, ದಿವ್ಯರೂಪ ಕನ್ಸ್ಟ್ರಕ್ಷನ್ ಮಾಲಕರಾದ ಯಾದವ ಕೋಟ್ಯಾನ್ ಪೆರ್ಮುದೆ. ದೈವ ನರ್ತಕರಾದ ಮುಖೇಶ್ ಗಂಧಕಾಡ್ ಇವರಿಗೆ ಜಾನಪದ ಕಡಲು ಉತ್ಸವ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಪ್ರಶಸ್ತಿಯನ್ನು ಗೌರವಾನ್ವಿತ ಕರ್ನಾಟಕ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಧಾನ ಮಾಡಲಿರುವರು. ಪ್ರಶಸ್ತಿ ಪ್ರಧಾನ ಸಮಾರಂಭವು ಮಾರ್ಚ್ 1ರಂದು ಸಂಜೆ 6.30ಕ್ಕೆ ನಡೆಯಲಿದೆ
ಮಾರ್ಚ್ 1 ರಂದು ಕಾರ‍್ಯಕ್ರಮವನ್ನು ಘನವೆತ್ತ ಕರ್ನಾಟಕ ಸರಕಾರದ ರಾಜ್ಯಪಾಲರಾದ ಗೌರವಾನ್ವಿತ ಥಾವರ್‌ಚಂದ್ ಗೆಹ್ಹೋಟ್ ಸಂಜೆ 6.30ಕ್ಕೆ ಉದ್ಘಾಟಿಸಲಿರುವರು. ವಿಧಾನ ಸಭೆಯ ಸ್ಪೀಕರ್ ಶ್ರೀ ಯು. ಟಿ. ಖಾದರ್ ಪ್ರದರ್ಶನಗಳನ್ನು ಉದ್ಘಾಟಿಸಲಿರುವರು.
ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವಿಧಾನ ಸಭೆಯ ಸದಸ್ಯರಾದ ಡಾ. ವೈ. ಭರತ್ ಶೆಟ್ಟಿ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಮಂಜಮ್ಮ ಜೋಗತಿ, ಮಂಗಳೂರು ಮಹಾನಗರ ಪಾಲಿಕೆ ಮಹಾಪೌರರಾದ ಸುಧೀರ್ ಶೆಟ್ಟಿ ಕಣ್ಣೂರು, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರಿನ ಆದಿತ್ಯ ನಂಜರಾಜ್, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಟ್ರಸ್ಟಿ ಬಾಲಕೃಷ್ಣ ಹೆಗ್ಡೆ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೊಡಿಯಾಲ್‌ಬೈಲ್,
ಉಪಸ್ಥಿತರಿರುವರು. 7.30ರಿಂದ ಡಾ. ರಮೇಶ್ಚಂದ್ರ ಹಾಗೂ ಕಲಾವತಿ ದಯಾನಂದ ಬಳಗದಿಂದ ಜಾನಪದ ರಸಸಂಜೆ ಕರ‍್ಯಕ್ರಮ ಜರಗಲಿರುವುದು.
ಮಾರ್ಚ್ 2 ರಂದು ಸಂಜೆ 5.30 ರಿಂದ ವಿಚಾರ ಸಂಕೀರ್ಣ ಮತ್ತು ಜಾನಪದ ಪರಿಷತ್ ಪ್ರಶಸ್ತಿ ಪ್ರಧಾನ ಕಾರ‍್ಯಕ್ರಮ ಜರಗಲಿರುವುದು. ಪುತ್ತೂರು ವಿಧಾನ ಸಭಾ ಶಾಸಕರಾದ ಅಶೋಕ್ ಕುಮಾರ್ ರೈ, ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಕ.ಜಾ.ಪ. ಬೆಂಗಳೂರು ಆಡಳಿತಾಧಿಕಾರಿ ನಂದಕುಮಾರ್ ಹೆಗ್ಡೆ ವಹಿಸಲಿರುವರು. ನಿವೃತ್ತ ಕುಲಪತಿಗಳಾದ ಡಾ. ಚಿನ್ನಪ್ಪ ಗೌಡ ಹಾಗೂ ನಿಟ್ಟೆ ವಿಶ್ವವಿದ್ಯಾನಿಲಯದ ಡಾ. ಸಾಯಿ ಗೀತಾ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ದಯಾನಂದ ಕತ್ತಲ್‌ಸರ್ ಹಾಗೂ ಜಾನಪದ ಸಾಹಿತಿ ಮೈಮ್ ರಾಮ್‌ದಾಸ್ ವಿಷಯ ಮಂಡಿಸಲಿರುವರು. ಮುಖ್ಯ ಅತಿಥಿಗಳಾಗಿ ಕೆ.ಪಿ.ಸಿ.ಸಿ. ಪ್ರಧಾನ ಕಾ ರ‍್ಯದರ್ಶಿ ಮಿಥುನ್ ರೈ, ರಾಜ್ಯ ಭಾರತೀಯ ಜನತಾ ಪಾರ್ಟಿ ಪ್ರಧಾನ ಕರ‍್ಯದರ್ಶಿ ಬ್ರಿಜೇಶ್ ಚೌಟ ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಕುಳಾಯಿ ಫೌಂಡೇಶನ್ ಅಧ್ಯಕ್ಷರಾದ ಪ್ರತಿಭಾ ಕುಳಾಯಿ, ತುಳುನಾಡ ರಕ್ಷಣಾ ವೇದಿಕೆಯಾ ಯೋಗೀಶ್ ಶೆಟ್ಟಿ ಜೆಪ್ಪು, ಮಂಗಳೂರು ಮಹಾನಗರ ಪಾಲಿಕೆ ಕಾರ್ಪೊರೇಟರ್ ಸುಮಿತ್ರ ಉಪಸ್ಥಿತಿಯಲ್ಲಿರುವರು. ಸಂಜೆ 7.30ಕ್ಕೆ ಅಜಯ್ ವಾರಿಯರ್ ತಂಡದಿಂದ “ಸಂಗೀತ ರಸ ಸಂಜೆ” ನಡೆಯಲಿರುವುದು. ಮಾರ್ಚ್ 3 ರಂದು ಸಂಜೆ 3.00ಕ್ಕೆ ಮಂಗಳೂರು ದಕ್ಷಿಣ ಶಾಸಕರಾದ ಶ್ರೀ. ಡಿ. ವೇದವ್ಯಾಸ್ ಕಾಮತ್‌ರವರು ಗಾಳಿಪಟ
ಪ್ರದರ್ಶನದ ಉದ್ಘಾಟನೆ ಮಾಡಲಿರುವರು. ಭಂಡಾರಿ ಬಿಲ್ಡರ್ಸ್ ಚೇರ್‌ಮ್ಯಾನ್ ಲಕ್ಷ್ಮೀಶ ಭಂಡಾರಿ ಅಧ್ಯಕ್ಷತೆ ವಹಿಸಲಿರುವರು. ಅಂದು ಸಂಜೆ 4 ರಿಂದ ಜಾನಪದ ಮತ್ತು ಸಾಂಸ್ಕೃತಿಕ ಪ್ರದರ್ಶನ ನಡೆಯಲಿರುವುದು. ಅಂದು ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಜಾನಪದ ಪರಿಷತ್ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಿರುವರು. ಆತ್ಮ ಶಕ್ತಿ ವಿವಿದೋದ್ದೇಶ ಸಹಕಾರಿ ಸಂಘ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್ ಉದ್ಘಾಟಿಸಲಿರುವರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವಿಧಾನ ಸಭೆ ಸದಸ್ಯರಾದ ಡಾ| ವೈ ಭರತ್ ಶೆಟ್ಟಿ ವಹಿಸಲಿರುವರು, ಮಾನ್ಯ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಪ್ರಶಸ್ತಿ ಪ್ರಧಾನ ಮಾಡಲಿರುವರು. ಮುಖ್ಯ ಅತಿಥಿಗಳಾಗಿ ನವ ಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷರಾದ ಡಾ. ವೆಂಕಟರಮಣ ಅಕ್ಕರಾಜು, ಜಾನಪದ ಪರಿಷತ್ತು ಬೆಂಗಳೂರು ಇದರ ಕಾರ‍್ಯಾಧ್ಯಕ್ಷರಾದ ಪ್ರೊ ಬೋರಲಿಂಗಯ್ಯ, ಮೂಡಬಿದ್ರೆ ಶಾಸಕರಾದ ಉಮಾನಾಥ್ ಕೋಟ್ಯಾನ್, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ, ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್, ಸುಳ್ಯ ಶಾಸಕರಾದ ಕು|| ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಶಾಸಕರಾದ ಪ್ರತಾಪಸಿಂಹ ನಾಯಕ್ ಕೆ., ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿ, ಕೆ.ಪಿ.ಸಿ.ಸಿ. ಪ್ರಧಾನ ಕಾರ‍್ಯದರ್ಶಿ ಇನಾಯತ್ ಆಲಿ, ವಿಧಾನ ಪರಿಷತ್ ಶಾಸಕರಾದ ಬಿ.ಎಂ. ಫಾರೂಕ್, ವಿಧಾನ ಪರಿಷತ್ ಶಾಸಕರಾದ ಎಸ್.ಎಲ್. ಬೋಜೆ ಗೌಡ, ವಿಧಾನ ಪರಿಷತ್ ಶಾಸಕರಾದ ಕೆ. ಹರೀಶ್ ಕುಮಾರ್, ವಿಶ್ವ ಹಿಂದೂ ಪರಿಷತ್ ರಾಜ್ಯ ಕಾರ್ಯದರ್ಶಿ ಶ್ರೀ ಶರಣ್ ಪಂಪ್‌ವೆಲ್, ವಿರೋದ ಪಕ್ಷದ ನಾಯಕರಾದ ಪ್ರವೀಣ್ ಚಂದ್ರ ಆಳ್ವ ಉಪಸ್ಥಿತರಿರುವರು ವಿಶೇಷವಾಗಿ ಈ ಸಂದರ್ಭದಲ್ಲಿ ಅಯೋಧ್ಯ ಶ್ರೀ ರಾಮ ವಿಗ್ರಹ ಶಿಲ್ಪಿ “ಅರುಣ್ ಯೋಗಿರಾಜ್” ಅವರಿಗೆ “ಅಮರ ಶಿಲ್ಪಿ” ಬಿರುದು ಪ್ರಧಾನ ಮಾಡಲಿರುವರು. ಸಂಜೆ 7.30 ರಿಂದ ಮಣಿಕಾಂತ್ ಕದ್ರಿ ಬಳಗದವರಿಂದ ಮ್ಯೂಸಿಕಲ್ ನೈಟ್ ಕರ‍್ಯಕ್ರಮ ನಡಯಲಿರುವುದು. ವಿಶೇಷ ಆಹ್ವಾನಿತರಾಗಿ ಹಿರಿಯ ಚಲನಚಿತ್ರ ನಟ, ನಾಟಕ ಕಲಾವಿದರಾದ ವಿಜಯ ಕುಮಾರ್ ಕೊಡಿಯಾಲ್‌ಬೈಲ್, ಶ್ರೀ ನವೀನ್ ಡಿ ಪಡೀಲ್, ಡಾ. ದೇವದಾಸ್ ಕಾಪಿಕಾಡ್, ಶ್ರೀ ಬೋಜರಾಜ್ ವಾಮಂಜೂರು, ಶ್ರೀ ಅರವಿಂದ ಬೋಳಾರ್, ಶ್ರೀ ಪ್ರಕಾಶ್ ಪಾಂಡೇಶ್ವರ, ಶ್ರೀ ಕಿಶೋರ್ ಡಿ. ಶೆಟ್ಟಿ, ಶ್ರೀ ಸ್ವರಾಜ್ ಶೆಟ್ಟಿ, ಶ್ರೀ ಮೋಹನ್ ಕೊಪ್ಪಳ, ಶ್ರೀ ಸಾಯಿಕೃಷ್ಣ, ತಿಲಕ್‌ರಾಜ್, ಭರತ್‌ರಾಜ್ ಕೃಷ್ಣಾಪುರ ಮೊದಲಾದ ಗಣ್ಯರು ಉಪಸ್ಥಿತರಿರುವರು.
Click this button or press Ctrl+G to toggle between Kannada and English