ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಅಗಲಿದ ಪತ್ರಕರ್ತ ಮನೋಹರ ಪ್ರಸಾದ್ ಗೆ ಶ್ರದ್ಧಾಂಜಲಿ

6:09 PM, Saturday, March 2nd, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಬಹುಮುಖ ಪ್ರತಿಭೆಯ ಪತ್ರಕರ್ತ ಮನೋಹರ ಪ್ರಸಾದ್ ಜಿಲ್ಲಾಡಳಿತ ಹಾಗೂ ಪತ್ರಕರ್ತರ ನಡುವಿನ ಕೊಂಡಿಯಾಗಿದ್ದರು ಎಂದು ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ತಿಳಿಸಿದ್ದಾರೆ.

ಅವರು ಅಗಲಿದ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ರವರಿಗೆ ನಗರದ ಪತ್ರಿಕಾಭವನದಲ್ಲಿಂದು ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ ಕ್ಲಬ್,ಪತ್ರಿಕಾ ಭವನಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ನುಡಿನಮನದ ಮೂಲಕ ಶ್ರದ್ಧಾಂಜಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಮನೋಹರ ಪ್ರಸಾದ್ ಪತ್ರ ಕರ್ತರು ಮಾತ್ರವಲ್ಲದೆ ಓರ್ವ ಉತ್ತಮ ನಿರೂಪಕರಾಗಿದ್ದರು.ಅವರು ತಮ್ಮ ನಿರೂಪಣೆಯ ಬಹುಮುಖ ಪ್ರತಭೆಯ ಮೂಲಕ ಸಾಕಷ್ಟು ಮಾಹಿತಿ ಗಳನ್ನು ಬಂದಿರುವ ಸಭಿಕರಿಗೆ ತಿಳಿಸು ತ್ತಿದ್ದರು.ಆದುದರಿಂದ ಜನರಿಗೆ ತಿಳುವಳಿಕೆ ನೀಡುವುದರ ಜೊತೆಗೆ ಜಿಲ್ಲಾ ಡಳಿತದ ಕೆಲಸವನ್ನು ಸರಳಗೊಳಿಸುತ್ತಿದ್ದರು. ಪತ್ರಕರ್ತರಾಗಿ ಅವರಲ್ಲಿದ್ದ ಜ್ಞಾನ, ಪ್ರತಿಭೆಯಿಂದ ಜಿಲ್ಲಾಡಳಿತದ ನಡುವೆ ಹಲವು ವರ್ಷ ಗಳ ಕಾಲ ಕೊಂಡಿಯಾಗಿ ಕಾರ್ಯ ನಿರ್ವಹಿಸಿದ್ದರು.ಆದುದರಿಂದ ಜಿಲ್ಲೆ ಗೆ ಎಷ್ಟೇ ದೊಡ್ಡ ಹುದ್ದೆಯ ವ್ಯಕ್ತಿಗಳು ಅತಿಥಿಗಳಾಗಿ ಬಂದರು ಆ ಕಾರ್ಯಕ್ರಮದ ನಿರೂಪಣೆಯ ಹೊಣೆಗಾರಿಕೆಯನ್ನು ಮನೋಹರ ಪ್ರಸಾದ್ ವಹಿಸಿಕೊಂಡರೆ ನಾವು ನಿರಾಳರಾಗಿ ರುತ್ತಿದ್ದೆವು ಎಂದು ನಿವೃತ್ತ ಅಪರ ಜಿಲ್ಲಾ ಧಿಕಾರಿ ಪ್ರಭಾಕರ ಶರ್ಮ ನುಡಿನಮನ ಸಲ್ಲಿಸಿದರು.

ಸಮಾರಂಭದಲ್ಲಿ ಮಾಜಿ ಶಾಸಕ ಐವನ್ ಡಿ ಸೋಜ,ಹಿರಿಯ ಪತ್ರಕರ್ತರಾದ ಚಿದಂಬರ ಬೈಕಂಪಾಡಿ,ಜಾರ್ಜ್ ,ಅನ್ನು ಮಂಗಳೂರು, ಕುಮಾರ ನಾಥ್ , ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ಪತ್ರಿಕಾ ಭವನ ಟ್ರಸ್ಟ್ ಕಾರ್ಯದರ್ಶಿ ವೇಣು ವಿನೋದ್, ಪತ್ರಕರ್ತರ ರಾದ ದಿನೇಶ್ ಇರಾ, ಭಾಸ್ಕರ ರೈ ಕಟ್ಟ,ಹಾಗೂ ನಂದ ಗೋಪಾಲ್ , ಸಚಿತಾ ನಂದ ಗೋಪಾಲ್ ವಿಶ್ವಾಸ್ ದಾಸ್ , ಮಾಧವ ಸುವರ್ಣ ಮೊದಲಾದವರು ನುಡಿನಮನದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ, ಪತ್ರಕರ್ತರ ರ್ಯಕ್ರಮ ನಿರೂಪಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English