ವಿಟ್ಲದಲ್ಲಿ ಚರ್ಚ್‍ ಪಾದ್ರಿಯಿಂದ ವೃದ್ಧ ದಂಪತಿ ಮೇಲೆ ಹಲ್ಲೆ

7:19 PM, Saturday, March 2nd, 2024
Share
1 Star2 Stars3 Stars4 Stars5 Stars
(No Ratings Yet)
Loading...

ವಿಟ್ಲ : ಚರ್ಚ್ ನ ಪಾದ್ರಿಯೊಬ್ಬರು ಹಿರಿಯ ದಂಪತಿಯನ್ನು ಅಮಾನುಷವಾಗಿ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ವಿಟ್ಲ ಸಮೀಪದ, ಅಡ್ಯನಡ್ಕ ಮನೆಲಾ ಚರ್ಚ್‌ ವ್ಯಾಪ್ತಿಯಲ್ಲಿ ನಡೆದಿದೆ.

ಪುಣಚ ಗ್ರಾಮದ ಎರ್ಮೆತ್ತಡ್ಕ ನಿವಾಸಿ ಗ್ರೆಗರಿ ಮೊಂತೇರೊ(79) ದಂಪತಿ ಮನೆಗೆ ಚರ್ಚ್ ಧರ್ಮಗುರು ಫಾ.ನೆಲ್ಸನ್ ಓಲಿವೆರಾ ಅರವರು ಮನೆ ಶುದ್ಧ ಭೇಟಿ ನಿಮಿತ್ತ ತೆರಳಿದ್ದರು. ಈ ಸಂದರ್ಭದಲ್ಲಿ ಧರ್ಮಗುರು ಫಾ.ನೆಲ್ಸನ್ ರವರು ಪ್ರಾಯಸ್ಥ ದಂಪತಿ ಚರ್ಚ್ ಗೆ ಯಾವುದೇ ದೇಣಿಗೆ, ವಂತಿಗೆ ನೀಡದೆ ಸಹಕರಿಸುತ್ತಿಲ್ಲ ಎಂದೆಲ್ಲ ಹೇಳಿ ಆ ದಂಪತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ವೃದ್ದ ದಂಪತಿ ಮನೆಯ ಗೇಟಿಗೆ ಬೀಗ ಹಾಕಿ ಪಾದ್ರಿ ಕಾರನ್ನು ಕೋಮಡು ಹೋಗಲು ತಡೆದಿದ್ದಾರೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ವೃದ್ದನ ಕಾಲರ್ ಹಿಡಿದು ಮಾರುದ್ಧ ದೂರ ಎಳೆದುಕೊಂಡು ಹೋಗಿ ಮರದ ಕೋಲಿನಿಂದ ಹೊಡೆಯುತ್ತಿರುವುದು ಜೊತೆಗೆ ತಾಯಿ ಸಮಾನಾದ ವೃದ್ದೆಗೆ ಕಾಲಿನಿಂದ ಒದೆಯುವ ದೃಶ್ಯ ಕೂಡ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ತನ್ನ ತಂದೆ-ತಾಯಿ ಸಮಾನವಾದ ದಂಪತಿಗೆ ಪಾದ್ರಿ ನೆಲ್ಸನ್ ರವರು ತೋರಿದ ಅತಿರೇಕದ ವರ್ತನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಪಾದ್ರಿ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಧರ್ಮ ಗುರು ಮೇಲೆ ಈ ಹಿಂದೆ ಕೂಡ ದೂರು ದಾಖಲಾಗಿದೆ ಎಂದು ಹೇಳಲಾಗಿದೆ. ದೇವರ ಧೂತರೆಂದೇ ಹೇಳಲಾಗುತ್ತಿರುವ ಈ ಚರ್ಚ್ ಪಾದ್ರಿಗಳೇ ಈ ರೀತಿಯ ಅತಿರೇಖದ ವರ್ತನೆ ತೋರಿದರೆ ಇನ್ನು ಜನಸಾಮಾನ್ಯ ಜನರ ಗತಿಯೇನು ಎಂದು ಜನರಾಡಿಕೊಳ್ಳುತ್ತಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English